10 ಸಾವಿರ ಕ್ರೀಡಾಳುಗಳಿಗೆ 4 ಲಕ್ಷ ಕಾಂಡೋಮ್ಸ್

Posted By:
Subscribe to Oneindia Kannada

ರಿಯೋ, ಮೇ 23: ಫುಟ್ಬಾಲ್ ವಿಶ್ವಕಪ್ ಇರಲಿ, ಒಲಿಂಪಿಕ್ಸ್ ಇರಲಿ ಕ್ರೀಡಾಪಟುಗಳ ದಾಹ ತಣಿಸಲು ಆಯೋಜಕರು ಎಲ್ಲಾ ರೀತಿಯಿಂದ ಸಜ್ಜಾಗಿರುತ್ತದೆ. ಸುರಕ್ಷಿತ ಲೈಂಗಿಕತೆಗೆ ಪ್ರಚಾರದ ಜೊತೆಗೆ ಕಾಂಡೋಮ್ ವಿತರಣೆ ಹೊಣೆ ಒಲಿಂಪಿಕ್ಸ್ ಸಮಿತಿ ಮೇಲೆ ಬಿದ್ದಿದೆ. ಈ ಬಾರಿಯ ರಿಯೋ ಒಲಿಂಪಿಕ್ಸ್ ನಲ್ಲಿ ಪಾಲ್ಗೊಳ್ಳಲಿರುವ 10, 500ಕ್ಕೂ ಅಧಿಕ ಕ್ರೀಡಾಳುಗಳಿಗಾಗಿ 4,50,000 ಕಾಂಡೋಮ್ ವಿತರಿಸಲು ಮುಂದಾಗಿದೆ.[ಕಾಂಡೋಮ್ ನೊಳಗೆ ಬಂಧಿಯಾದ ವಿಶ್ವಕಪ್]

ಮಹಿಳೆಯರಿಗಾಗಿ 1 ಲಕ್ಷ ವಿಶೇಷ ಕಾಂಡೋಮ್ಸ್ ಹಾಗೂ ಪುರುಷರಿಗಾಗಿ 3,50,000 ಕಾಂಡೋಮ್ಸ್ ಸರಬರಾಜಾಗಲಿವೆ. ಅದೇ ರೀತಿ ಸ್ಪರ್ಧೆಯಲ್ಲಿ ಭಾಗವಹಿಸುವ ಸ್ಪರ್ಧಾಳುಗಳಿಗೆ ಸುರಕ್ಷಿತ ಲೈಂಗಿಕತೆಗಾಗಿ ಹತ್ತು ಸಾವಿರಕ್ಕೂ ಅಧಿಕ ಕಾಂಡೋಮ್ಸ್ ನೀಡಲಾಗುತ್ತಿದೆ.[ರಷ್ಯಾದಲ್ಲಿ ವಿದೇಶಿ ಕಾಂಡೋಮ್ ಗೆ ನಿಷೇಧ]

Rio Olympics to top London in supply of condoms

ಝಿಕಾ ವೈರಸ್ ಭೀತಿ: ಒಲಿಂಪಿಕ್ಸ್ ಆಯೋಜನೆಗೆ ಕುತ್ತುಂಟು ಮಾಡಿದ್ದ ಝಿಕಾ ವೈರಸ್ ಭೀತಿ ಎದುರಾಗಿರುವುದರಿಂದ ಸುರಕ್ಷಿತ ಲೈಂಗಿಕತೆಗೆ ಹೆಚ್ಚಿನ ಒತ್ತು ನೀಡಲಾಗಿದೆ. ಸೊಳ್ಳೆ ನಿಯಂತ್ರಣಕ್ಕೆ ಒಲಿಂಪಿಕ್ಸ್ ಗ್ರಾಮದಲ್ಲಿ ಹೆಚ್ಚಿನ ಮಹತ್ವ ನೀಡಲಾಗಿದೆ. ಜುಲೈ 24 ರಿಂದ ಅಗಸ್ಟ್ 5 ರವರೆಗೆ ರಿಯೋ ಡಿ ಜನೈರೋದಲ್ಲಿ ನಡೆಯಲಿರುವ ಕ್ರೀಡಾಕೂಟಕ್ಕೆ ಸಕಲ ಸಿದ್ಧತೆಗಳು ನಡೆದಿರುವುದಾಗಿ ಸಮಿತಿ ತಿಳಿಸಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
About 450,000 condoms will be distributed during the Rio de Janeiro Olympics, three times more than for the London Games four years ago, the International Olympic Committee said.
Please Wait while comments are loading...