ಸಿಂಧು-ಮರೀನ್ ಫೈನಲ್ ಪಂದ್ಯದ ವೇಳೆ ಬದಲು? ಯಾವಾಗ?

Posted By:
Subscribe to Oneindia Kannada

ರಿಯೋ ಡಿ ಜನೈರೋ, ಆಗಸ್ಟ್ 18: ಭಾರತದ ಬಾಡ್ಮಿಂಟನ್ ತಾರೆ ಪಿವಿ ಸಿಂಧು ಅವರು ಗುರುವಾರ(ಆಗಸ್ಟ್ 18) ಹೊಸ ಇತಿಹಾಸ ರಚಿಸಿದ್ದಾರೆ. ರಿಯೋ ಒಲಿಂಪಿಕ್ಸ್ 2016ರ ಮಹಿಳಾ ಸಿಂಗಲ್ಸ್ ಬಾಡ್ಮಿಂಟನ್ಸ್ ಫೈನಲ್ ತಲುಪಿದ್ದಾರೆ. ಫೈನಲ್ ಪಂದ್ಯ ಯಾವಾಗ? ಇಲ್ಲಿದೆ ಮಾಹಿತಿ...

ರಿಯೋ ಒಲಿಂಪಿಕ್ಸ್ 2016 : ಗ್ಯಾಲರಿ || ವಿಶೇಷ ಪುಟ

ಸೆಮಿಫೈನಲ್ ಪಂದ್ಯದಲ್ಲಿ ಜಪಾನ್ ನ ನೊಜೊಮಿ ಒಕುಹರಾ ಅವರನ್ನು 21-19, 21-10ರಲ್ಲಿ ಸೋಲಿಸಿದರು. 21 ವರ್ಷ ವಯಸ್ಸಿನ ಹೈದರಾಬಾದಿನ ಪುಸರ್ಲಾ ವೆಂಕಟ ಸಿಂಧು ಅವರು ಈಗ ಅಂತಿಮ ಹಣಾಹಣಿಯಲ್ಲಿ ವಿಶ್ವದ ನಂ.1 ಸ್ಪೇನಿನ ಕರೋಲಿನಾ ಮರಿನ್ ಅವರನ್ನು ಶುಕ್ರವಾರ (ಆಗಸ್ಟ್ 19) ಎದುರಿಸಲಿದ್ದಾರೆ. [ಕೋಟ್ಯಂತರ ಜನರ ಅಭಿಲಾಷೆ ಹೊತ್ತು ಸಿಂಧು ಫೈನಲ್‌ ಗೆ ಲಗ್ಗೆ]

Rio Olympics: PV Sindhu's FINAL start time in IST, opponent name, TV channel information

ಇದೇ ಮೊದಲು: ಇಲ್ಲಿ ತನಕ ಒಲಿಂಪಿಕ್ಸ್ ಇತಿಹಾಸದಲ್ಲಿ ಯಾವೊಬ್ಬ ಬಾಡ್ಮಿಂಟನ್ ಪಟು ಕೂಡಾ ಫೈನಲ್ ಹಂತ ತಲುಪಿರಲಿಲ್ಲ ಈ ಮಹತ್ ಸಾಧನೆ ಪಿವಿ ಸಿಂಧು ಅವರ ಹೆಸರಿಗೆ ಸೇರಿಕೊಂಡಿದೆ. [ಪದಕ ವಿಜೇತರು: ಲಿಯಾಂಡರ್ ನಿಂದ ಸಾಕ್ಷಿ ತನಕ]

ರಿಯೋ ಸೆಂಟರ್ ಪೆವಿಲಿಯನ್ ನಲ್ಲಿ ನಡೆದ ಹಣಾಹಣಿಯಲ್ಲಿ ಆರಂಭದಿಂದಲೇ ಮೇಲುಗೈ ಸಾಧಿಸಿದ ಸಿಂಧು ತಮ್ಮ ಪದಕ ಬೇಟೆ ಮುಂದುವರೆಸಿದ್ದಾರೆ. [ಐತಿಹಾಸಿಕ ಸಾಧನೆ ಮಾಡಿದ ಸಾಕ್ಷಿ ಮಲಿಕ್ ಯಾರು?]

ಯಾವಾಗ ಫೈನಲ್ ಪಂದ್ಯ?:
* ಸಿಂಧು vs ಮರೀನ್, ಚಿನ್ನದ ಪದಕಕ್ಕಾಗಿ ಹಣಾಹಣಿ, ಶುಕ್ರವಾರ (ಆಗಸ್ಟ್ 19),6.55 PM IST. ಈ ಮುಂಚೆ 7.30 PM ISTಕ್ಕೆ ಪಂದ್ಯ ನಿಗದಿಯಾಗಿತ್ತು.

ಟಿವಿ ಚಾನೆಲ್

* ಸ್ಟಾರ್ ಸ್ಫೋರ್ಟ್ ನೆಟ್ವರ್ಕ್ ನಲ್ಲಿ ನೇರ ಪ್ರಸಾರ ನೋಡಬಹುದು. ಇದಲ್ಲದೆ ಹಾಟ್ ಸ್ಟಾರ್ ಮೊಬೈಲ್ ಅಪ್ಲಿಕೇಷನ್ ನಲ್ಲೂ ನೇರ ಪ್ರಸಾರ ವೀಕ್ಷಿಸಬಹುದು.

2012ರ ಲಂಡನ್ ಒಲಿಂಪಿಕ್ಸ್ ನಲ್ಲಿ ಸೈನಾ ನೆಹ್ವಾಲ್ ಅವರ ನಂತರ ಸೆಮೀಸ್ ಹಂತ ಪ್ರವೇಶಿಸಿದ ಎರಡನೇ ಮಹಿಳಾ ಬಾಡ್ಮಿಂಟನ್ ತಾರೆ ಎಂಬ ಹೆಗ್ಗಳಿಕೆಗೆ ಸಿಂಧು ಪಾತ್ರರಾಗಿದ್ದರು.

10 ನೇ ಸೀಡ್ ನ ಸಿಂಧು ಅವರು ಈಗಾಗಲೇ ವಿಶ್ವದ ನಂ.2 ಆಟಗಾರ್ತಿ ವಾಂಗ್ ಯಿಹಾನ್ ರನ್ನು ಸೋಲಿಸಿದ್ದಾರೆ. ಈಗ ವಿಶ್ವದ ನಂ.1 ಆಟಗಾರ್ತಿ ಮರೀನ್ ಗೆ ಸವಾಲು ಹಾಕಲು ಸಿದ್ಧರಾಗಿದ್ದಾರೆ.
(ಒನ್ಇಂಡಿಯಾ ಸುದ್ದಿ)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
India's PV Sindhu today (August 18) created history by reaching the women's singles badminton final at Rio Olympics 2016.
Please Wait while comments are loading...