ಜಿಮ್ನಾಸ್ಟಿಕ್: ಸಾಧಕಿ ದೀಪಾ ಕರ್ಮಾಕರ್ ಅವರ ಬಗ್ಗೆ ಒಂದಿಷ್ಟು

By: ಕ್ರೀಡಾ ಡೆಸ್ಕ್
Subscribe to Oneindia Kannada

ರಿಯೋ ಡಿ ಜನೈರೋ, ಆಗಸ್ಟ್ 08: "ಪ್ರಯತ್ನದಲ್ಲಿ ಫಲವಿದೆ" ಎಂಬುದನ್ನು ಭಾರತದ ಜಿಮ್ನಾಸ್ಟಿಕ್ ಪಟು ದೀಪಾ ಕರ್ಮಾಕರ್ ಅವರು ಸಾಬೀತು ಮಾಡಿ ತೋರಿಸಿದ್ದಾರೆ. ಮೊದಲ ಬಾರಿಗೆ ಒಲಿಂಪಿಕ್ಸ್ ಗೆ ಅರ್ಹತೆ ಪಡೆದಿದ್ದಲ್ಲದೆ, ಚೊಚ್ಚಲ ಪ್ರಯತ್ನದಲ್ಲೇ ಫೈನಲ್ ಹಂತಕ್ಕೇರಿದ ಸಾಧನೆ ಮಾಡಿದ್ದಾರೆ.

ರಿಯೋ ಒಲಿಂಪಿಕ್ಸ್ 2016 : ಗ್ಯಾಲರಿ || ವಿಶೇಷ ಪುಟ

ದೀಪಾ ಅವರು ತಾವು 6 ವರ್ಷದ ಪುಟ್ಟ ಬಾಲಕಿ ಇರುವಾಗಲೇ ಈ ಜಿಮ್ನಾಸ್ಟಿಕ್ ತರಬೇತಿಯನ್ನು ತಮ್ಮ ತಂದೆ ಮಾಜಿ ಜಿಮ್ನಾಸ್ಟ್ ಪಟು ದುದಾಲ್ ಕರ್ಮಾಕರ್ ಅವರಿಂದ ತರಬೇತಿ ಪಡೆದುಕೊಂಡರು. [ಫೈನಲ್ ತಲುಪಿ, ಇತಿಹಾಸ ನಿರ್ಮಿಸಿದ ದೀಪಾ]

ಅಂದಿನ ಶ್ರಮವೇ ಇಂದು ರಿಯೋ ಒಲಿಂಪಿಕ್ 2016 ನಲ್ಲಿ ಫೈನಲ್ ಪ್ರವೇಶಿಸುವ ಮೂಲಕ ಇಡೀ ವಿಶ್ವವೇ ತಮ್ಮತ್ತ ನೋಡುವಂತೆ ಮಾಡಿದ್ದಾರೆ. [ಇತಿಹಾಸ ನಿರ್ಮಿಸಿದ ದೀಪಾಗೆ ಬಿಗ್ ಬಿ ಪ್ರಶಂಸೆ]

ಮೊಟ್ಟ ಮೊದಲ ಭಾರತೀಯ ಮಹಿಳಾ ಜಿಮ್ನಾಸ್ಟ್ ಫೈನಲ್ ಪ್ರವೇಶಿಸಿ ಭಾರತದ ಜಿಮ್ನಾಸ್ಟಿಕ್ ಇತಿಹಾಸದಲ್ಲಿ ಹೊಸ ಮೈಲಿಗಲ್ಲನ್ನು ಬರೆದಿರುವ ದೀಪಾ ಅವರಿಗೆ ಎಲ್ಲೆಡೆಯಿಂದ ಪ್ರಶಂಸೆಯ ಸುರಿಮಳೆ ಹರಿದು ಬರುತ್ತಿವೆ. [ಪದಕ ವಿಜೇತರು: ಲಿಯಾಂಡರ್ ನಿಂದ ಸೈನಾ ತನಕ]

