ರಿಯೋ: ಸುಂದರ ಸ್ಟೇಡಿಯಂಗಳತ್ತ ಒಂದು ನೋಟ

By: ರಮೇಶ್ ಬಿ
Subscribe to Oneindia Kannada

ವಿಶ್ವದ ದೊಡ್ಡ ದೊಡ್ಡ ಕ್ರೀಡಾಕೂಟಗಳನ್ನು ಸಂಘಟಿಸಿದ ಅನುಭವ ಹೊಂದಿರುವ ಸಾಂಬಾ ನಾಡು ಈಗ ಒಲಿಂಪಿಕ್ಸ್ ಕೂಟಕ್ಕೆ ಸಜ್ಜಾಗಿದೆ. ಬ್ರೆಜಿಲ್‌ 2011ರಲ್ಲಿ ವಿಶ್ವ ಮಿಲಿಟರಿ ಗೇಮ್ಸ್, 2013ರಲ್ಲಿ ಫಿಫಾ ಕಾನ್ಪಡರೇಷನ್ ಕಪ್‌, 2007ರಲ್ಲಿ ಪ್ಯಾನ್‌ ಅಮೆರಿಕ ಕ್ರೀಡಾಕೂಟ ಮತ್ತು 2014ರಲ್ಲಿ ಫಿಫಾ ವಿಶ್ವಕಪ್ ಟೂರ್ನಿಗಳನ್ನು ಯಶಸ್ವಿಯಾಗಿ ಆಯೋಜಿಸಿದ ಉತ್ಸಾಹದಲ್ಲಿ ರಿಯೋ ಒಲಿಂಪಿಕ್ಸ್ ಹೊಣೆ ಹೊತ್ತಿದೆ.

[ರಿಯೋ ಒಲಿಂಪಿಕ್ಸ್ ವಿಶೇಷ ಪುಟ ಕ್ಲಿಕ್ಕಿಸಿ]

ಬ್ರೆಜಿಲ್ ನ ರಿಯೋ ಡಿ ಜನೈರೋನಲ್ಲಿ ಆರಂಭವಾಗುವ ರಿಯೋ ಒಲಿಂಪಿಕ್ಸ್ 2016 ಗೆ ದಿನಗಣನೆ ಆರಂಭವಾಗಿದ್ದರೆ, ಇತ್ತ ಟೂರ್ನಿಗೆ ಎಲ್ಲಾ ರೀತಿ ತಯಾರಿಗಳು ಭರ್ಜರಿಯಾಗಿ ನಡೆದಿವೆ. ಆಗಸ್ಟ್ 5 ರಿಂದ ಆರಂಭವಾಗುವ ಈ ಟೂರ್ನಿಗೆ ವಿಶ್ವವನ್ನು ತನ್ನತ್ತ ಸೆಳೆಯುವ ನಿಟ್ಟಿನಲ್ಲಿ ಕಳೆದ ಮೂರು ತಿಂಗಳಿನಿಂದಲೇ ತಯಾರಿ ಆರಂಭವಾಗಿತ್ತು.[ಒಲಿಂಪಿಕ್ಸ್ ಪದಕ ವಿಜೇತರು: ಲಿಯಾಂಡರ್ ನಿಂದ ಸೈನಾ ತನಕ]

ವಿಶ್ವದ ಅತಿದೊಡ್ಡ ಫುಟ್​ಬಾಲ್ ಸ್ಟೇಡಿಯಂಗಳಲ್ಲಿ ಖ್ಯಾತಿ ಹೊಂದಿರುವ, 2 ಬಾರಿ ಫೀಫಾ ವಿಶ್ವಕಪ್ ಟೂರ್ನಿಯ ಫೈನಲ್ ಆಯೋಜಿಸಿರುವ ವಿಶ್ವಶ್ರೇಷ್ಠ ಮರಕಾನ ಸ್ಟೇಡಿಯಂ ಉದ್ಘಾಟನಾ ಸಮಾರಂಭಕ್ಕೆ ಸಾಕ್ಷಿಯಾಗಲಿದೆ.

ಪ್ರಸಿದ್ಧ ಡ್ಯಾನ್ಸ್ ಗಳಲ್ಲಿ ಒಂದಾಗಿರುವ ಸಾಂಬಾ ನೃತ್ಯ ಸೇರಿದಂತೆ ಹಲವು ಶೈಲಿಯ ನೃತ್ಯಗಳು, ವಿವಿಧ ಕಲಾವಿದರು ಈ ಉದ್ಘಾಟನಾ ಸಮಾರಂಭದಲ್ಲಿ ತಮ್ಮ ಕಲೆಯನ್ನು ಪ್ರದರ್ಶನಗೊಳಿಸಲಿದ್ದಾರೆ.

