ಉಸೇನ್ ಬೋಲ್ಟ್ ಕೊರಳಿಗೆ ಮೂರನೇ ಚಿನ್ನ, ಜಮೈಕಾದ ಓಟ ಚೆನ್ನ

Posted By:
Subscribe to Oneindia Kannada

ರಿಯೋ ಡಿ ಜನೈರೋ, ಆಗಸ್ಟ್ 20: ಮಿಂಚಿನ ಓಟಗಾರ ಉಸೇನ್ ಬೋಲ್ಟ್ ಒಳಗೊಂಡಿದ್ದ ಜಮೈಕಾದ ತಂಡ 4X100 ಮೀಟರ್ಸ್ ರಿಲೇಯಲ್ಲಿ ಬಂಗಾರ ಬಾಚಿಕೊಂಡಿದೆ. ಶನಿವಾರ ಬೆಳಗ್ಗೆ ಜಮೈಕಾ ತಂಡ ಚಿನ್ನ, ಜಪಾನಿಗೆ ಬೆಳ್ಳಿ ಹಾಗೂ ಕೆನಡಾಕ್ಕೆ ಕಂಚು ಲಭಿಸಿದೆ. ಜಸ್ಟೀನ್ ಗ್ಯಾಟ್ಲಿನ್ ಇದ್ದ ಯುಎಸ್ಎ ತಂಡ ಅನರ್ಹಗೊಂಡು ಅಚ್ಚರಿ ಮೂಡಿಸಿದೆ.

ರಿಯೋ ಒಲಿಂಪಿಕ್ಸ್ 2016 : ಗ್ಯಾಲರಿ || ವಿಶೇಷ ಪುಟ

ಬೋಲ್ಟ್ ಅವರು ಶುಕ್ರವಾರ ಬೆಳಗ್ಗೆ 200 ಮೀಟರ್ಸ್ ಫೈನಲ್ ನಲ್ಲಿ ಚಿನ್ನ ಗೆದ್ದು ಅಭೂತಪೂರ್ವ ಸಾಧನೆ ಮಾಡಿದ್ದರು. ರಿಯೋ ಒಲಿಂಪಿಕ್ಸ್ 2016 ರಲ್ಲಿ 200 ಮೀಟರ್ ಗೆಲ್ಲುವ ಮೂಲಕ ಸತತ ಮೂರು ಬಾರಿ ಒಲಿಂಪಿಕ್ಸ್ ಚಿನ್ನ ಗೆದ್ದ ವಿಶಿಷ್ಟ ಸಾಧನೆ ಮಾಡಿದ್ದರು. ಈಗ ರಿಯೋದಲ್ಲೇ 100, 200, 4x100ಮೀ ಈ ಮೂರು ಟ್ರ್ಯಾಕ್ ಇವೆಂಟ್ ನಲ್ಲಿ ಚಿನ್ನ ಗೆದ್ದುಕೊಂಡಿದ್ದಾರೆ. [200m ನಲ್ಲಿ ಬೋಲ್ಟ್ ಹ್ಯಾಟ್ರಿಕ್,ಬೀಜಿಂಗ್, ಲಂಡನ್ ಈಗ ರಿಯೋ]

Rio Olympics: Jamaica Win 100m Relay Gold, Usain Bolt Seals 'Triple Triple'

29 ವರ್ಷ ವಯಸ್ಸಿನ ಬೋಲ್ಟ್ ಅವರು ಶನಿವಾರ ಮತ್ತೊಮ್ಮೆ ಟ್ರ್ಯಾಕ್ ನಲ್ಲಿ ಮಿಂಚಿನ ಓಟ ನಡೆಸಿದರು. ಜಮೈಕಾ ತಂಡದ 4X100 ರಿಲೇಯಲ್ಲಿ ಚಿನ್ನಕ್ಕೆ ಮುತ್ತಿಟ್ಟಿತು. ಈ ಗೆಲುವಿನ ಮೂಲಕ ಮೂರು ಹ್ಯಾಟ್ರಿಕ್ ಸಾಧಿಸಿದ ಏಕೈಕ ಓಟಗಾರ ಎನಿಸಿಕೊಂಡರು.

ಲೂಯಿಸ್ ಸಮಕ್ಕೆ ಬೋಲ್ಟ್ : ಶ್ರೇಷ್ಠ ಅಥ್ಲೀಟ್ ಕಾರ್ಲ್ ಲೂಯಿಸ್, ಪಾವೋ ನೂರ್ಮಿ ಜತೆಗೆ ಉಸೇನ್ ಬೋಲ್ಟ್ ನಿಂತಿದ್ದಾರೆ. ಎಲ್ಲಾ ಒಲಿಂಪಿಕ್ಸ್ ಸೇರಿ 9 ಚಿನ್ನದ ಪದಕ ಕೊರಳಿಗೇರಿಸಿಕೊಂಡಿದ್ದಾರೆ. ಇದು ಬೋಲ್ಟ್ ಅವರ ಕೊನೆ ಒಲಿಂಪಿಕ್ಸ್ ಆಗಿದ್ದು, 2017ರಲ್ಲಿ ಸಂಪೂರ್ಣ ನಿವೃತ್ತಿ ಹೊಂದಲಿದ್ದಾರೆ. [ಉಸೇನ್ ಬೋಲ್ಟ್ ಶರವೇಗದ ರಹಸ್ಯ ಕುತೂಹಲಕಾರಿ]

ಬೀಜಿಂಗ್, ಲಂಡನ್ ನಲ್ಲಿ ಬೋಲ್ಟ್ ಅವರು ಮೂರು ಸ್ಪ್ರಿಂಟ್ ಚಿನ್ನ -100ಮೀ, 200ಮೀ ಹಾಗೂ 4x100ಮೀ ರಿಲೇಯಲ್ಲಿ ಚಿನ್ನ ಗೆದ್ದಿದ್ದರು. ರಿಯೋದಲ್ಲಿ ಎರಡು ಚಿನ್ನ ಗೆದ್ದಿದ್ದು ಈಗ ಶನಿವಾರ(ಆಗಸ್ಟ್ 20) 4X100 ರಿಲೇಯಲ್ಲಿ ಮೂರನೇ ಚಿನ್ನದ ಬೇಟೆಯಾಡಿದ್ದಾರೆ. (ಒನ್ ಇಂಡಿಯಾ ಸುದ್ದಿ)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Usain Bolt clinched his third gold medal of the 2016 Rio Olympics, his ninth overall, as Jamaica won the 100m relay gold. Japan finished second while Canada won the bronze after Justin Gatlin's USA were disqualified
Please Wait while comments are loading...