ಭಾರತದ ಬೆಳ್ಳಿ ಸಿಂಧುಗೆ ಕಡೆಗೆ ಹರಿದು ಬಂದ ಗಿಫ್ಟ್ ಗಳ ರಾಶಿ

By: ಕ್ರೀಡಾ ಡೆಸ್ಕ್
Subscribe to Oneindia Kannada

ರಿಯೋ ಡಿ ಜನೈರೋ, ಆಗಸ್ಟ್ 20: ದೇಶದ ಮೂಲೆ-ಮೂಲೆಗಳಿಂದ ಹಲವು ಉದ್ಯಮಿಗಳು, ಕಂಪನಿಗಳು, ಅಸೋಸಿಯೇಷನ್ಸ್, ಚಿತ್ರನಟರು, ಸೇರಿದಂತೆ ಇನ್ನು ಹಲವರು ಸಿಂಧೂರ ಸಿಂಧುವಿಗೆ ಭರ್ಜರಿ ಬಹುಮಾನಗಳನ್ನು ಘೋಷಣೆ ಮಾಡಿದ್ದಾರೆ. ಬಂದಿರುವ ಗಿಫ್ಟ್ ಗಳನ್ನು ಕೇಳಿದರೆ ನೀವು ಬಾಯಿ ಮೇಲೆ ಬೆರಳಿಡುವುದರಂತೂ ಸತ್ಯ. ಈ ಬಹುಮಾನಗಳಲ್ಲಿ ಅಧಿಕೃತವಾಗಿ ಘೋಷಣೆಯಾದವುಗಳನ್ನು ನಿಮ್ಮ ಮುಂದೆ ಇಡುತ್ತಿದ್ದೇವೆ ನೋಡಿ.

ರಿಯೋ ಒಲಿಂಪಿಕ್ಸ್ 2016 : ಗ್ಯಾಲರಿ || ವಿಶೇಷ ಪುಟ

ರಿಯೋನಲ್ಲಿ ಭಾರತದ ಕೀರ್ತಿ ಪತಾಕೆ ಹಾರಿಸಿರುವ ಭಾರತದ ಬೆಳ್ಳಿ ಪಿವಿ ಸಿಂಧು ಅವರನ್ನು ಅದ್ಧೂರಿಯಾಗಿ ಸ್ವಾಗತಿಸಲು ಆಂಧ್ರಪ್ರದೇಶ, ತೆಲಂಗಾಣ ಸರ್ಕಾರ ನಿರ್ಧರಿಸಿದೆ. ಇನ್ನು ಹುಟ್ಟೂರಾದ ಹೈದ್ರಬಾದ್ ಸೇರಿದಂತೆ ವಿಜಯವಾಡ, ವಿಶಾಖ ಪಟ್ಟಣಂ, ಉಧ್ಯಮಿಗಳು, ಜ್ಯೂವೆಲರಿ ಶೋರಂನ ಮ್ಯಾನೆಜರ್ ಗಳು ಹಾಗು ಗಣ್ಯಾತಿ ಗಣ್ಯರು ಸ್ವಾಗತಿಸುವ ಜೊತೆಗೆ ಭರ್ಜರಿ ಗಿಫ್ಟ್ ಗಳನ್ನು ನೀಡಲು ತುದಿಗಾಲಲ್ಲಿ ನಿಂತಿದ್ದಾರೆ. [ಸಾಕ್ಷಿಗೆ 3.5 ಕೋಟಿ ರು ಗೂ ಅಧಿಕ ಬಹುಮಾನ]

ಇನ್ನು ತವರು ಸರ್ಕಾರ ಆಂಧ್ರಪ್ರದೇಶ ಈವರೆಗೆ ಯಾವುದೇ ಬಹುಮಾನ ಘೋಷಣೆ ಮಾಡಿಲ್ಲ. ವಿಶೇಷ ಬಹುಮಾನ ಏನು ನೀಡಬೇಕು ಯೋಚಿಸುತ್ತಿದೆ. ರಿಯೋ ಒಲಿಂಪಿಕ್ಸ್ ನಲ್ಲಿ ಭಾರತಕ್ಕೆ ಬೆಳ್ಳಿ ಪದಕ ಗೆದ ಬ್ಯಾಡ್ಮಿಂಟನ್ ತಾರೆ ವಿವಿ ಸಿಂಧು ಅವರು ಭಾರತೀಯ ಕೋಟ್ಯಂತರ ಜನರ ಹೃದಯ ಗೆದ್ದಿದ್ದಾರೆ. ಜೊತೆಗೆ ಪದಕ ಗೆದ್ದ ಭಾರತದ ಬೆಳ್ಳಿ ವಿಪಿ ಸಿಂಧುಗೆ ಬಹುಮಾನಗಳ ಮಹಾ ಸಾಗರವೇ ಹರಿದು ಬರುತ್ತಿದೆ.

