ಜಗದೇಕ ಓಟಗಾರ ಬೋಲ್ಟ್ ಸದ್ಯದ ಟಾರ್ಗೆಟ್ ಏನು?

Posted By:
Subscribe to Oneindia Kannada

ರಿಯೋ ಡಿ ಜನೈರೋ, ಆಗಸ್ಟ್ 10: ರಿಯೋ ಒಲಿಂಪಿಕ್ಸ್ ನಲ್ಲಿ ಒಂದೆಡೆ ಈಜು ಸ್ಪರ್ಧೆಯಲ್ಲಿ ಮೈಕಲ್ ದಾಖಲೆಗಳ ಧೂಳಿಪಟ ಮಾಡುತ್ತಿರುವುದನ್ನು ಕಣ್ತುಂಬಿಕೊಂಡಿರುವ ಅಭಿಮಾನಿಗಳು ಈಗ ಅಥ್ಲೆಟಿಕ್ಸ್ ಸ್ಪರ್ಧೆಗಳ ಆರಂಭಕ್ಕೆ ಕಾತುರದಿಂದ ಕಾದಿದ್ದಾರೆ.

ರಿಯೋ ಒಲಿಂಪಿಕ್ಸ್ 2016 : ಗ್ಯಾಲರಿ || ವಿಶೇಷ ಪುಟ

ಜಗದೇಕ ಓಟಗಾರ ಉಸೇನ್ ಬೋಲ್ಟ್ ಅವರ ಸದ್ಯದ ಟಾರ್ಗೆಟ್ ಏನು? ಯಾವ ದಾಖಲೆ ಮುರಿಯಲು ಸಿದ್ಧರಾಗುತ್ತಿದ್ದಾರೆ ಎಂಬ ಕುತೂಹಲ ಎಲ್ಲರಲ್ಲೂ ಮನೆ ಮಾಡಿದೆ.

Rio Olympics 2016: Usain Bolt bids to smash 200m world record

ಜಮೈಕಾದ ಸ್ಪ್ರಿಂಟರ್ ಉಸೇನ್ ಬೋಲ್ಟ್ ಅವರು 100, 200 ಹಾಗೂ 4X100 ಮೀಟರ್ ಸ್ಪರ್ಧೆಗಳಲ್ಲಿ ಪದಕ ಗೆಲ್ಲುವ ನಿರೀಕ್ಷೆ ಇದೆ. ಆದರೆ, ಬೋಲ್ಟ್ ಗೆ ಸದ್ಯಕ್ಕೆ 200 ಮೀಟರ್ ಓಟದಲ್ಲಿ ವಿಶ್ವ ದಾಖಲೆ ಮುರಿಯುವ ಅಸೆಯಿದೆಯಂತೆ. [ಉಸೇನ್ ಬೋಲ್ಟ್ ಶರವೇಗದ ರಹಸ್ಯ ಕುತೂಹಲಕಾರಿ]

ಇದು ನನ್ನ ಕೊನೆಯ ಒಲಿಂಪಿಕ್ಸ್, ನನ್ನ ಪ್ರತಿಭೆ ಪ್ರದರ್ಶನಕ್ಕೆ ಎಲ್ಲಾ ಒಲಿಂಪಿಕ್ಸ್ ಉತ್ತಮ ವೇದಿಕೆ ಒದಗಿಸಿತ್ತು. ಆದರೆ, ಅನೇಕ ಅಭಿಮಾನಿಗಳು ನನ್ನಿಂದ ಇನ್ನೂ ಹೆಚ್ಚಿನದ್ದನ್ನು ನಿರೀಕ್ಷಿಸಿದ್ದಾರೆ. ಅದರಲ್ಲೂಈ 200 ಮೀಟರ್ ನಲ್ಲಿ 19.19 ಸೆಕೆಂಡುಗಳ ದಾಖಲೆಯನ್ನು ಮುರಿಯುವುದು ನನ್ನ ಸದ್ಯದ ಗುರಿ ಎಂದಿದ್ದಾರೆ.

ನನಗೆ 100 ಮೀಟರ್ ಓಡುವುದು ಕಷ್ಟವೇನಲ್ಲ, 200 ಮೀಟರ್ ಎಂದಾಗ ಸ್ವಲ್ಪ ನಡುಕ ಹುಟ್ಟುತ್ತದೆ ಎಂದು ಹೇಳಿದರು. 100, 200 ಹಾಗೂ 4X100 ರಿಲೇಯಲ್ಲಿ ಚಿನ್ನ ಗೆಲ್ಲುವ ಮೂಲಕ ಮತ್ತೊಮ್ಮೆ ಅದ್ಭುತ ಸಾಧನೆ ಮಾಡಲು ಬೋಲ್ಟ್ ಸಜ್ಜಾಗಿದ್ದಾರೆ. ಆಗಸ್ಟ್ 13ರಿಂದ ಪುರುಷರ ಓಟದ ಸ್ಪರ್ಧೆ ಆರಂಭಗೊಳ್ಳಲಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Jamaican sprinter Usain Bolt aims to claim a new 100-200-4x100 triple win in Rio Olympics and will try to smash the 200-metre world record
Please Wait while comments are loading...