200ಮೀ ಬೋಲ್ಟ್ 'ಹ್ಯಾಟ್ರಿಕ್' : ಬೀಜಿಂಗ್, ಲಂಡನ್ ಈಗ ರಿಯೋ

Posted By:
Subscribe to Oneindia Kannada

ರಿಯೋ ಡಿ ಜನೈರೋ, ಆಗಸ್ಟ್ 19: ಜಗದೇಕ ಓಟಗಾರ ಜಮೈಕಾದ ಉಸೇನ್ ಬೋಲ್ಟ್ ಅವರು ಶುಕ್ರವಾರ ಬೆಳಗ್ಗೆ 200 ಮೀಟರ್ಸ್ ಫೈನಲ್ ನಲ್ಲಿ ಚಿನ್ನ ಗೆದ್ದು ಅಭೂತಪೂರ್ವ ಸಾಧನೆ ಮಾಡಿದ್ದಾರೆ. ರಿಯೋ ಒಲಿಂಪಿಕ್ಸ್ 2016 ರಲ್ಲಿ 200 ಮೀಟರ್ ಗೆಲ್ಲುವ ಮೂಲಕ ಸತತ ಮೂರು ಬಾರಿ ಒಲಿಂಪಿಕ್ಸ್ ಚಿನ್ನ ಗೆದ್ದ ವಿಶಿಷ್ಟ ಸಾಧನೆ ಮಾಡಿದ್ದಾರೆ.

2008ರ ಬೀಜಿಂಗ್, 2012ರ ಲಂಡನ್ ಹಾಗೂ 2016ರ ರಿಯೋ ಒಲಿಂಪಿಕ್ಸ್ ನಲ್ಲಿ ಸತತವಾಗಿ 100 ಮೀಟರ್ ಹಾಗೂ 200 ಮೀಟರ್ಸ್ ಚಿನ್ನ ಗೆಲ್ಲುವ ಮೂಲಕ ಡಬ್ಬಲ್ ಹ್ಯಾಟ್ರಿಕ್ ಸಾಧಿಸಿದ್ದಾರೆ. [ಉಸೇನ್ ಬೋಲ್ಟ್ ಶರವೇಗದ ರಹಸ್ಯ ಕುತೂಹಲಕಾರಿ]

Rio Olympics: Usain Bolt does it again, wins 200m gold to complete a hat-trick

ಆಗಸ್ಟ್ 15 ರಂದು 100 ಮೀಟರ್ಸ್ ನಲ್ಲಿ ಚಿನ್ನ ಗೆದ್ದಿದ್ದ ಬೋಲ್ಟ್, ಶುಕ್ರವಾರದಂದು 19.78 ಸೆಕೆಂಡುಗಳಲ್ಲಿ ಸುಲಭವಾಗಿ 200ಮೀ ಪೂರೈಸಿದರು.[ಒಲಿಂಪಿಕ್ಸ್ ನಂತರ ಉಸೇನ್ ಬೋಲ್ಟ್ ಓಟ ಸ್ಥಗಿತ]

29 ವರ್ಷ ವಯಸ್ಸಿನ ಬೋಲ್ಟ್ ಅವರು ಶನಿವಾರ ಮತ್ತೊಮ್ಮೆ ಟ್ರ್ಯಾಕ್ ಗೆ ಇಳಿಯಲಿದ್ದು, ಜಮೈಕಾ ತಂಡದ 4X100 ರಿಲೇಯಲ್ಲಿ ಪಾಲ್ಗೊಳ್ಳಲಿದ್ದಾರೆ. ಇದನ್ನು ಗೆದ್ದರೆ ಮೂರು ಹ್ಯಾಟ್ರಿಕ್ ಸಾಧಿಸಿದ ಏಕೈಕ ಓಟಗಾರ ಎನಿಸಿಕೊಳ್ಳುತ್ತಾರೆ. ಸದ್ಯ ಎಲ್ಲಾ ಒಲಿಂಪಿಕ್ಸ್ ಸೇರಿ 8 ಚಿನ್ನದ ಪದಕ ಕೊರಳಿಗೇರಿಸಿಕೊಂಡಿದ್ದಾರೆ.[ಮಿಂಚಿನ ಓಟಗಾರ ಬೋಲ್ಟ್ ಗೆ 100 ಮೀಟರ್ ಓಟದಲ್ಲಿ ಚಿನ್ನ]

ಬೀಜಿಂಗ್, ಲಂಡನ್ ನಲ್ಲಿ ಬೋಲ್ಟ್ ಅವರು ಮೂರು ಸ್ಪ್ರಿಂಟ್ ಚಿನ್ನ -100ಮೀ, 200ಮೀ ಹಾಗೂ 4x100ಮೀ ರಿಲೇಯಲ್ಲಿ ಚಿನ್ನ ಗೆದ್ದಿದ್ದರು. ರಿಯೋದಲ್ಲಿ ಎರಡು ಚಿನ್ನ ಗೆದ್ದಿದ್ದು ಈಗ ಶನಿವಾರ(ಆಗಸ್ಟ್ 20) 4X100 ರಿಲೇಯಲ್ಲಿ ಮೂರನೇ ಚಿನ್ನದ ಬೇಟೆಯಾಡಲಿದ್ದಾರೆ.

ರಿಯೋದಲ್ಲಿ ಟ್ರ್ಯಾಕ್ ಇವೆಂಟ್ ಗಳು ಆರಂಭಕ್ಕೂ ಮುನ್ನ 'ಇದು ನನ್ನ ಕೊನೆಯ ಒಲಿಂಪಿಕ್ಸ್, ನನ್ನ ಪ್ರತಿಭೆ ಪ್ರದರ್ಶನಕ್ಕೆ ಎಲ್ಲಾ ಒಲಿಂಪಿಕ್ಸ್ ಉತ್ತಮ ವೇದಿಕೆ ಒದಗಿಸಿತ್ತು.[ರಿಯೋ 2016: ಚಿನ್ನದ ಪದಕಕ್ಕಾಗಿ ಹೀಗೂ ಮಾಡ್ತಾರೆ]

ಆದರೆ, ಅನೇಕ ಅಭಿಮಾನಿಗಳು ನನ್ನಿಂದ ಇನ್ನೂ ಹೆಚ್ಚಿನದ್ದನ್ನು ನಿರೀಕ್ಷಿಸಿದ್ದಾರೆ. ಅದರಲ್ಲೂ ಈ 200 ಮೀಟರ್ ನಲ್ಲಿ 19.19 ಸೆಕೆಂಡುಗಳ ದಾಖಲೆಯನ್ನು ಮುರಿಯುವುದು ನನ್ನ ಸದ್ಯದ ಗುರಿ ಎಂದಿದ್ದರು. ತಾವೇ ಸ್ಥಾಪಿಸಿದ ವಿಶ್ವದಾಖಲೆ ಮುರಿಯದಿದ್ದರೂ ಚಿನ್ನದ ಪದಕ ಕೊರಳಿಗೇರಿದೆ.(ಒನ್ ಇಂಡಿಯಾ ಸುದ್ದಿ)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The greatest sprinter of all time - Usain Bolt won the 200 metres final to add to his 100m title at the Rio Olympics 2016 here today (August 19)
Please Wait while comments are loading...