ವಿವಾದದಲ್ಲಿ ರಿಯೋ ಪದಕ ವಿಜೇತೆ ಪಿ.ವಿ. ಸಿಂಧು!

By: ಕ್ರೀಡಾ ಡೆಸ್ಕ್
Subscribe to Oneindia Kannada

ಬೆಂಗಳೂರು ಸೆಪ್ಟೆಂಬರ್, 03 : ರಿಯೋ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದ ಪಿ.ವಿ. ಸಿಂಧು ಮತ್ತು ಬ್ಯಾಡ್ಮಿಂಟನ್ ಆಟಗಾರ ಕಿಡಾಂಬಿ ಶ್ರೀಕಾಂತ್ ವಿವಾದವೊಂದರಲ್ಲಿ ಸಿಲುಕಿದ್ದಾರೆ. ಉಡುಗೆ ತೊಡುವ ವಿಚಾರದಲ್ಲಿ ಮಾಡಿಕೊಂಡಿದ್ದ ಒಪ್ಪಂದವನ್ನು ಉಲ್ಲಂಘಿಸಿದ್ದಾರೆ ಎಂಬುದು ಆರೋಪ.

ರಿಯೋ ಒಲಿಂಪಿಕ್ಸ್‌ನಲ್ಲಿ ಭಾರತೀಯ ಅಥ್ಲೆಟ್‌ಗಳು ಲೀ ನಿಂಗ್ ಕಂಪನಿಯ ಉಡುಗೆಗಳನ್ನು ತೊಡಬೇಕೆಂದು ಭಾರತೀಯ ಒಲಿಂಪಿಕ್ಸ್ ಸಂಸ್ಥೆಯೊಂದಿಗೆ (ಐಒಎ) ಲೀ ನಿಂಗ್ ಕಂಪನಿ ಒಪ್ಪಂದ ಮಾಡಿಕೊಂಡಿತ್ತು. ಆದರೆ, ಒಲಿಂಪಿಕ್ಸ್ ನಲ್ಲಿ ಕೆಲವು ಭಾರತೀಯ ಕೆಲ ಅಥ್ಲೆಟ್ ಗಳು ಕ್ರೀಡಾ ಪರಿಕರ ಸರಬರಾಜು ಸಂಸ್ಥೆಯಾದ ಲೀ ನಿಂಗ್ ಕಂಪನಿಯ ಉಡುಗೆ ತೊಡದೆ ನಿಯಮಗಳನ್ನು ಉಲ್ಲಂಘಿಸಿದ್ದಾರೆ.[ಎಕ್ಸಾಂನಲ್ಲಿ ಫೇಲಾದೆ, ಬಾಡ್ಮಿಂಟನ್ ನಲ್ಲಿ ಪಾಸಾದೆ]

pv sindhu

ಪಿ.ವಿ.ಸಿಂಧು ಮತ್ತು ಕಿಡಾಂಬಿ ಶ್ರೀಕಾಂತ್ ಕೆಲವು ಪಂದ್ಯಗಳಲ್ಲಿ ಯೋನೆಕ್ಸ್ ಕಂಪನಿಯ ಉಡುಗೆಗಳನ್ನು ತೊಟ್ಟಿದ್ದಾರೆ. ಇದರಿಂದ ನಿಯಮ ಉಲ್ಲಂಘನೆಯಾಗಿದೆ ಎಂಬುದು ಆರೋಪವಾಗಿದೆ.[ಪಿವಿ ಸಿಂಧು ಬೆಳ್ಳಿ ಹೆಜ್ಜೆಯ ಹಿಂದೆ ಗುರು ಗೋಪಿಚಂದ್]

'ಭಾರತೀಯ ಒಲಿಂಪಿಕ್ಸ್ ಸಂಸ್ಥೆಯೊಂದಿಗೆ 3 ಕೋಟಿ ರೂ.ಗಳಿಗೆ ಒಪ್ಪಂದ ಮಾಡಿಕೊಂಡಿದ್ದೆವು. ಆದರೆ, ಕ್ರೀಡಾಪಟುಗಳು ಒಪ್ಪಂದದ ನಿಯಮ ಉಲ್ಲಂಘಿಸಿದ್ದಾರೆ' ಎಂದು ಲೀ ನಿಂಗ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಮಹೇಂದರ್ ಕಪೂರ್ ಆರೋಪಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Rio Olympics silver medalist PV Sindhu finds herself in the midst of a controversy over her apparel at the games.
Please Wait while comments are loading...