ಬಾಡ್ಮಿಂಟನ್ ಸೆಮೀಸ್ : ಪಿವಿ ಸಿಂಧು ಪಂದ್ಯದ ವೇಳೆ ಬದಲು

Posted By:
Subscribe to Oneindia Kannada

ರಿಯೋ ಡಿ ಜನೈರೊ, ಆಗಸ್ಟ್ 17: ಭಾರತದ ಹೆಮ್ಮೆಯ ಮಹಿಳಾ ಬಾಡ್ಮಿಂಟನ್ ತಾರೆ ಪಿವಿ ಸಿಂಧು ಅವರು ಇನ್ನೊಂದು ಗೆಲುವು ಸಾಧಿಸಿದರೆ ಹೊಸ ಇತಿಹಾಸ ರಚನೆಯಾಗುತ್ತದೆ. ಪಿವಿ ಸಿಂಧು ಪಂದ್ಯದ ವೇಳೆ ಬದಲಾಗಿದೆ. ವಿವರ ಸ್ಲೈಡ್ ನಲ್ಲಿ ಲಭ್ಯವಿದೆ

ರಿಯೋ ಒಲಿಂಪಿಕ್ಸ್ 2016 : ಗ್ಯಾಲರಿ || ವಿಶೇಷ ಪುಟ

ರಿಯೋ ಒಲಿಂಪಿಕ್ಸ್ 2016ರಲ್ಲಿ ಭಾರತಕ್ಕೆ ಪದಕ ಗೆಲ್ಲುವ ಆಸೆ ಹುಟ್ಟಿಸಿರುವ ಸಿಂಧು ಅವರ ಸೆಮೀಸ್ ಪಂದ್ಯ ಯಾವಾಗ ನಡೆಯಲಿದೆ? ಎದುರಾಳಿ ಯಾರು? ಲೈವ್ ಎಲ್ಲಿ ನೋಡಬಹುದು? ಇನ್ನಿತರ ವಿವರ ಇಲ್ಲಿದೆ. [ಪಿವಿ ಸಿಂಧು ಸೆಮೀಸ್ ಪ್ರವೇಶ]

ಮಹಿಳಾ ಬ್ಯಾಡ್ಮಿಂಟನ್ ಸಿಂಗಲ್ಸ್ ವಿಭಾಗದಲ್ಲಿ ಬುಧವಾರ ಬೆಳಗ್ಗೆ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ವಿಶ್ವದ ನಂ.2 ಆಟಗಾರ್ತಿ ವಾಂಗ್ ಯಿಹಾನ್ ಅವರನ್ನು ಸೋಲಿಸಿದ 21 ವರ್ಷ ವಯಸ್ಸಿನ ಸಿಂಧು, ಉಪಾಂತ್ಯಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಈ ಮೂಲಕ ಭಾರತಕ್ಕೆ ಪದಕ ಗೆಲ್ಲುವ ಆಸೆ ಜೀವಂತ ಇರಿಸಿದ್ದಾರೆ. [ಪದಕ ಗಳಿಸಿದರೆ ಭಾರತ ಕ್ರೀಡಾಳುಗಳಿಗೆ ಭರ್ಜರಿ ಗಿಫ್ಟ್]

ರಿಯೋ ಒಲಿಂಪಿಕ್ಸ್ ನಲ್ಲಿ ಮಹಿಳಾ ಸಿಂಗಲ್ಸ್ ಬಾಡ್ಮಿಂಟನ್ ರೋಚಕ ಪಂದ್ಯದಲ್ಲಿ ಸಿಂಧು ಅವರು 22-20,21-19 ರ ಅಂತರದಲ್ಲಿ ಚೀನಾದ ವಾಂಗ್ ಯಿಹಾನ್ ವಿರುದ್ಧ ಜಯ ಗಳಿಸಿದರು. [10 ಕ್ರೀಡಾಪಟುಗಳಿಗೆ ರಿಯೋ 2016 ಅವಿಸ್ಮರಣೀಯ]

20012ರ ಲಂಡನ್ ಒಲಿಂಪಿಕ್ಸ್ ನಲ್ಲಿ ಸೈನಾ ನೆಹ್ವಾಲ್ ಅವರ ನಂತರ ಸೆಮೀಸ್ ಹಂತ ಪ್ರವೇಶಿಸಿದ ಎರಡನೇ ಮಹಿಳಾ ಬಾಡ್ಮಿಂಟನ್ ತಾರೆ ಎಂಬ ಹೆಗ್ಗಳಿಕೆಗೆ ಸಿಂಧು ಪಾತ್ರರಾಗಿದ್ದಾರೆ. 10 ನೇ ಸೀಡ್ ನ ಸಿಂಧು ವಿರುದ್ಧ ಇಲ್ಲಿ ತನಕ 1-3ರ ಬಲಾಬಲ ಹೊಂದಿರುವ ಜಪಾನಿನ ನೊಜೊಮಿ ಅವರು ಸಹಜವಾಗಿ ಮೇಲುಗೈ ಸಾಧಿಸುವ ಸಾಧ್ಯತೆಯಿದೆ.

ಸಿಂಧು ಸೆಮಿಫೈನಲ್ ಪಂದ್ಯ ಯಾವಾಗ?

