ಕುಸ್ತಿ: ಐತಿಹಾಸಿಕ ಸಾಧನೆ ಮಾಡಿದ ಸಾಕ್ಷಿ ಮಲಿಕ್ ಯಾರು?

Posted By:
Subscribe to Oneindia Kannada

ರಿಯೋ ಡಿ ಜನೈರೋ, ಆಗಸ್ಟ್ 18: ರಿಯೋ ಒಲಿಂಪಿಕ್ಸ್ 2016ರಲ್ಲಿ ಪದಕ ಸಿಕ್ಕಿಲ್ಲ ಎಂಬ ಕೊರಗನ್ನು ನೀಗಿಸಿದ ಸಾಕ್ಷಿ ಮಲಿಕ್ ಹೊಸ ಇತಿಹಾಸ ರಚಿಸಿದ್ದಾರೆ. ಕ್ರೀಡಾಕೂಟದ 13ನೇ ದಿನದಂದು ಮಹಿಳಾ ಕುಸ್ತಿಪಟು ಸಾಕ್ಷಿ ಮಲಿಕ್ ಅವರು ಭಾರತಕ್ಕೆ ಕಂಚಿನ ಪದಕ ಗೆದ್ದು ಕೊಟ್ಟಿದ್ದಾರೆ. ಈ ಕ್ರೀಡಾ ಸಾಧಕಿ ಬಗ್ಗೆ ಪರಿಚಯಾತ್ಮಕ ಲೇಖನ ಇಲ್ಲಿದೆ. [12 ವರ್ಷಗಳ ನನ್ನ ತಪಸ್ಸಿಗೆ ಈಗ ಫಲ ಸಿಕ್ಕಿದೆ: ಸಾಕ್ಷಿ]

ರಿಯೋ ಒಲಿಂಪಿಕ್ಸ್ 2016 : ಗ್ಯಾಲರಿ || ವಿಶೇಷ ಪುಟ

ಮಹಿಳೆಯರ ಫ್ರೀ ಸ್ಟೈಲ್ 58 ಕೆಜಿ ವಿಭಾಗದ ಸ್ಪರ್ಧೆಯಲ್ಲಿ ಸಾಕ್ಷಿ ಈ ಸಾಧನೆ ಮಾಡಿದ್ದಾರೆ. 23 ವರ್ಷ ಹರ್ಯಾಣ ರೋಹ್ಟಕ್ ಜಿಲ್ಲೆಯ ಸಾಕ್ಷಿ ಅವರು ಫೈನಲ್ ಪಂದ್ಯದಲ್ಲಿ 0-5ರಲ್ಲಿ ಹಿನ್ನಡೆ ಅನುಭವಿಸಿದರೂ ಕೊನೆ 2 ನಿಮಿಷಗಳಲ್ಲಿ ಅದ್ಭುತ ಪಟ್ಟುಗಳನ್ನು ಹಾಕಿ ಎದುರಾಳಿಯನ್ನು ಸೋಲಿಸಿ, ಸಂಭ್ರಮಿಸಿದರು. [ಕಡೆಗೂ ಭಾರತ ಒಂದು ಪದಕ ಗೆದ್ದುಕೊಂಡಿದೆ, ಹುರ್ರೆ!]

Sakshi

ನಾಲ್ಕನೆ ಮಹಿಳಾ ಸಾಧಕಿ: ಒಟ್ಟಾರೆ, ಭಾರತದ ಒಲಿಂಪಿಕ್ಸ್ ಇತಿಹಾಸದಲ್ಲಿ ಪದಕ ಗೆದ್ದಿರುವ ನಾಲ್ಕನೇ ಮಹಿಳಾ ಸಾಧಕಿ ಎನಿಸಿದ್ದಾರೆ. ಸಿಡ್ನಿ 2000ದಲ್ಲಿ ವೇಟ್ ಲಿಫ್ಟಿಂಗ್ ನಲ್ಲಿ ಕರಣಂ ಮಲ್ಲೇಶ್ವರಿ, ಲಂಡನ್ 2012ರ ಲಂಡನ್ ಬಾಕ್ಸಿಂಗ್ ನಲ್ಲಿ ಮೇರಿ ಕೋಮ್, ಬಾಡ್ಮಿಂಟನ್ ನಲ್ಲಿ ಸೈನಾ ನೆಹ್ವಾಲ್ ಕಂಚು ಗೆದ್ದಿದ್ದರು. [ಜಿಮ್ನಾಸ್ಟ್ ದೀಪಾ ಕರ್ಮಾಕರ್ ಗೆ ಖೇಲ್ ರತ್ನ]

