ರಿಯೋ: ಕಾರ್ಲ್ ಲೂಯಿಸ್ ದಾಖಲೆ ಸಮಕ್ಕೆ ನಿಂತ ಫೆಲ್ಪ್ಸ್

Posted By:
Subscribe to Oneindia Kannada

ರಿಯೋ ಡಿ ಜನೈರೋ, ಆಗಸ್ಟ್ 12: 'ಚಿನ್ನದ ಮೀನು' ಮೈಕಲ್ ಫೆಲ್ಪ್ಸ್ ಅವರು ಈಜುಕೊಳದಲ್ಲಿ ಚಿನ್ನವನ್ನು ಹೆಕ್ಕಿ ತೆಗೆಯುತ್ತಿದ್ದಾರೆ. ಸತತ ನಾಲ್ಕು ಬಾರಿ ಒಂದೇ ಸ್ಪರ್ಧೆಯಲ್ಲೇ ಚಿನ್ನದ ಪದಕ ಕೊರಳಿಗೇರಿಸಿಕೊಂಡಿದ್ದಾರೆ. ಫೆಲ್ಪ್ಸ್ ಪದಕಗಳ ಪಟ್ಟಿ 22ಕ್ಕೇರಿದೆ.

ರಿಯೋ ಒಲಿಂಪಿಕ್ಸ್ 2016 : ಗ್ಯಾಲರಿ || ವಿಶೇಷ ಪುಟ

200 ಮೀಟರ್ ವೈಯಕ್ತಿಕ ಮಿಡ್ಲೆ ಸ್ಪರ್ಧೆಯಲ್ಲಿ ಈ ಸಾಧನೆ ಕಂಡು ಬಂದಿದೆ. ಶ್ರೇಷ್ಠ ಅಥ್ಲೀಟ್ ಲಾಂಗ್ ಜಂಪ್ ಪಟು ಕಾರ್ಲ್ ಲೂಯಿಸ್ ಅವರ ಸಾಧನೆ ಸಮಕ್ಕೆ ನಿಂತಿದ್ದಾರೆ. ಡಿಸ್ಕಸ್ ನಲ್ಲಿ ಆಲ್ ಓರೆಟರ್ ಅವರು ಕೂಡಾ ಸತತ ನಾಲ್ಕು ಚಿನ್ನದ ಪದಕ ಗೆದ್ದ ಕ್ರೀಡಾಪಟುಗಳಾಗಿದ್ದಾರೆ.

ಮತ್ತೊಂದು ವಿಕ್ರಮ ಸಾಧಿಸಿದ್ದಾರೆ. ಒಂದೇ ರಾತ್ರಿ ಎರಡು ಚಿನ್ನ ಗೆಲ್ಲುವ ಮೂಲಕ ಒಲಿಂಪಿಕ್ಸ್ ಪದಕಗಳ ಪಟ್ತಿಯನ್ನು 21ಕ್ಕೇರಿಸಿಕೊಂಡಿದ್ದಾರೆ.

Rio Olympics 2016: Michael Phelps scripts history with his 22nd gold

ಗುರುವಾರದಂದು ಮಿಡ್ಲೆಯಲ್ಲಿ ಫೆಲ್ಪ್ಸ್ ಅವರು 1 ನಿಮಿಷ 54.56 ಸೆಕೆಂಡುಗಳಲ್ಲಿ ಗುರುವಾರ (ಆಗಸ್ಟ್ 11) ಈ ಸಾಧನೆ ಮಾಡಿದ್ದು, ಜಪಾನ್ ನ ಕೊಸುಕೆ ಹಾಗಿನೋ ಎರಡು ಸೆಕೆಂಡ್ ಹಿಂದೆ ಬಿದ್ದು ಎರಡನೇ ಸ್ಥಾನಕ್ಕೆ ದೂಡಲ್ಪಟ್ಟರು. ಚೀನಾದ ವಾಂಗ್ ಶಾನ್ ಅವರು 1:57.05 ಅಂತರದಲ್ಲಿ ಕಂಚಿನ ಪದಕ ಗೆದ್ದರು.

22ನೇ ಚಿನ್ನದ ಪದಕ:31 ವರ್ಷ ವಯಸ್ಸಿನ ಮೈಕಲ್ ಅವರು ಒಟ್ಟಾರೆ 22 ಚಿನ್ನದ ಪದಕ ಗೆಲ್ಲುವ ಮೂಲಕ ಸರ್ವಶ್ರೇಷ್ಠ ಒಲಿಂಪಿಕ್ ಪಟು ಎಂದು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಭಾರತ ನೂರಾರು ವರ್ಷಗಳ ಕಾಲ ಒಲಿಂಪಿಕ್ಸ್ ನಲ್ಲಿ ಗೆದ್ದಿರುವ ಪದಕಗಳಷ್ಟೇ ಮೈಕಲ್ ಕೂಡಾ ಗೆದ್ದುಕೊಂಡಿದ್ದಾರೆ.[ಚಿನ್ನದ ಮೀನು ಮೈಕಲ್ ಕೊರಳಿಗೆ 21ನೇ ಪದಕ]

ರಿಯೋದಲ್ಲಿ 200 ಮೀಟರ್ ಬಟರ್ ಫ್ಲೈ, 4X100 ಫ್ರೀಸ್ಟೈಲ್, 4X200 ವೈಯಕ್ತಿಕ ಮಿಡ್ಲೆಯಲ್ಲಿ ಚಿನ್ನದ ಪದಕ ಕೊರಳಿಗೇರಿಸಿಕೊಂಡಿದ್ದಾರೆ. ಶುಕ್ರವಾರದಂದು 100 ಮೀಟ ಬಟರ್ ಫ್ಲೈ ಫೈನಲ್ ಪಂದ್ಯದಲ್ಲಿ ಈಜಲಿದ್ದಾರೆ. ನಂತರ 4X100 ಮೀಟರ್ ಮಿಡ್ಲೆ ಸ್ಪರ್ಧೆ ರಿಲೇ ಬಾಕಿಯಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Michael Phelps became the first swimmer to win the same event at four consecutive Olympics when he claimed the gold medal in the men's 200m individual medley at the Rio Games.
Please Wait while comments are loading...