ಮಹಿಳಾ ವಿಭಾಗದ ಸ್ಪರ್ಧೆಗಳಲ್ಲಿ ಬಾರ್, ಫ್ಲೋರ್, ಬೀಮ್, ವಾಲ್ಟ್ , ಎಕ್ಸರ್ಸೈಸ್ ಹಾಗೂ ವೈಯಕ್ತಿಕ ಆಲ್ ರೌಂಡ್ ವಿಭಾಗದಲ್ಲಿ ಸ್ಪರ್ಧೆ ನಡೆಯಲಿದೆ. ಈ ಪೈಕಿ ಪ್ರೋಡುನೊವಾ ವಾಲ್ಟ್ ಸ್ಪರ್ಧೆ ಕಠಿಣವಾಗಿದ್ದು,ಇದರಲ್ಲಿ ದೀಪಾ ಉತ್ತಮ ಸಾಧನೆ ತೋರಿದ್ದಾರೆ.

ಇದೇ ಮೊದಲ ಬಾರಿಗೆ ಜಿಮ್ನಾಸ್ಟಿಕ್ ನಲ್ಲಿ ಫೈನಲ್ ಸುತ್ತಿಗೆ ಆಯ್ಕೆಯಾಗಿರುವ ಭಾರತದ ಮಹಿಳಾ ಸ್ಪರ್ಧಿ ಎನಿಸಿಕಕೊಂಡರು. ಈ ಸಾಧನೆ ಮಾಡಿರುವ ದೀಪಾ ಅವರ ಬಗ್ಗೆ ಒಂದಿಷ್ಟು ತಿಳಿದುಕೊಳ್ಳಿ....

ತ್ರಿಪುರಾದ ಅಗರ್ತಲದಲ್ಲಿ ಜನನ

ತ್ರಿಪುರಾದ ಅಗರ್ತಲದಲ್ಲಿ ಜನನ

ತ್ರಿಪುರಾದ ಅಗರ್ತಲದಲ್ಲಿ ಬೆಂಗಾಳಿ ಕುಟುಂಬದಲ್ಲಿ ಆಗಸ್ಟ್ 9, 1993 ರಂದು ಜನಿಸಿದ ದೀಪಾ ಮಂಗಳವಾರ 23ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಲಿದ್ದಾರೆ.

ಎಂಟನೇಯವರಾಗಿ ಫೈನಲ್ ಪ್ರವೇಶಿಸಿದರು

ಎಂಟನೇಯವರಾಗಿ ಫೈನಲ್ ಪ್ರವೇಶಿಸಿದರು

ರಿಯೋ ಒಲಿಂಪಿಕ್ಸ್ ಜಿಮ್ನಾಸ್ಟಿಕ್ ನಲ್ಲಿ ಎರಡು ಯತ್ನಗಳ ಬಳಿಕ ವಾಲ್ಟ್ ವಿಭಾಗದ ಸ್ಪರ್ಧೆಯಲ್ಲಿ 14.850 ಅಂಕಗಳನ್ನು ಗಳಿಸುವ ಮೂಲಕ ದೀಪಾ ಎಂಟನೇಯವರಾಗಿ ಫೈನಲ್ ಪ್ರವೇಶಿಸಿದರು.

ಕೋಚ್ ಬಿಸ್ವೇಶ್ವರ್ ನಂದಿ ತರಬೇತಿ

ಕೋಚ್ ಬಿಸ್ವೇಶ್ವರ್ ನಂದಿ ತರಬೇತಿ

ದ್ಯ ದೀಪಾಗೆ ಕೋಚ್ ಬಿಸ್ವೇಶ್ವರ್ ನಂದಿ ತರಬೇತಿ ನೀಡುತ್ತಿದ್ದಾರೆ. ಆರಂಭದಲ್ಲಿ ತರಬೇತಿಗೆ ಹಣಕಾಸಿನ ತೊಂದರೆ ಅನುಭವಿಸಿದ್ದ ದೀಪಾ ಸ್ಪ್ರಿಂಗ್ ಬೋರ್ಡಿನಲ್ಲಿ ಅಭ್ಯಾಸ ನಡೆಸುತ್ತಿದ್ದರು. ಕೋಚ್ ಸೆಕೆಂಡ್ ಹ್ಯಾಂಡ್ ಭಾಗಗಳನ್ನು ಜೋಡಿಸಿ ವಾಲ್ಟ್ ನಿರ್ಮಿಸಿ ಅವರಿಗೆ ತರಬೇತಿ ನೀಡುತ್ತಿದ್ದರು.

