ಚಿನ್ನದ ಮೀನು ಮೈಕಲ್ ಗೆ ಸೆಡ್ಡು, ಸ್ಕೂಲಿಂಗ್ ಗೆ ಚಿನ್ನ

Posted By:
Subscribe to Oneindia Kannada

ರಿಯೋ ಡಿ ಜನೈರೋ, ಆಗಸ್ಟ್ 13: 'ಚಿನ್ನದ ಮೀನು' ಮೈಕಲ್ ಫೆಲ್ಫ್ಸ್ ಅವರ 23ನೇ ಚಿನ್ನದ ಬೇಟೆಯನ್ನು ಸಿಂಗಪುರದ ಜೋಸೆಫ್ ಐಸಾಕ್ ಸ್ಕೂಲಿಂಗ್ ತಪ್ಪಿಸಿದ್ದಾರೆ.ಬಾಲ್ಯದ ಹೀರೋ ಮೈಕಲ್ ಅವರನ್ನು 100 ಮೀಟರ್ ಬಟರ್ ಫ್ಲೈ ಸ್ಪರ್ಧೆಯಲ್ಲಿ ಸೋಲಿಸಿ ಚಿನ್ನ ಗೆದ್ದ ಸ್ಕೂಲಿಂಗ್ ಗೆ ಸಿಂಗಪುರದ ಚಾಂಗಿ ವಿಮಾನ ನಿಲ್ದಾಣದಲ್ಲಿ ವಿಶಿಷ್ಟವಾಗಿ ಶುಭ ಹಾರೈಸಲಾಗಿದೆ.

ರಿಯೋ ಒಲಿಂಪಿಕ್ಸ್ 2016 : ಗ್ಯಾಲರಿ || ವಿಶೇಷ ಪುಟ

ಶುಕ್ರವಾರ ರಾತ್ರಿ ನಡೆದ 100 ಮೀಟರ್ ಬಟರ್ ಫ್ಲೈ ಸ್ಪರ್ಧೆಯಲ್ಲಿ 21 ವರ್ಷ ವಯಸ್ಸಿನ ಸ್ಕೂಲಿಂಗ್ ಅವರು 50.39 ಸೆಕೆಂಡುಗಳಲ್ಲಿ ತಲುಪಿ ಅಭೂತಪೂರ್ವ ಸಾಧನೆ ಮಾಡಿದ್ದಾರೆ. [ಕಾರ್ಲ್ ಲೂಯಿಸ್ ದಾಖಲೆ ಸಮಕ್ಕೆ ನಿಂತ ಫೆಲ್ಪ್ಸ್]

Rio Olympics: Unique celebration at Singapore's Changi Airport as Joseph Schooling beats Phelps

ಅಮೆರಿಕದ ಮೈಕಲ್ ಫೆಲ್ಪ್ಸ್ ಅವರು 51.14 ಸೆಕಂಡುಗಳನ್ನು ತೆಗೆದುಕೊಂಡರು. ಸ್ಕೂಲಿಂಗ್ ಅವರು ತಮ್ಮ ಬಾಲ್ಯದ ಹೀರೋ ಮೈಕಲ್ ರನ್ನು ಸೋಲಿಸಿ ಒಲಿಂಪಿಕ್ಸ್ ನಲ್ಲಿ ಮೊಟ್ಟ ಮೊದಲ ಚಿನ್ನದ ಪದಕ ಗೆದ್ದುಕೊಂಡಿದ್ದಾರೆ.

ಸ್ಕೂಲಿಂಗ್ ಅವರ ಸಾಧನೆಯನ್ನು ಸಂಭ್ರಮಿಸಲು ಸಿಂಗಪುರದ ಚಾಂಗಿ ವಿಮಾನ ನಿಲ್ದಾಣದಲ್ಲಿ ಫ್ಲೈಟ್ ಇನ್ಫಾರ್ಮೆಷನ್ ಸಿಸ್ಟಮ್ (ಎಫ್ ಐಡಿಎಸ್) ನಲ್ಲಿ ಜೋಸೆಫ್ ಸ್ಕೂಲಿಂಗ್ ಚಿನ್ನದ ಪದಕ ಗೆದ್ದಿರುವುದನ್ನು ಘೋಷಿಸಲಾಯಿತು.

Rio Olympics: Unique celebration at Singapore's Changi Airport as Joseph Schooling beats Phelps

Flight SG2016, Time 50.39, From Joseph Schooling, Terminal Gold ಎಂದು ಪ್ರದರ್ಶಿಸಲಾಯಿತು(ಚಿತ್ರ ನೋಡಿ)

ವಿಮಾನ ಆಗಮನ/ನಿರ್ಗಮನದ ಸೂಚನೆ ಬದಲಿಗೆ ಸ್ಕೂಲಿಂಗ್ ಚಿನ್ನದ ಪದಕದ ಸಾಧನೆಯನ್ನು ಪ್ರದರ್ಶಿಸಿ ಪ್ರಶಂಸಿಸಲಾಗಿದೆ.

31 ವರ್ಷ ವಯಸ್ಸಿನ ಮೈಕಲ್ ಅವರಿಗೆ ದಕ್ಷಿಣ ಆಫ್ರಿಕಾದ ಚಾಡ್ ಲೆ ಕ್ಲೋಸ್, ಹಂಗೇರಿಯ ಲಾಸಜ್ಲೋ ಸೆಹ್ ಪೈಪೋಟಿ ನೀಡಿದರೂ ಮೂವರು 51.14 ಸೆಕೆಂಡುಗಳಲ್ಲಿ 100 ಮೀಟರ್ ಗುರಿಯನ್ನು ಈಜಿ ಬೆಳ್ಳಿ ಪದಕ ಹಂಚಿಕೊಂಡರು.

ಸ್ಕೂಲಿಂಗ್ ಸದ್ಯಕ್ಕೆ ಫೇಸ್ ಬುಕ್, ಟ್ವಿಟ್ಟರ್ ನಲ್ಲಿ ಟ್ರೆಂಡಿಂಗ್ ನಲ್ಲಿದ್ದು ಬಾಲಕ ಸ್ಕೂಲಿಂಗ್ 2008ರಲ್ಲಿ ಮೈಕಲ್ ಜತೆಗಿದ್ದ ಫೋಟೋ ಸಕತ್ ಹರಿದಾಡುತ್ತಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
It was a historic night (August 12) for Singapore at Rio Olympics 2016 as Joseph Isaac Schooling stopped US legend Michael Phelps to win gold in 100m butterfly event. And Singapore's Changi Airport celebrated it in a unique way.
Please Wait while comments are loading...