ರಿಯೋ ಒಲಿಂಪಿಕ್ಸ್ ಗೆ ಹಾಕಿ ತಂಡ ಪ್ರಕಟ, ನಾಲ್ವರು ಕನ್ನಡಿಗರು

Posted By:
Subscribe to Oneindia Kannada

ನವದೆಹಲಿ, ಜುಲೈ 12: ರಿಯೋ ಒಲಿಂಪಿಕ್ಸ್ ನಲ್ಲಿ ಆಡಲಿರುವ ಹಾಕಿ ತಂಡವನ್ನು ಹಾಕಿ ಇಂಡಿಯಾ ಮಂಗಳವಾರ(ಜುಲೈ 12) ದಂದು ಪ್ರಕಟಿಸಿದೆ. ತಂಡದಲ್ಲಿ ನಾಲ್ವರು ಕರ್ನಾಟಕ ಮೂಲದ ಆಟಗಾರರಿದ್ದಾರೆ. ಮಹಿಳೆಯರ ತಂಡದಿಂದ ನಾಯಕಿ ರಿತು ರಾಣಿ ಅವರನ್ನು ಕೈಬಿಡಲಾಗಿದೆ.

ಪುರುಷರ ತಂಡಕ್ಕೆ ಗೋಲ್ ಕೀಪರ್ ಪಿಆರ್ ಶ್ರೀಜೇಶ್ ಅವರು ನಾಯಕರಾಗಿದ್ದರೆ, ಸುಶೀಲ ಚಾನು ಅವರು ಮಹಿಳೆಯರ ತಂಡಕ್ಕೆ ನಾಯಕಿಯಾಗಿದ್ದಾರೆ.[ತ್ರಿವರ್ಣ ಧ್ವಜ ಹಿಡಿದು ತಂಡ ಮುನ್ನಡೆಸಲಿರುವ ಬಿಂದ್ರಾ]

ಒಲಿಂಪಿಕ್ಸ್ ನಲ್ಲಿ ಇಲ್ಲಿ ತನಕ 8 ಚಿನ್ನದ ಪದಕ ಗೆದ್ದಿರುವ ಹಾಕಿ ಇಂಡಿತಾ ತಂಡ, 1984ರ ನಂತರ ಉತ್ತಮ ಪ್ರದರ್ಶನ ನೀಡಿಲ್ಲ, 2012ರ ಲಂಡನ್ ಒಲಿಂಪಿಕ್ಸ್ ನಲ್ಲಿ 12ನೇ ಸ್ಥಾನಕ್ಕೆ ತೃಪ್ತಿಪಡಬೇಕಾಯಿತು.

ರಿಯೋ ಒಲಿಂಪಿಕ್ಸ್ 2016ರಲ್ಲಿ ಭಾರತ ತಂಡ ಬಿ ಗುಂಪಿನಲ್ಲಿದ್ದು, ಅರ್ಜೆಂಟೀನಾ, ಕೆನಡಾ, ಜರ್ಮನಿ, ಐರ್ಲೆಂಡ್ ಹಾಗೂ ನೆದರ್ಲೆಂಡ್ ತಂಡಗಳು ಗುಂಪಿನಲ್ಲಿರುವ ಇತರೆ ತಂಡಗಳಾಗಿವೆ.[10 ಸಾವಿರ ಕ್ರೀಡಾಳುಗಳಿಗೆ 4 ಲಕ್ಷ ಕಾಂಡೋಮ್ಸ್]

Rio Olympics: Indian hockey teams announced; Ritu Rani dropped

ಮಹಿಳೆಯರ ತಂಡ ಕೂಡಾ ಬಿ ಗುಂಪಿನಲ್ಲಿದ್ದು, ಅರ್ಜೆಂಟೀನಾ,ಆಸ್ಟ್ರೇಲಿಯಾ, ಗ್ರೇಟ್ ಬ್ರಿಟನ್, ಜಪಾನ್ ಹಾಗೂ ಯುನೈಟೆಡ್ ಸ್ಟೇಟ್ಸ್ ಇತರೆ ತಂಡಗಳಾಗಿವೆ.

