ಸಾಕ್ಷಿ ಸಾಧಿಸಿದ 5 ಹೊಸ ದಾಖಲೆಗಳು ಇಲ್ಲಿವೆ ಓದಿ

Posted By:
Subscribe to Oneindia Kannada

ರಿಯೋ ಡಿ ಜನೈರೋ, ಆಗಸ್ಟ್ 18: ರಿಯೋ ಒಲಿಂಪಿಕ್ಸ್ 2016ರ ಕ್ರೀಡಾಕೂಟದ 13ನೇ ದಿನದಂದು ಮಹಿಳಾ ಕುಸ್ತಿಪಟು ಸಾಕ್ಷಿ ಮಲಿಕ್ ಅವರು ಭಾರತದ ಪದಕದ ಬರವನ್ನು ನೀಗಿದ್ದಲ್ಲದೆ ಹೊಸ ಇತಿಹಾಸವನ್ನು ನಿರ್ಮಿಸಿದರು. ಮೊದಲ ಬಾರಿಗೆ ಒಲಿಂಪಿಕ್ಸ್ ಪ್ರವೇಶಿಸಿ ಪದಕ ಗೆದ್ದ ಸಾಧನೆ ಮಾಡಿರುವ ಸಾಕ್ಷಿ ಬರೆದ 5 ಪ್ರಮುಖ ದಾಖಲೆಗಳು ಇಲ್ಲಿವೆ.

ರಿಯೋ ಒಲಿಂಪಿಕ್ಸ್ 2016 : ಗ್ಯಾಲರಿ || ವಿಶೇಷ ಪುಟ

ಮಹಿಳೆಯರ ಫ್ರೀ ಸ್ಟೈಲ್ 58 ಕೆಜಿ ವಿಭಾಗದ ಸ್ಪರ್ಧೆಯಲ್ಲಿ ಮೊದಲಿಗೆ ಹಿನ್ನಡೆ ಅನುಭವಿಸಿದರೂ ನಂತರ ಚೇತರಿಸಿಕೊಂಡು ಗೆಲುವಿನ ಹಾದಿ ಹಿಡಿದರು.[ಭಾರತ ಒಂದು ಪದಕ ಗೆದ್ದುಕೊಂಡಿದೆ, ಹುರ್ರೆ!]

ಆಗಸ್ಟ್ 18ರ ಗುರುವಾರ ಭಾರತೀಯ ಕಾಲಮಾನ ಪ್ರಕಾರ 2.15 AMಗೆ ಸಾಕ್ಷಿಯಿಂದ ಭಾರತದ ಕೋಟ್ಯಂತರ ಅಭಿಮಾನಿಗಳಿಗೆ ಶುಭ ಸುದ್ದಿ ಸಿಕ್ಕಿತು.ರಿಯೋದಲ್ಲಿ ಪದಕ ಸಿಗಲಿಲ್ಲ ಎಂಬ ಕೊರಗು ನೀಗಿತು.[12 ವರ್ಷಗಳ ನನ್ನ ತಪಸ್ಸಿಗೆ ಈಗ ಫಲ ಸಿಕ್ಕಿದೆ: ಸಾಕ್ಷಿ]

23 ವರ್ಷ ಹರ್ಯಾಣ ರೋಹ್ಟಕ್ ಜಿಲ್ಲೆಯ ಸಾಕ್ಷಿ ಅವರು ಫೈನಲ್ ಪಂದ್ಯದಲ್ಲಿ 0-5ರಲ್ಲಿ ಹಿನ್ನಡೆ ಅನುಭವಿಸಿದರೂ ಕೊನೆ 2 ನಿಮಿಷಗಳಲ್ಲಿ ಅದ್ಭುತ ಪಟ್ಟುಗಳನ್ನು ಹಾಕಿ ಎದುರಾಳಿಯನ್ನು ಸೋಲಿಸಿ, ಸಂಭ್ರಮಿಸಿದರು. 2002ರಲ್ಲಿ ವೃತ್ತಿಪರ ಕುಸ್ತಿಗೆ ಎಂಟ್ರಿ ಕೊಟ್ಟ ಸಾಕ್ಷಿ ಸಾಧನೆಯ ಐದು ಮಜಲುಗಳು ಇಲ್ಲಿವೆ: [ಸಾಕ್ಷಿ ಮಲಿಕ್ ಯಾರು?]

2016ರ ಮೇ ತಿಂಗಳಿನಲ್ಲಿ ಇಸ್ತಾನ್ ಬುಲ್ ನಲ್ಲಿ ನಡೆದ ವಿಶ್ವ ಅರ್ಹತಾ ಸುತ್ತಿನ ಟೂರ್ನಿಯಲ್ಲಿ ಉತ್ತಮ ಸಾಧನೆ ತೋರಿ ಒಲಿಂಪಿಕ್ಸ್ ಗೆ ಅರ್ಹತೆ ಪಡೆದರು. ವಿನೇಶ್ ಫೋಗತ್ ನಂತರ ಎರಡನೇ ಕುಸ್ತಿಪಟುವಾಗಿ ರಿಯೋ ಪ್ರವೇಶ.