ಈ ಟೂರ್ನಿಯಲ್ಲಿ ಯಾವ-ಯಾವ ದೇಶಗಳು ಪಾಲ್ಗೊಳ್ಳಲಿದೆ ಹಾಗು ಎಷ್ಟು ಆಟಗಾರರು ಸ್ಪರ್ಧಿಸಲಿದ್ದಾರೆ ಮತ್ತು ಏನೆಲ್ಲ ವಿಶೇಷತೆಗಳು ಇರಲಿವೆ ಎಂಬುವುದನ್ನು ಸ್ಲೈಡ್ ಗಳಲ್ಲಿ ಓದಿ...

ಕ್ರೀಡಾಕೂಟಗಳು ಎಲ್ಲೆಲ್ಲಿ ನಡೆಯಲಿವೆ

ಕ್ರೀಡಾಕೂಟಗಳು ಎಲ್ಲೆಲ್ಲಿ ನಡೆಯಲಿವೆ

ಈ ಕ್ರೀಡಾಕೂಟಗಳು ಅತಿಥೇಯ ನಗರದಲ್ಲಿ 33 ಸ್ಥಳಗಳಲ್ಲಿ ಮತ್ತು ಸಾವೊ ಪಾಲೊ ಸೇರಿದಂತೆ ನಗರದ ಐದು ಸ್ಥಳಗಳಲ್ಲಿ ನಡೆಯಲಿವೆ. ಬೆಲೊ ಹಾರಿಜಾಂಟೆ, ಸಾಲ್ವಡಾರ್ ಮತ್ತು ಮನಾಸ್ ಗಳಲ್ಲಿ ನಡೆಯಲಿವೆ.

ಈ ಟೂರ್ನಿಯಲ್ಲಿ ಭಾಗವಹಿಸುವ ರಾಷ್ಟ್ರಗಳು

ಈ ಟೂರ್ನಿಯಲ್ಲಿ ಭಾಗವಹಿಸುವ ರಾಷ್ಟ್ರಗಳು

ರಿಯೋ ಒಲಿಂಪಿಕ್ಸ್ ನಲ್ಲಿ ಸುಮಾರು 206 ರಾಷ್ಟ್ರಗಳು ಭಾಗವಹಿಸಲಿವೆ ಎಂದು ಅಂದಾಜಿಸಲಾಗಿತ್ತು. ಆದರೆ ಈಗ ಸುಮಾರು 120 ದೇಶಗಳು ಈ ಟೂರ್ನಿಯಲ್ಲಿ ಭಾಗವಹಿಸಲಿವೆ.

ಈ ಟೂರ್ನಿಯಲ್ಲಿ ಭಾಗವಹಿಸುವ ಕ್ರೀಡಾಪಟುಗಳು

ಈ ಟೂರ್ನಿಯಲ್ಲಿ ಭಾಗವಹಿಸುವ ಕ್ರೀಡಾಪಟುಗಳು

ವಿವಿಧ ರಾಷ್ಟ್ರಗಳ ಕ್ರೀಡಾಪಟುಗಳು ರಿಯೋ ಒಲಿಂಪಿಕ್ಸ್ ನಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಭಾರತದಿಂದ 120ಕ್ಕೂ ಅಧಿಕ ಕ್ರೀಡಾಳು ಸೇರಿದಂತೆ ಸರಿ ಸುಮಾರು 10,000 ಆಟಗಾರರು ವಿವಿಧ ಕ್ರೀಡೆಗಳ ಪ್ರಶಸ್ತಿಗಳಿಗೆ ಪೈಪೋಟಿ ನಡೆಸಲಿದ್ದಾರೆ.