ರಿತು ಆಯ್ಕೆ ಇಲ್ಲ: ಹಾಕಿ ಇಂಡಿಯಾ ಮಹಿಳೆಯರ ತಂಡದ ನಾಯಕಿಯಾಗಿದ್ದ ರಿತು ರಾಣಿ ಅವರನ್ನು ಆಯ್ಕೆ ಮಾಡಲಾಗಿಲ್ಲ. ಬೆಂಗಳೂರಿನ ತರಬೇತಿ ಶಿಬಿರದಿಂದ ರಿತು ಹೊರ ನಡೆದಿದ್ದಾರೆ. ಕಳಪೆ ಫಾರ್ಮ್ ಹಾಗೂ ಅವರ ನಡವಳಿಕೆ ಕಾರಣದಿಂದ ಆಯ್ಕೆಗೆ ಪರಿಗಣಿಸಿಲ್ಲ ಎಂದು ಆಯ್ಕೆದಾರರು ಸ್ಪಷ್ಟವಾಗಿ ಹೇಳಿದ್ದಾರೆ.[ಒಲಿಂಪಿಕ್ಸ್ ಗೆ ಆಯ್ಕೆಯಾದ ಭಾರತದ ಜಿಮ್ನಾಸ್ಟ್ ದೀಪಾ]

ಪುರುಷರ ತಂಡದಲ್ಲಿ ಕರ್ನಾಟಕದ ನಾಲ್ವರು ಆಟಗಾರರಿದ್ದಾರೆ. ನಿಕ್ಕಿನ್ ತಿಮ್ಮಯ್ಯ, ಎಸ್ ಕೆ ಉತ್ತಪ್ಪ, ಎಸ್ ವಿ ಸುನೀಲ್ ಹಾಗೂ ವಿಆರ್ ರಘುನಾಥ್.

ಪುರುಷರ ಹಾಕಿ ತಂಡ

ಗೋಲ್ ಕೀಪರ್ :
ಪಿಆರ್ ಶ್ರೀಜೇಶ್ (ನಾಯಕ)

ಫಾರ್ವರ್ಡ್ಸ್: ಹರ್ಮ್ಮನ್ ಪ್ರೀತ್ ಸಿಂಗ್, ಎಸ್ ವಿ ಸುನೀಲ್ (ಉಪ ನಾಯಕ), ಅಕಾಶ್ ದೀಪ್ ಸಿಂಗ್, ರಮಣ್ ದೀಪ್ ಸಿಂಗ್, ನಿಕ್ಕಿನ್ ತಿಮ್ಮಯ್ಯ

ಮಿಡ್ ಫೀಲ್ಡರ್ಸ್: ಸರ್ದಾರ್ ಸಿಂಗ್, ಮನ್ಪ್ರೀತ್ ಸಿಂಗ್, ಎಸ್ ಕೆ ಉತ್ತಪ್ಪ, ದೇವಿಂದರ್ ವಾಲ್ಮೀಕಿ, ಚಿಂಗ್ಲೆಣ್ಸಾನ ಸಿಂಗ್, ದಾನೀಶ್ ಮುಜ್ತಾಬ.

ಡಿಫೆಂಡರ್ : ರೂಪಿಂದರ್ ಪಾಲ್ ಸಿಂಗ್, ಕೊತಾಜಿತ್ ಸಿಂಗ್, ಸುರೇಂದರ್ ಕುಮಾರ್, ವಿಆರ್ ರಘುನಾಥ್

ಸ್ಟಾಂಡ್ ಬೈ : ಪ್ರದೀಪ್ ಮೊರ್, ವಿಕಾಸ್ ದಾಹಿಯ


ಭಾರತೀಯ ಮಹಿಳೆಯರ ತಂಡ

ಗೋಲ್ ಕೀಪರ್ : ಸವಿತಾ
ಫಾರ್ವರ್ಡ್ಸ್: ಅನುರಾಧ ದೇವಿ ಥೋಚಮ್, ಪೂನಮ್ ರಾಣಿ, ವಂದನಾ ಕಟಾರಿಯಾ, ಪ್ರೀತಿ ದುಬೇ, ರಾಣಿ ರಾಮ್ ಪಾಲ್

ಮಿಡ್ ಫೀಲ್ಡರ್ಸ್ : ನವ್ಜೋತ್ ಕೌರ್, ಮೋನಿಕಾ, ರೇಣುಕಾ ಯಾದವ್, ಲಿಲಿಮಾ ಮಿನ್ಜ್, ನಿಕ್ಕಿ ಪ್ರಧಾನ್,

ಡಿಫೆಂಡರ್ಸ್: ಸುಶೀಲಾ ಚಾನು (ನಾಯಕ), ದೀಪ್ ಗ್ರೇಸ್ ಎಕ್ಕಾ, ದೀಪಿಕಾ (ಉಪ ನಾಯಕಿ), ನಮಿತಾ ತೊಪ್ಪೊ, ಸುನಿತಾ ಲಾಕ್ರಾ

ಸ್ಟಾಂಡ್ ಬೈ : ರಜನಿ ಎಟಿಮಾರ್ಪು, ಎಚ್ ಲಾಲ್ರುತ್ ಫೆಲಿ

(ಒನ್ಇಂಡಿಯಾ ಸುದ್ದಿ)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The Indian men's and women's hockey teams for Rio Olympics 2016 were announced today (July 12). Captain Ritu Rani was dropped from the side.
Please Wait while comments are loading...