ಸಾಕ್ಷಿ ಸಾಧಿಸಿದ 5 ಹೊಸ ದಾಖಲೆಗಳು ಇಲ್ಲಿವೆ ಓದಿ

ಸಾಕ್ಷಿ ಸಾಧಿಸಿದ 5 ಹೊಸ ದಾಖಲೆಗಳು ಇಲ್ಲಿವೆ ಓದಿ

ಬ್ರೆಜಿಲ್ ರಿಯೋ ಒಲಿಂಪಿಕ್ಸ್ ಮೂಲಕ ಒಲಿಂಪಿಕ್ಸ್ ನಲ್ಲಿ ಮೊದಲ ಪದಕ ಗೆದ್ದ ಸಾಧನೆ.

ಸಾಕ್ಷಿ ಸಾಧಿಸಿದ 5 ಹೊಸ ದಾಖಲೆಗಳು ಇಲ್ಲಿವೆ ಓದಿ

ಸಾಕ್ಷಿ ಸಾಧಿಸಿದ 5 ಹೊಸ ದಾಖಲೆಗಳು ಇಲ್ಲಿವೆ ಓದಿ

ಒಲಿಂಪಿಕ್ಸ್ ಗೆ ಮೊದಲ ಬಾರಿ ಪ್ರವೇಶ ಮಾಡಿ, ಮೊದಲ ಪ್ರಯತ್ನದಲ್ಲೇ ಭಾರತದ ಪರ ಪದಕ ಗೆದ್ದ ಸಾಧನೆ.

ಸಾಕ್ಷಿ ಸಾಧಿಸಿದ 5 ಹೊಸ ದಾಖಲೆಗಳು ಇಲ್ಲಿವೆ ಓದಿ

ಸಾಕ್ಷಿ ಸಾಧಿಸಿದ 5 ಹೊಸ ದಾಖಲೆಗಳು ಇಲ್ಲಿವೆ ಓದಿ

ಕುಸ್ತಿ ಸ್ಪರ್ಧೆಯಲ್ಲಿ ಭಾರತದ ಪರ ಮೊಟ್ಟ ಮೊದಲ ಬಾರಿಗೆ ಒಲಿಂಪಿಕ್ಸ್ ನಲ್ಲಿ ಪದಕ ಗೆದ್ದ ಮಹಿಳಾ ಸ್ಪರ್ಧಿ. 1952ರಲ್ಲಿ ಹೆಲ್ಸಿಂಕಿಯಲ್ಲಿ ಕೆಡಿ ಜಾಧವ್, 2008ರ ಬೀಜಿಂಗ್ ನಲ್ಲಿ ಕಂಚು, 2012ರ ಲಂಡನ್ ನಲ್ಲಿ ಬೆಳ್ಳಿ ಗೆದ್ದ ಸುಶೀಲ್ ಕುಮಾರ್, 2012ರ ಲಂಡನ್ ಒಲಿಂಪಿಕ್ಸ್ ನಲ್ಲಿ ಕಂಚು ಗೆದ್ದ ಯೋಗೇಶ್ವರ್ ದತ್ ನಂತರ ಮೊದಲ ಮಹಿಳಾ ಸ್ಪರ್ಧಿ ಸಾಕ್ಷಿ.

ಸಾಕ್ಷಿ ಸಾಧಿಸಿದ 5 ಹೊಸ ದಾಖಲೆಗಳು ಇಲ್ಲಿವೆ ಓದಿ

ಸಾಕ್ಷಿ ಸಾಧಿಸಿದ 5 ಹೊಸ ದಾಖಲೆಗಳು ಇಲ್ಲಿವೆ ಓದಿ

ಭಾರತದ ಒಲಿಂಪಿಕ್ಸ್ ಇತಿಹಾಸದಲ್ಲಿ ಪದಕ ಗೆದ್ದಿರುವ ನಾಲ್ಕನೇ ಮಹಿಳಾ ಸಾಧಕಿ ಎನಿಸಿದ್ದಾರೆ. ಸಿಡ್ನಿ 2000ದಲ್ಲಿ ವೇಟ್ ಲಿಫ್ಟಿಂಗ್ ನಲ್ಲಿ ಕರಣಂ ಮಲ್ಲೇಶ್ವರಿ, ಲಂಡನ್ 2012ರ ಲಂಡನ್ ಬಾಕ್ಸಿಂಗ್ ನಲ್ಲಿ ಮೇರಿ ಕೋಮ್, ಬಾಡ್ಮಿಂಟನ್ ನಲ್ಲಿ ಸೈನಾ ನೆಹ್ವಾಲ್ ಕಂಚು ಗೆದ್ದಿದ್ದರು.

ಸಾಕ್ಷಿ ಸಾಧಿಸಿದ 5 ಹೊಸ ದಾಖಲೆಗಳು ಇಲ್ಲಿವೆ ಓದಿ

ಸಾಕ್ಷಿ ಸಾಧಿಸಿದ 5 ಹೊಸ ದಾಖಲೆಗಳು ಇಲ್ಲಿವೆ ಓದಿ

23 ವರ್ಷ ವಯಸ್ಸಿನ ಸಾಕ್ಷಿ ಮಲಿಕ್ ಅವರು ಒಲಿಂಪಿಕ್ಸ್ ಪದಕ ಗೆದ್ದ ಅತ್ಯಂತ ಕಿರಿಯ ಕುಸ್ತಿ ಪಟು ಎಂಬ ಸಾಧನೆ ಮಾಡಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Wrestler Sakshi Malik not only ended India's wait for a medal at Rio Olympics 2016 but also set records in Brazil.At 23, Sakshi is the youngest Indian wrestler to win an Olympic medal. Check out 5 records set by Sakshi.
Please Wait while comments are loading...