ಕೇಂದ್ರ ಸರ್ಕಾರದಿಂದ ಭರ್ಜರಿ ಬಹುಮಾನ

ಕೇಂದ್ರ ಸರ್ಕಾರದಿಂದ ಭರ್ಜರಿ ಬಹುಮಾನ

ರಿಯೋದಲ್ಲಿ ಬೆಳ್ಳಿ ಪದಕ ಗೆಲ್ಲುವ ಮೂಲಕ ಸಿಂಧು ಈ ಬಾರಿಯ ಖೇಲ್ ರತ್ನ ಪ್ರಶಸ್ತಿ ಲಭಿಸುವ ಭರವಸೆ ಇದೆ. ಒಲಿಂಪಿಕ್ಸ್ ನಲ್ಲಿ ಪದಕ ವಿಜೇತರಾದ ಎಲ್ಲ ಕ್ರೀಡಾ ಪಟುಗಳಿಗೆ ಖೇಲ್ ರತ್ನ ನೀಡುವುದಾಗಿ ಕೇಂದ್ರ ಸರ್ಕಾರ ಮೊದಲೇ ಘೋಷಿಸಿತ್ತು.

ಮಹಿಂದ್ರಾದ ಚೇರ್ಮನ್ ಗಿಫ್ಟ್ ಏನು?

ಮಹಿಂದ್ರಾದ ಚೇರ್ಮನ್ ಗಿಫ್ಟ್ ಏನು?

ದೇಶದ ಪ್ರಖ್ಯಾತ ಕಾರು ಕಂಪನಿ ಮಹಿಂದ್ರಾದ ಚೇರ್ಮನ್ ಹಾಗೂ ವ್ಯವಸ್ಥಾಪಕ ನಿರ್ದೇಶಕ ಆನಂದ್ ಮಹಿಂದ್ರಾ, ಸಾಕ್ಷಿ ಹಾಗೂ ಪಿವಿ ಸಿಂಧುಗೆ ಐಷರಾಮಿ "ಎಸ್ ಯು ವಿ" ಮಹಿಂದ್ರಾ ಕಾರ್ ನ್ನು ಉಡುಗೊರೆಯಾಗಿ ನೀಡುವುದಾಗಿ ಘೋಷಿಸಿದ್ದಾರೆ.

ತೆಲಂಗಾಣ ಸರ್ಕಾರದಿಂದ

ತೆಲಂಗಾಣ ಸರ್ಕಾರದಿಂದ

ಸಿಂಧುಗೆ 1 ಕೋಟಿ ರೂಗಳ ಜೊತೆಗೆ ಲ್ಯಾಂಡ್ ನೀಡುವುದಾಗಿ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರು ಪ್ರಕಟಿಸಿದ್ದಾರೆ.

ಭಾರತೀಯ ಬ್ಯಾಡ್ಮಿಂಟನ್ ಅಸೋಶಿಯೇಷನ್

ಭಾರತೀಯ ಬ್ಯಾಡ್ಮಿಂಟನ್ ಅಸೋಶಿಯೇಷನ್

ಪಿ ವಿ ಸಿಂಧು ಅವರಿಗೆ 50 ಲಕ್ಷ ರು. ಮತ್ತು ಗೋಪಿಚಂದ್ ಅವರಿಗೆ 10ಲಕ್ಷ ರು. ನಗದು ಪುರಸ್ಕಾರವನ್ನು ನೀಡಲಾಗುವುದು ಎಂದು ಭಾರತೀಯ ಬ್ಯಾಡ್ಮಿಂಟನ್ ಅಸೋಶಿಯೇಷನ್ ಪ್ರಕಟಣೆಯಲ್ಲಿ ತಿಳಿಸಿದೆ.

ಮಧ್ಯಪ್ರದೇಶ ಸರ್ಕಾರದಿಂದ ಬಹುಮಾನ

ಮಧ್ಯಪ್ರದೇಶ ಸರ್ಕಾರದಿಂದ ಬಹುಮಾನ

ಮಧ್ಯಪ್ರದೇಶದ ಮುಖ್ಯಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಸಿಂಧುಗೆ 50 ಲಕ್ಷ ರುಗಳನ್ನು ನೀಡುವುದಾಗಿ ಹೇಳಿದ್ದಾರೆಂದು ಪಬ್ಲಿಕ್ ರಿಲೇಶನ್ ಡಿಪಾರ್ಟಮೆಂಟ್ ನ ಹಿರಿಯ ಅಧಿಕಾರಿ ತಿಳಿಸಿದ್ದಾರೆ.

