ಬೆಳ್ಳಿ ತಾರೆ ಸಿಂಧುಗೆ ಅಖಂಡ ಆಂಧ್ರದಿಂದ ಭರ್ಜರಿ ಗಿಫ್ಟ್

By: ಕ್ರೀಡಾ ಡೆಸ್ಕ್
Subscribe to Oneindia Kannada

ರಿಯೋ ಡಿ ಜನೈರೋ ಆಗಸ್ಟ್.22: ರಿಯೋ ಒಲಿಂಪಿಕ್ ನಲ್ಲಿ ಬೆಳ್ಳಿ ಗೆದ್ದು ಇತಿಹಾಸ ನಿರ್ಮಿಸಿದ ಪಿವಿ ಸಿಂಧುವಿಗೆ ಬಹುಮಾನದ ಸುರಿಮಳೆಯೇ ಸುರಿದಿದೆ. ತವರು ಸರ್ಕಾರ ತೆಲಂಗಾಣ ಸೇರಿದಂತೆ ಪಕ್ಕದ ಆಂಧ್ರ ಪ್ರದೇಶ ಸರ್ಕಾರ ಸಿಂಧುಗೆ ಕೋಟಿ-ಕೋಟಿ ಬಹುಮಾನ ಘೋಷಿಸಿದೆ.

ರಿಯೋ ಒಲಿಂಪಿಕ್ಸ್ 2016 : ಗ್ಯಾಲರಿ || ವಿಶೇಷ ಪುಟ

ಪದಕದ ನಿರಾಶೆ ಅನುಭವಿಸುತ್ತಿದ್ದ ಭಾರತಕ್ಕೆ ಮೊದಲ ಬೆಳ್ಳಿ ಪದಕ ತಂದು ಕೊಟ್ಟ ಸಿಂಧುಗೆ ಅಭಿನಂದನೆಗಳ ಮಹಾಪೂರವೇ ಹರಿದು ಬಂದಿದ್ದು, ವಿವಿಧ ರಾಜ್ಯಗಳು, ಸಂಸ್ಥೆಗಳು ಸಿಂಧುಗೆ ಉಡುಗೊರೆಯನ್ನು ನೀಡಿವೆ. [ಪಿವಿ ಸಿಂಧುಗೆ ಬಿಎಂಡಬ್ಲೂ ಕಾರ್ ಗಿಫ್ಟ್]

Rio Olympics: Telangana announces Rs 5 crore award for PV Sindhu

ಹೈದರಾಬಾದ್ ಮೂಲದ ಸಿಂಧುಗೆ ತವರು ಸರ್ಕಾರ ತೆಲಂಗಾಣ ಸಿಂಧುಗೆ 5 ಕೋಟಿ ನಗದು ಬಹುಮಾನ ಜೊತೆಗೆ ಹೈದರಾಬಾದ್ ನಲ್ಲಿ 1000 ಚದರ ಅಡಿ ಅಳತೆಯ ಜಾಗ ಮತ್ತು ಸರ್ಕಾರಿ ಉದ್ಯೋಗ ನೀಡಲಾಗುವುದು ಎಂದು ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಘೋಷಣೆ ಮಾಡಿದ್ದಾರೆ, ಇನ್ನು ಆಂಧ್ರ ಪ್ರದೇಶ ಸರ್ಕಾರ ಸಹ 3 ಕೋಟಿ ರು ನೀಡುವುದಾಗಿ ಹೇಳಿದೆ.

ದೆಹಲಿಯ ಸರಕಾರವು 2 ಕೋಟಿ ನೀಡುವುದಾಗಿ ತಿಳಿಸಿದೆ. ಇದರೊಂದಿಗೆ ಭಾರತ್ ಪೆಟ್ರೋಲಿಯಂ ಕಾರ್ಪೋರೆಷನ್ ಲಿಮಿಟೆಡ್ 75 ಲಕ್ಷ ರೂ. ಬಹುಮಾನ ನೀಡಲಿದೆ. ಇದಲ್ಲದೇ ಬ್ಯಾಡ್ಮಿಂಟನ್ ಆಸೋಷಿಯೇಷನ್ ಆಫ್ ಇಂಡಿಯಾ 50 ಲಕ್ಷ, ಹರಿಯಾಣ ಸರಕಾರ ಮತ್ತು ಮಧ್ಯಪ್ರದೇಶ ಸರಕಾರ ಹಾಗೂ ಕ್ರೀಡಾ ಸಚಿವಾಲಯವೂ ತಲಾ 50 ಲಕ್ಷ ಬಹುಮಾನವನ್ನು ನೀಡಲಿವೆ.

ಇದರೊಂದಿಗೆ ಭಾರತೀಯ ಒಲಂಪಿಕ್ಸ್ ಸಂಸ್ಥೆ ಸಹ 30 ಲಕ್ಷ ಹಣ ನೀಡುವುದಾಗಿ ಘೋಷಿಸಿದೆ. ಇಷ್ಟಲ್ಲದೆ ಇನ್ನೂ ಅನೇಕ ಉಧ್ಯಮಿಗಳು, ಸಂಶ್ಥೆಗಳು ಸಹ ಬಹುಮಾನಗಳನ್ನು ಘೋಷಿಸಿವೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Telangana Chief Minister K Chandrasekhar Rao on Saturday (August 20) announced a cash award of Rs. 5 crore for Rio Olympics silver medallist badminton star PV Sindhu.
Please Wait while comments are loading...