ಸಿಂಧು ಸೆಮಿಫೈನಲ್ ಪಂದ್ಯ ಯಾವಾಗ?

ಆಗಸ್ಟ್ 18ರ ಗುರುವಾರ ಮೊದಲ ಸೆಮಿಫೈನಲ್ 5PM ಗೆ ಶುರುವಾಗಲಿದ್ದು, ವಿಶ್ವದ ನಂ.1 ಸ್ಪೇನಿನ ಕರೋಲಿನಾ ಮರೀನ್ ಹಾಗೂ ವಿಶ್ವದ ನಂ.3 ಚೀನಾದ ಲಿ ಕ್ಸುರೆಯಿ ವಿರುದ್ಧ ನಡೆಯಲಿದೆ.
* 5.30 PM IST ಗೆ ಪಿವಿ ಸಿಂಧು ಪಂದ್ಯ ಆರಂಭಗೊಳ್ಳಬೇಕಿತ್ತು. ಆದರೆ, ವೇಳೆ ಬದಲಾಯಿಸಲಾಗಿದ್ದು 7.30PM ಗೆ ಪಂದ್ಯ ನಡೆಯಲಿದೆ.

ಭಾರತಕ್ಕೆ ಪದಕ ಗೆಲ್ಲುವ ಆಸೆ ಜೀವಂತ

ಭಾರತಕ್ಕೆ ಪದಕ ಗೆಲ್ಲುವ ಆಸೆ ಜೀವಂತ

ಮಹಿಳಾ ಬ್ಯಾಡ್ಮಿಂಟನ್ ಸಿಂಗಲ್ಸ್ ವಿಭಾಗದಲ್ಲಿ ಬುಧವಾರ ಬೆಳಗ್ಗೆ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ವಿಶ್ವದ ನಂ.2 ಆಟಗಾರ್ತಿ ವಾಂಗ್ ಯಿಹಾನ್ ಅವರನ್ನು ಸೋಲಿಸಿದ 21 ವರ್ಷ ವಯಸ್ಸಿನ ಸಿಂಧು, ಉಪಾಂತ್ಯಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಈ ಮೂಲಕ ಭಾರತಕ್ಕೆ ಪದಕ ಗೆಲ್ಲುವ ಆಸೆ ಜೀವಂತ ಇರಿಸಿದ್ದಾರೆ.

ಯಾವ ಚಾನೆಲ್ ನಲ್ಲಿ ಪ್ರಸಾರವಾಗಲಿದೆ?

ಯಾವ ಚಾನೆಲ್ ನಲ್ಲಿ ಪ್ರಸಾರವಾಗಲಿದೆ?

ಸ್ಟಾರ್ ಸ್ಫೋರ್ಟ್ಸ್ ನೆಟ್ವರ್ಕ್ ನಲ್ಲಿ ನೇರ ಪ್ರಸಾರ ನೋಡಬಹುದು. ಜತೆಗೆ ಹಾಟ್ ಸ್ಟಾರ್ ಮೊಬೈಲ್ ಅಪ್ಲಿಕೇಷನ್ ನಲ್ಲೂ ಲಭ್ಯವಿರುತ್ತದೆ.

ಇದಕ್ಕೂ ಮುನ್ನ ಚೀನಾ ಆಟಗಾರ್ತಿ ತೈಪೆಯ ತಾಯ್ ಝುೂ ಯಿಂಗ್ ವಿರುದ್ಧ 21-13, 21-15 ಅಂತರದಲ್ಲಿ ಸೋಲಿಸಿದ ಸಿಂಧು ಅವರು ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದರು.

ಸಿಂಧು-ನೊಜೊಮಿ ಮುಖಾ ಮುಖಿ ವಿವರ

ಸಿಂಧು-ನೊಜೊಮಿ ಮುಖಾ ಮುಖಿ ವಿವರ

* ಫೆಬ್ರವರಿ 18, 2016(ಏಷ್ಯಾ ಟೀಂ ಚಾಂಪಿಯನ್ ಶಿಪ್ಸ್)
ನೊಜೊಮಿಗೆ ಗೆಲುವು 18-21, 21-12, 21-12
* ಜನವರಿ 17, 2015(ಮಲೇಶಿಯಾ ಮಾಸ್ಟರ್ಸ್)
ನೊಜೊಮಿಗೆ ಗೆಲುವು 19-21, 21-13, 21-08
* ನವೆಂಬರ್ 20, 2014 (ಹಾಂಗ್ ಕಾಂಗ್ ಓಪನ್)
ನೊಜೊಮಿಗೆ ಗೆಲುವು 21-17, 13-12, 21-11

* ಜುಲೈ 07, 2012(ಏಷ್ಯಾ ಯೂಥ್ ಅಂಡರ್ 19 ಚಾಂಪಿಯನ್ ಶಿಪ್ಸ್)
ಸಿಂಧುಗೆ ಗೆಲುವು 18-21,21-17,22-20

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
India's PV Sindhu is one win away from creating history in badminton at Rio Olympics 2016.Rio Olympics: PV Sindhu's semi-final start time in IST, opponent name, TV channel information
Please Wait while comments are loading...