ವಿಶ್ವ ಚಾಂಪಿಯನ್ ಶಿಪ್ ಸ್ಪರ್ಧೆಯಲ್ಲಿ

ವಿಶ್ವ ಚಾಂಪಿಯನ್ ಶಿಪ್ ಸ್ಪರ್ಧೆಯಲ್ಲಿ

ಕಳೆದ ವರ್ಷ ನವೆಂಬರ್‍ ನಲ್ಲಿ ನಡೆದಿದ್ದ ವಿಶ್ವ ಚಾಂಪಿಯನ್ ಶಿಪ್ ಸ್ಪರ್ಧೆಯಲ್ಲಿ 22 ವರ್ಷದ ದೀಪಾ 5ನೇ ಸ್ಥಾನ ಪಡೆದಿದ್ದರೂ ಒಲಿಂಪಿಕ್ಸ್ ಅರ್ಹತೆ ಪಡೆಯಲು ವಿಫಲರಾಗಿದ್ದರು. ಆದರೆ ಈ ಬಾರಿ ರಿಯೋಗೆ ಪ್ರವೇಶಗಿಟ್ಟಿಸಿಕೊಂಡರು.

ಮಹಿಳಾ ಸ್ಪರ್ಧಿ ಅರ್ಹತೆ ಪಡೆದಿರುವುದು ಇದೇ ಮೊದಲು

ಮಹಿಳಾ ಸ್ಪರ್ಧಿ ಅರ್ಹತೆ ಪಡೆದಿರುವುದು ಇದೇ ಮೊದಲು

ಸ್ವಾತಂತ್ರ್ಯ ನಂತರ 11 ಮಂದಿ ಭಾರತೀಯ ಪುರುಷ ಜಿಮ್ನಾಸ್ಟ್ ಗಳು ಒಲಿಂಪಿಕ್ಸ್ ನಲ್ಲಿ ಸ್ಪರ್ಧಿಸಿದ್ದಾರೆ (1952ರಲ್ಲಿ ಇಬ್ಬರು, 1956ರಲ್ಲಿ 3, 1964ರಲ್ಲಿ 6) ಆದರೆ, ಮಹಿಳಾ ಸ್ಪರ್ಧಿಯೊಬ್ಬರು ಅರ್ಹತೆ ಪಡೆದಿರುವುದು ಇದೇ ಮೊದಲು. 52 ವರ್ಷಗಳ ಬಳಿಕ ಭಾರತೀಯ ಜಿಮ್ನಾಸ್ಟ್ ವೊಬ್ಬರು ಒಲಿಂಪಿಕ್ಸ್ ಗೆ ಆಯ್ಕೆಯಾಗಿ ಫೈನಲ್ ತಲುಪಿರುವ ಎಂಬ ಹೆಗ್ಗಳಿಕೆಗೆ ದೀಪಾ ಪಾತ್ರರಾದರು.

ಸತತ ಪ್ರಯತ್ನದ ಫಲವೇ ಈ ಸಾಧನೆ

ಸತತ ಪ್ರಯತ್ನದ ಫಲವೇ ಈ ಸಾಧನೆ

ಕಳೆದ ವರ್ಷ ನವೆಂಬರ್‍ ನಲ್ಲಿ ನಡೆದಿದ್ದ ವಿಶ್ವ ಚಾಂಪಿಯನ್ ಶಿಪ್ ಸ್ಪರ್ಧೆಯಲ್ಲಿ 22 ವರ್ಷದ ದೀಪಾ 5ನೇ ಸ್ಥಾನ ಪಡೆದಿದ್ದರೂ ಒಲಿಂಪಿಕ್ಸ್ ಅರ್ಹತೆ ಪಡೆಯಲು ವಿಫಲರಾಗಿದ್ದರು. ಆದರೆ ಈ ಬಾರಿ ರಿಯೋಗೆ ಪ್ರವೇಶಗಿಟ್ಟಿಸಿಕೊಂಡರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
India's Dipa Karmakar created history last night (August 7) after she became the first Indian woman to qualify for gymnastics finals at the Rio Olympics 2016.
Please Wait while comments are loading...