ಕ್ವಾರ್ಟರ್ ಫೈನಲ್ ಗೆ ಸುಸ್ತಾದ ಭಾರತೀಯ ಬಿಲ್ಲುಗಾರ್ತಿಯರು

By: ಕ್ರೀಡಾ ಡೆಸ್ಕ್
Subscribe to Oneindia Kannada

ರಿಯೋ ಡಿ ಜನೈರೋ ಆಗಸ್ಟ್, 11: ಭಾರತದ ಭರವಸೆಯ ಕ್ರೀಡಾಪಟುಗಳು ಪ್ರಸಕ್ತ ಒಲಿಂಪಿಕ್ಸ್​ನಲ್ಲಿ ನೀರಸ ಪ್ರದರ್ಶನ ಮುಂದುವರೆದಿದೆ. ಆರ್ಚರಿಯಲ್ಲಿ ಬಿಲ್ಲುಗಾರ್ತಿ ದೀಪಿಕಾ ಕುಮಾರಿ ಮತ್ತು ಬೊಂಬಾಲ್ಯ ದೇವಿ ಪ್ರೀ ಕ್ವಾರ್ಟರ್ ಫೈನಲ್ ನಲ್ಲಿ ಮುಗ್ಗರಿಸಿದ್ದಾರೆ.

ರಿಯೋ ಒಲಿಂಪಿಕ್ಸ್ 2016 : ಗ್ಯಾಲರಿ || ವಿಶೇಷ ಪುಟ

ಬುಧವಾರ ನಡೆದ ಮಹಿಳೆಯರ ವೈಯಕ್ತಿಕ ಆರ್ಚರಿ ಪ್ರೀ ಕ್ವಾರ್ಟರ್ ಫೈನಲ್ ನಲ್ಲಿ ಭಾರತದ ಬಿಲ್ಲುಗಾರ್ತಿ ದೀಪಿಕಾ ಕುಮಾರಿ ಅವರು ಚೈನೀಸ್ ನ ಯಾ -ಟಿಂಗ್ ಟಾನ್ ವಿರುದ್ದ 0-6 ಅಂತರದಲ್ಲಿ ಸೋಲೊಪ್ಪಿಕೊಂಡರು. [ರಿಯೋನಲ್ಲಿ ಆಗಸ್ಟ್ 11: 7 ಭಾರತೀಯ ಶಟ್ಲರ್​ಗಳು ಸ್ಪರ್ಧೆಗೆ]

ಇನ್ನು ಪದಕದ ಭರವಸೆ ಮೂಡಿಸಿದ್ದ ಮತೋರ್ವ ಭಾರತದ ಬಿಲ್ಲುಗಾರ್ತಿ ಬೊಂಬಾಲ್ಯ ದೇವಿ ಸಹ ಮಕ್ಸಿಕೋದ ಅಲೆಜಾಂದ್ರ ವಾಲೆನ್ಸಿಯಾ ವಿರುದ್ದ 2-6 ಅಂತರದಲ್ಲಿ ಪರಾಭವಗೊಂಡರು. [ಆ.10 ರಂದು ಭಾರತಕ್ಕೆ ತ್ರಿಬಲ್ ಧಮಾಕ!]

Rio Olympics Archery: India's Deepika Kumari, Bombayla Devi fail to make last-8

ಚೈನೀಸ್ ನ ಯಾ -ಟಿಂಗ್ ಟಾನ್ ಅವರು ದೀಪಿಕಾ ವಿರುದ್ದ ಆರಂಭದಿಂದಲೇ ಕೊನೆ ತೆನಕವು ಮನ್ನಡೆ ಕಾಯ್ದುಕೊಂಡು 29-26, 30-27 ಅಂತರದಿಂದ ಜಯಶಾಲಿಯಾದರು. ಮತ್ತೊಂದು ಪಂದ್ಯದಲ್ಲಿ ಬೊಂಬಾಲ್ಯ ದೇವಿ ಆರಂಬದಲ್ಲಿ 28-26 ಅಂಕಗಳೊಂದಿಗೆ ಮುನ್ನಡೆ ಪಡೆದುಕೊಂಡು ಆತ್ಮವಿಶ್ವಾಸದಲ್ಲಿದ್ದರು.

ನಂತರದ ರೌಂಡ್ ನಲ್ಲಿ ಮೆಕ್ಸಿಕೋದ ಅಲೆಜಾಂದ್ರ ವಾಲೆನ್ಸಿಯಾ 26-23 ಅಂಕಗಳಿಸುವ ಮೂಲಕ ದೇವಿ ಅವರಿಗೆ ಅಘಾತ ನೀಡದರು. ಕೊನೆಯಲ್ಲಿ ಮೆಕ್ಸಿಕೋದ ಅಲೆಜಾಂದ್ರ ವಾಲೆನ್ಸಿಯಾ 2-6 ಅಂತರದಲ್ಲಿ ದೇವಿ ಅವರನ್ನು ಮಣಿಸಿದರು. (ಒನ್ ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
India's Jwala Gutta and Ashwini Ponnappa were off to a losing start in the women's doubles category in badminton at the Rio Olympics 2016 here today (August 11).
Please Wait while comments are loading...