ಬ್ಯಾಡ್ಮಿಂಟನ್ : ಮೊದಲ ಪಂದ್ಯದಲ್ಲೇ ಜ್ವಾಲಾ- ಅಶ್ವಿನಿಗೆ ಸೋಲು

By: ಕ್ರೀಡಾ ಡೆಸ್ಕ್
Subscribe to Oneindia Kannada

ರಿಯೋ ಡಿ ಜನೈರೋ ಆಗಸ್ಟ್, 11: ಮಹಿಳಾ ಬ್ಯಾಡ್ಮಿಂಟನ್ ಡಬಲ್ಸ್​ನಲ್ಲಿ ಜ್ವಾಲಾ ಗುಟ್ಟಾ ಹಾಗೂ ಅಶ್ವಿನಿ ಪೊನ್ನಪ್ಪ ಜೋಡಿ ಲೀಗ್ ಹಂತದ ಮೊದಲ ಪಂದ್ಯದಲ್ಲೇ ಮುಗ್ಗರಿಸಿದ್ದಾರೆ. ಅಗ್ರ ಶ್ರೇಯಾಂಕಿತ ಜಪಾನ್ ಜೋಡಿ ಎದುರು ಸುಲಭವಾಗಿ ಸೋಲು ಕಂಡಿದ್ದಾರೆ.

ರಿಯೋ ಒಲಿಂಪಿಕ್ಸ್ 2016 : ಗ್ಯಾಲರಿ || ವಿಶೇಷ ಪುಟ

ಗುರುವಾರ ಆ.11 ರಂದು ಸಂಜೆ ನಡೆದ ಮಹಿಳಾ ಬ್ಯಾಡ್ಮಿಂಟನ್ ಡಬಲ್ಸ್ ಗ್ರೂಪ್ ಎ ನಲ್ಲಿ ವಿಶ್ವ ನಂಬರ್ ಒನ್ ಶ್ರೇಯಾಂಕಿತ ಜಪಾನಿನ ಮಿಸಾಕಿ ಮತ್ಸುಟೊಮೊ ಹಾಗು ಆಯ್ಕಾ ಟಕಹಸಿ ಎದುರು ಭಾರತದ ಜ್ವಾಲಾ ಗುಟ್ಟಾ ಹಾಗೂ ಅಶ್ವಿನಿ ಪೊನ್ನಪ್ಪ ಜೋಡಿ 15-21, 10-21 ಸೆಟ್ ಗಳ ಅಂತರದಿಂದ ಶರಣಾಯಿತು. [ರಿಯೋ 2016: ಆ.10 ರಂದು ಭಾರತಕ್ಕೆ ತ್ರಿಬಲ್ ಧಮಾಕ!]

Rio Olympics: India's Jwala Gutta-Ashwini Ponnappa pair loses

ಆರಂಭದಲ್ಲಿ ಜ್ವಾಲಾ ಗುಟ್ಟಾ ಹಾಗೂ ಅಶ್ವಿನಿ ಪೊನ್ನಪ್ಪ ಜೋಡಿ ಮೊದಲ ಸೆಟ್ ನಲ್ಲಿ 19 ನಿಮಿಷಗಳಲ್ಲಿ 4-1 ಅಂತರದಿಂದ ಭರ್ಜರಿ ಆರಂಭ ಪಡೆದುಕೊಂಡರು. ಆದರೆ, 2ನೇ ಸೆಟ್ ನಲ್ಲಿ ಜಪಾನ್ ಜೋಡಿ ಕೇವಲ 17 ನಿಮಿಷಗಳಲ್ಲಿ ಪಂದ್ಯವನ್ನು ತಮ್ಮ ವಶಕ್ಕೆ ಪಡೆದುಕೊಂಡರು.[ರಿಯೋನಲ್ಲಿ ಆಗಸ್ಟ್ 11: 7 ಭಾರತೀಯ ಶಟ್ಲರ್​ಗಳು ಸ್ಪರ್ಧೆಗೆ]

ಜ್ವಾಲಾ ಗುಟ್ಟಾ ಹಾಗೂ ಅಶ್ವಿನಿ ಪೊನ್ನಪ್ಪ ಜೋ ಈ ಜೋಡಿ ಗ್ರೂಪ್ ಎ ನಲ್ಲಿ ಇನ್ನು 3 ಪಂದ್ಯಗಳನ್ನು ಆಡಲಿದ್ದು, ಅದರಲ್ಲಿ ಗೆದ್ದ ಟಾಪ್ 2 ಜೋಡಿಗಳು ನಾಕೌಟ್ (ಕ್ವಾರ್ಟರ್ ಫೈನಲ್) ಗೆ ಅರ್ಹತೆ ಪಡೆಯಲಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
India's Jwala Gutta and Ashwini Ponnappa were off to a losing start in the women's doubles category in badminton at the Rio Olympics 2016 here today (August 11).
Please Wait while comments are loading...