ಕುಸ್ತಿಯಲ್ಲಿ ಐದನೇ ಪದಕ: 1952ರಲ್ಲಿ ಹೆಲ್ಸಿಂಕಿಯಲ್ಲಿ ಕೆಡಿ ಜಾಧವ್, 2008ರ ಬೀಜಿಂಗ್ ನಲ್ಲಿ ಕಂಚು, 2012ರ ಲಂಡನ್ ನಲ್ಲಿ ಬೆಳ್ಳಿ ಗೆದ್ದ ಸುಶೀಲ್ ಕುಮಾರ್, 2012ರ ಲಂಡನ್ ಒಲಿಂಪಿಕ್ಸ್ ನಲ್ಲಿ ಕಂಚು ಗೆದ್ದ ಯೋಗೇಶ್ವರ್ ದತ್.

India's history-maker at Rio Olympics 2016: Who is Sakshi Malik?

ಸಾಕ್ಷಿ ಮಲಿಕ್ ಪರಿಚಯ:
* ಸೆಪ್ಟೆಂಬರ್ 3, 1992 ರಲ್ಲಿ ಹರ್ಯಾಣದ ರೊಹ್ಟಕ್ ನಲ್ಲಿ ಜನನ
* ಎತ್ತರ : 5 ಅಡಿ 3 ಇಂಚು.
* ಫ್ರೀ ಸ್ಟೈಲ್ ಕುಸ್ತಿಪಟು
* ಕೋಚ್ : ಈಶ್ವರ್ ದಾಹಿಯಾ
* 2002ರಲ್ಲಿ ವೃತ್ತಿಪರ ಕುಸ್ತಿಗೆ ಎಂಟ್ರಿ
* ಬ್ರೆಜಿಲ್ ರಿಯೋ ಒಲಿಂಪಿಕ್ಸ್ ಮೂಲಕ ಒಲಿಂಪಿಕ್ಸ್ ಗೆ ಮೊದಲ ಬಾರಿ ಪ್ರವೇಶ
* ಮೇ ತಿಂಗಳಿನಲ್ಲಿ ಇಸ್ತಾನ್ ಬುಲ್ ನಲ್ಲಿ ನಡೆದ ವಿಶ್ವ ಅರ್ಹತಾ ಸುತ್ತಿನ ಟೂರ್ನಿಯಲ್ಲಿ ಉತ್ತಮ ಸಾಧನೆ ತೋರಿ ಒಲಿಂಪಿಕ್ಸ್ ಗೆ ಅರ್ಹತೆ ಪಡೆದರು. ವಿನೇಶ್ ಫೋಗತ್ ನಂತರ ಎರಡನೇ ಕುಸ್ತಿಪಟುವಾಗಿ ರಿಯೋ ಪ್ರವೇಶ. [ರಿಯೋ 2016: ಚಿನ್ನ ಪದಕಕ್ಕಾಗಿ ಹೀಗೂ ಮಾಡ್ತಾರೆ]

ಸಾಕ್ಷಿ ಸಾಧನೆ:
* ರಿಯೋ ಒಲಿಂಪಿಕ್ಸ್ 2016 ರಲ್ಲಿ ಕಂಚಿನ ಪದಕ
* ಗ್ಲಾಸ್ಗೋದಲ್ಲಿ ಕಾಮನ್ ವೆಲ್ತ್ ಗೇಮ್ಸ್ 2014ರಲ್ಲಿ ಬೆಳ್ಳಿ
* 2014ರಲ್ಲಿ ಇಂಚಿಯಾನ್ ನಲ್ಲಿ ಏಷ್ಯನ್ ಗೇಮ್ಸ್ ನಲ್ಲಿ ಕಂಚು
* ಕತಾರ್ ನ ದೋಹಾದಲ್ಲಿ 2015ರಲ್ಲಿ ಏಷ್ಯನ್ ಚಾಂಪಿಯನ್ ಶಿಪ್ ನಲ್ಲಿ ಕಂಚು
* 2014ರಲ್ಲಿ ತಾಷ್ಕೆಂಟ್ ನಲ್ಲಿ ನಡೆದ ವಿಶ್ವ ಕುಸ್ತಿ ಚಾಂಪಿಯನ್ ನಲ್ಲಿ ಸ್ಪರ್ಧೆ.

(ಒನ್ಇಂಡಿಯಾ ಸುದ್ದಿ)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
India's Sakshi Malik wrestled her way into history books as she claimed a bronze medal at Rio Olympics 2016 here on Wednesday (August 17).
Please Wait while comments are loading...