ವಿಜಯವಾಡ ಜ್ಯೂವೇಲರಿ ಶೋರಂ

ವಿಜಯವಾಡ ಜ್ಯೂವೇಲರಿ ಶೋರಂ

ವಿಜವಾಡದಲ್ಲಿರುವ ಪ್ರತಿಷ್ಢಿತ ಜ್ಯೂವೇಲರಿ ಶೋರಂನ ಬ್ರಾಂಡ್ ಅಂಬಾಸೀಡರ್ ಆಗಿ ಮಾಡಲಾಗುವುದು ಮತ್ತು ಫ್ಲಾಟ್ ಗಳನ್ನು ನೀಡಲಾಗುವುದು ಎಂದು ವಿಜಯವಾಡ ಜ್ಯೂವೇಲರಿ ಅಸೋಸಿಯೇಷನ್ ಹೇಳಿದೆ.

ಬಿಎಂಡಬ್ಲೂ ಕಾರ್ ಗಿಫ್ಟ್

ಬಿಎಂಡಬ್ಲೂ ಕಾರ್ ಗಿಫ್ಟ್

ಹೈದರಾಬಾದ್ ಜಿಲ್ಲಾ ಬ್ಯಾಡ್ಮಿಂಟನ್ ಅಸೋಸಿಯೇಷನ್ ಅಧ್ಯಕ್ಷ ಉದ್ಯಮಿ ಮತ್ತು ಬ್ಯಾಟಿಂಗ್ ದಿಗ್ಗಜ ಸಚಿನ್ ತೆಂಡ್ಯೂಲ್ಕರ್ ಗೆಳೆಯ ಚಾಮುಂಡೇಶ್ವರಿನಾಥ್ ಅವರು ಪಿವಿ ಸಿಂಧು ಅವರಿಗೆ ಇದೇ ತಿಂಗಳು 28 ರಂದು 60 ಲಕ್ಷದ ಬಿಎಂಡಬ್ಲೂ ಐಷರಾಮಿ ಕಾರ್ ಗಿಫ್ಟ್ ನ್ನು ಮಾಸ್ಟರ್ ಬ್ಲಾಸ್ಟರ್ ಸಚಿನ್ ಅವರ ಕೈಯಿಂದ ನೀಡುವುದಾಗಿ ಘೋಷಿಸಿದ್ದಾರೆ.

ಆಲ್ ಇಂಡಿಯನ್ ಫುಟ್ ಬಾಲ್ ಫೆಡರೇಷನ್

ಆಲ್ ಇಂಡಿಯನ್ ಫುಟ್ ಬಾಲ್ ಫೆಡರೇಷನ್

ರಿಯೋನಲ್ಲಿ ಸಾಧನೆಗೈದ ಸಿಂಧು ಹಾಗು ಸಾಕ್ಷಿ ಅವರಿಗೆ ತಲಾ 5 ಲಕ್ಷ ರುಗಳನ್ನು ನೀಡಲಾಗುವುದು ಎಂದು ಆಲ್ ಇಂಡಿಯನ್ ಫುಟ್ ಬಾಲ್ ಫೆಡರೇಷನ್ ಪ್ರಕಟಿಸಿದೆ.

ಸಲ್ಮಾನ್ ಖಾನ್ ರಿಂದ ಅಲ್ಪ ಕಾಣಿಕೆ

ಸಲ್ಮಾನ್ ಖಾನ್ ರಿಂದ ಅಲ್ಪ ಕಾಣಿಕೆ

ರಿಯೋನಲ್ಲಿ ಭಾಗವಹಿಸಿದ ಭಾರತದ ಎಲ್ಲಾ ಅಥ್ಲೆಟಿಕ್ಸ್ ಗಳಿಗೆ ತಲಾ ಒಂದು ಲಕ್ಷ ರುಗಳನ್ನು ನೀಡುತ್ತೇನೆಂದು ಬಾಲಿವುಡ್ ಸ್ಟಾರ್ ನಟ ಸಲ್ಮಾನ್ ಖಾನ್ ಅವರು ಘೋಷಿಸಿದ್ದಾರೆ. 1 ಲಕ್ಷ ರು ಕೂಡ ಸಿಂಧುನ ಕೈಸೇರಲಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
According reports, From Hyderabad to Vijayawada to Visakhapatnam, corporates, businessmen and jewellery showrooms are waiting to show their appreciation for the medal-winner Sindhu in cash and gifts.
Please Wait while comments are loading...