ಭಾರತೀಯ ಶೈಲಿಯ ಊಟದ ವ್ಯವಸ್ಥೆ

ಭಾರತೀಯ ಶೈಲಿಯ ಊಟದ ವ್ಯವಸ್ಥೆ

ರಿಯೋ ಒಲಿಂಪಿಕ್ಸ್ ನಲ್ಲಿ ಭಾರತೀಯ ಕ್ರೀಡಾಪಟುಗಳಿಗೆ ಭಾರತೀಯ ಶೈಲಿಯ ಆಹಾರ ನೀಡುವಂತೆ ಭಾರತೀಯ ಕ್ರೀಡಾ ಪ್ರಾಧಿಕಾರವು ರಿಯೋ ಕಮಿಟಿಯನ್ನು ಕೋರಿತ್ತು. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿರುವ ರಿಯೋ ಕಮಿಟಿ ಊಟದ ಮೆನುವಿನಲ್ಲಿ ಭಾರತೀಯ ಶೈಲಿಯ ಊಟವನ್ನು ಅಧಿಕೃತವಾಗಿಯೇ ಸೇರಿಸಿದೆ. ಇದರಿಂದ ರಿಯೋ ಒಲಿಂಪಿಕ್ ನಲ್ಲಿ ಭಾಗವಹಿಸುವ ಭಾರತೀಯ ಕ್ರೀಡಾಪಟುಗಳಿಗೆ ಭಾರತೀಯ ಶೈಲಿಯ ಊಟ ಮತ್ತು ಉಪಹಾರ ದೊರೆಯಲಿದೆ.

ವಿಶ್ವ ಶ್ರೇಷ್ಠ ಮರಕಾನ ಸ್ಟೇಡಿಯಂನ ಸಾಮರ್ಥ್ಯ

ವಿಶ್ವ ಶ್ರೇಷ್ಠ ಮರಕಾನ ಸ್ಟೇಡಿಯಂನ ಸಾಮರ್ಥ್ಯ

ಮರಕಾನ ಸ್ಟೇಡಿಯಂನಲ್ಲಿ 2016 ರಿಯೋ ಒಲಿಂಪಿಕ್ಸ್ ಟೂರ್ನಿಯ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಸುಮಾರು 78,000 ಪ್ರೇಕ್ಷಕರು ಕೂಡುವ ಸಾಮರ್ಥ್ಯ ಹೊಂದಿರುವ ಬಹುದೊಡ್ಡ ಮೈದಾನ ಇದಾಗಿದೆ.

ರಿಯೋನಲ್ಲಿ ಹೊಸ ಕ್ರೀಡೆಗಳ ಸೇರ್ಪಡೆ

ರಿಯೋನಲ್ಲಿ ಹೊಸ ಕ್ರೀಡೆಗಳ ಸೇರ್ಪಡೆ

ಇದೇ ಮೊದಲ ಬಾರಿಗೆ ರಿಯೋ ಒಲಿಂಪಿಕ್ಸ್ ನಲ್ಲಿ ಗಾಲ್ಫ್ ಮತ್ತು ರಗ್ಬಿ ಆಟವನ್ನು ಸೇರ್ಪಡೆ ಮಾಡಿರುವುದು ರಿಯೋದ ಮತ್ತೊಂದು ವಿಶೇಷವೆನಿಸಿದೆ. ಇಲ್ಲಿವರೆಗೆ ಈ ಕ್ರೀಡೆಗಳಿಗೆ ಒಲಿಂಪಿಕ್ಸ್ ಗಳಲ್ಲಿ ಅವಕಾಶ ನೀಡಿರಲಿಲ್ಲ. ಆದರೆ, ಅಗ್ರಗಣ್ಯ ಗಾಲ್ಫ್ ಪಟುಗಳು ಟೂರ್ನಿಯಿಂದ ದೂರ ಉಳಿಯುತ್ತಿರುವುದು ಬೇಸರದ ಸಂಗತಿಯಾಗಿದೆ.

ಮುಂದಿನ ಒಲಿಂಪಿಕ್ಸ್ ಯಾವುದು ಮತ್ತು ಎಲ್ಲಿ?

ಮುಂದಿನ ಒಲಿಂಪಿಕ್ಸ್ ಯಾವುದು ಮತ್ತು ಎಲ್ಲಿ?

ಅಗಸ್ಟ್ 5 ರಂದು ಆರಂಭವಾಗಿ ಅದೇ ತಿಂಗಳು 21 ಕ್ಕೆ ಈ ರಿಯೋ ಒಲಿಂಪಿಕ್ಸ್ ಮುಕ್ತಾಯಗೊಳ್ಳಲಿದ್ದು, ಮುಂದಿನ 2020ರಲ್ಲಿ ಜಪಾನ್ ನಲ್ಲಿ ಬೇಸಿಗೆ ಒಲಿಂಪಿಕ್ಸ್ ನಡೆಯಲಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Rio Olympics 2016: Venue and stadiums preview: Rio Olympics 2016, athletes have started arriving in Brazil for the biggest sporting spectacle. The Games will be officially declared open on August 5 at the Opening Ceremony.
Please Wait while comments are loading...