ರಿಯೋಗೆ ನರಸಿಂಗ್ ಬದಲಿಗೆ ಪ್ರವೀಣ್ ರಾಣಾಗೆ ಅವಕಾಶ

Posted By:
Subscribe to Oneindia Kannada

ನವದೆಹಲಿ, ಜುಲೈ 27 : ಡೋಪಿಂಗ್ ಟೆಸ್ಟ್ ನಲ್ಲಿ ಫೇಲ್ ಆಗಿರುವ ಕುಸ್ತಿಪಟು ನರಸಿಂಗ್ ಯಾದವ್ ಬದಲಿಗೆ ಪ್ರವೀಣ್ ರಾಣಾರನ್ನು ರಿಯೋ ಒಲಿಂಪಿಕ್ಸ್ ಗೆ ಕಳಿಸಲು ಭಾರತದ ಕುಸ್ತಿ ಒಕ್ಕೂಟ ತೀರ್ಮಾನಿಸಿದೆ.

74 ಕೆಜಿ ವಿಭಾಗದಲ್ಲಿ ಭಾರತವನ್ನು ಪ್ರವೀಣ್ ರಾಣಾ ಪ್ರತಿನಿಧಿಸಲಿದ್ದಾರೆ. ರಿಯೋ ಒಲಿಂಪಿಕ್ಸ್ 20016ಕ್ಕೆ ಆಯ್ಕೆಯಾಗಿದ್ದ ನರಸಿಂಗ್ ಯಾದವ್ ಅವರ ಎ ಹಾಗೂ ಬಿ ಸ್ಯಾಂಪಲ್ ಗಳು ಉದ್ದೀಪನ ಮದ್ದು ಪರೀಕ್ಷೆಯಲ್ಲಿ ಪಾಸಿಟಿವ್ ಆಗಿ ಬಂದಿತ್ತು. ಹೀಗಾಗಿ ಅವರನ್ನು ಒಲಿಂಪಿಕ್ಸ್ ಗ್ರಾಮಕ್ಕೆ ತೆರಳದಂತೆ ನಾಡಾ ತಡೆಹಿಡಿಯಿತು. [ರಿಯೋ ಒಲಿಂಪಿಕ್ಸ್ ವಿಶೇಷ ಪುಟ ಕ್ಲಿಕ್ಕಿಸಿ]

Rio Olympics: Parveen Rana replaces suspended Narsingh Yadav

2014ರಲ್ಲಿ ಅಮೆರಿಕದಲ್ಲಿ ನಡೆದ ಡೇವ್ ಸ್ಮಾರಕ ಟೂರ್ನಿಯಲ್ಲಿ ಚಿನ್ನದ ಪದಕ, 2015 ರಲ್ಲಿ ಇಟಲಿಯಲ್ಲಿ ನಡೆದ 70 ಕೆಜಿ ವಿಭಾಗದಲ್ಲಿ ರಾಣಾ ಚಿನ್ನದ ಪದಕ ಗೆದ್ದಿರುವ ಸಾಧನೆ ಮಾಡಿದ್ದಾರೆ.[ಶಾಟ್ ಪುಟ್ ಪಟು ಇಂದ್ರಜಿತ್ ಡೋಪಿಂಗ್ ಟೆಸ್ಟ್ ನಲ್ಲಿ ಫೇಲ್]

2015ರ ವಿಶ್ವ ಕುಸ್ತಿ ಚಾಂಪಿಯನ್ ಶಿಪ್ ನಲ್ಲಿ 74ಕೆಜಿ ವಿಭಾಗದಲ್ಲಿ ಕಂಚಿನ ಪದಕ ಗೆಲ್ಲುವ ಮೂಲಕ ರಿಯೋ ಒಲಿಂಪಿಕ್ಸ್ ಗೆ ಅರ್ಹತೆ ಪಡೆದಿದ್ದ ನರಸಿಂಗ್ ಯಾದವ್ ಹಾಗೂ ಅವರ ಅಭಿಮಾನಿಗಳಿಗೆ ನಿರಾಶೆಯಾಗಿದೆ. ಸದ್ಯ ಭಾರತದ ಕ್ರೀಡಾಪಟುಗಳು ಜಾರ್ಜಿಯಾದಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಆಗಸ್ಟ್ 5ರಿಂದ ಒಲಿಂಪಿಕ್ಸ್ 2016 ಆರಂಭಗೊಳ್ಳಲಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Wrestler Narsingh Yadav's provisional suspension from the Rio Olympics squad has opened the doors for rookie Parveen Kumar Rana to represent India at the 74kg weight category in the quadrennial extravaganza.
Please Wait while comments are loading...