ರಿಯೋ ಒಲಿಂಪಿಕ್ ಮಹಾಕೂಟಕ್ಕೆ ವರ್ಣರಂಜಿತ ವಿದಾಯ

By: ಕ್ರೀಡಾ ಡೆಸ್ಕ್
Subscribe to Oneindia Kannada

ರಿಯೋ ಡಿ ಜನೈರೋ, ಆಗಸ್ಟ್, 22 : ಸಾಂಬಾ ನಾಡು ಬ್ರೆಜಿಲ್‌ ನಲ್ಲಿ ನಡೆದ 31ನೇ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ವರ್ಣರಂಜಿತ ತೆರೆ ಬಿದ್ದಿದೆ. ರಿಯೋದಲ್ಲಿ ನಡೆದ 16 ದಿನಗಳ ಕ್ರೀಡಾ ಹಬ್ಬ ಮುಕ್ತಾಯವಾಗಿದ್ದು, ರಿಯೋ ಡಿ ಜನೈರೋದ ಕ್ರೀಡಾ ಗ್ರಾಮದಲ್ಲಿ ಲೇಸರ್ ಪ್ರದರ್ಶನ ಹಾಗೂ ಬೆಳಕಿನ ಚಿತ್ತಾರ ಸಿಡಿಸಿದ ಸಿಡಿಮದ್ದು ಪ್ರದರ್ಶನದ ಮೂಲಕ ಕ್ರೀಡಾ ಉತ್ಸವ ಒಲಿಂಪಿಕ್ಸ್ ಗೆ ವಿದ್ಯುಕ್ತ ತೆರೆ ಎಳೆಯಲಾಯಿತು.

ರಿಯೋ ಒಲಿಂಪಿಕ್ಸ್ 2016 : ಗ್ಯಾಲರಿ || ವಿಶೇಷ ಪುಟ

ತುಂತುರು ಮಳೆ ಸರಿಯುತ್ತಿದ್ದರರೂ ಭಾನುವಾರ ಮರಕಾನಾ ಸ್ಟೇಡಿಯಂನಲ್ಲಿ ಮೂರು ತಾಸು ನಡೆದ ಈ ಮುಕ್ತಾಯ ಸಮಾರೋಪ ಸಮಾರಂಭಕ್ಕೆ ಸಾವಿರಾರು ಜನರು ಸಾಕ್ಷಿಯಾದರು. ಲೇಜರ್​​ ಲೈಟ್​​ನ ವರ್ಣ ರಂಜಿತ ಕಾರ್ಯಕ್ರಮದಲ್ಲಿ ಬ್ರೆಜಿಲ್​​ ಸಂಪ್ರದಾಯವನ್ನು ಸೂಚಿಸುವ ಹಲವು ನೃತ್ಯ ಸಂಗೀತ ಕಾರ್ಯಕ್ರಮಗಳು ನಡೆದವು. [ಚಿತ್ರಗಳು : ರಿಯೋ ಒಲಿಂಪಿಕ್ಸ್ 2016ಕ್ಕೆ ವರ್ಣರಂಜಿತ ಚಾಲನೆ]

Rio Olympics 2016: Spectacular closing ceremony as Olympic flag goes to Tokyo

ದೇಶದ ಅಥ್ಲಿಟ್ ಗಳು ತಮ್ಮ-ತಮ್ಮ ರಾಷ್ಟ್ರ ಧ್ವಜ ಹಾಗೂ ತಾವು ಗೆದ್ದ ಪದಕದೊಂದಿಗೆ ಪಥ ಸಂಚಲನದಲ್ಲಿ ಕಾಣಿಸಿಕೊಂಡರು. ವಿವಿಧ ದೇಶಗಳ ಸಾವಿರಾರು ಕ್ರೀಡಾಪಟುಗಳು ಮತ್ತು ಅಭಿಮಾನಿಗಳು ಈ ಅಪೂರ್ವ ಕ್ಷಣಗಳನ್ನು ಕಣ್ತುಂಬಿಕೊಂಡರು.

31ನೇ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ತೆರೆ ಬಿದ್ದಿದ್ದು, ಮುಂದಿನ 2020ರ ಒಲಿಂಪಿಕ್ಸ್ ಗಾಗಿ ಜಪಾನ್‌ನ ಟೋಕಿಯೋದಲ್ಲಿ ಸೇರೋಣ ಎನ್ನುವ ಮೂಲಕ ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಕಮೀಟಿ ಮುಖ್ಯಸ್ಥ ಥಾಮಸ್ ಬಚ್ ಅವರು 31ನೇ ಕ್ರೀಡಾಕೂಟಕ್ಕೆ ಮಂಗಳ ಹಾಡಿದರು.

ಆ ಬಳಿಕ ಮುಂದಿನ ಒಲಿಂಪಿಕ್ಸ್​​ ಆಯೋಜನೆ ಮಾಡುವ ಜಪಾನ್​​ನ ಟೋಕಿಯೋಗೆ ಧ್ವಜವನ್ನು ಹಸ್ತಾಂತರಿಸಲಾಯ್ತು.

Rio Olympics 2016: Spectacular closing ceremony as Olympic flag goes to Tokyo

ಕ್ರೀಡಾಕೂಟದಲ್ಲಿ ಒಂದು ಬೆಳ್ಳಿ ಮತ್ತು ಕಂಚಿನ ಪದಕಕ್ಕೆ 31ನೇ ಒಲಿಂಪಿಕ್ಸ್ ಅಭಿಯಾನ ಅಂತ್ಯಗೊಳಿಸಿದ ಭಾರತ 67ನೇ ಸ್ಥಾನಕ್ಕೆ ಸಂತೃಪ್ತಿ ಪಡೆಯಿತು. ಅಮೆರಿಕ 46 ಚಿನ್ನ ಸಹಿತ ಒಟ್ಟು 121 ಪದಕಗಳನ್ನು ಗೆಲ್ಲುವ ಮೂಲಕ ಅಗ್ರಸ್ಥಾನ ಪಡೆದಿದೆ. ಚೀನಾ 26 ಬಂಗಾರದ ಪದಕ ಸಹಿತ ಒಟ್ಟು 70 ಪದಕಗಳು ಪಡೆದರೆ, ಬ್ರಿಟನ್ 27 ಚಿನ್ನದ ಪದಕದೊಂದಿಗೆ ಒಟ್ಟು 67 ಪದಕಗಳೊಂದಿಗೆ ಕ್ರಮವಾಗಿ ದ್ವಿತೀಯ ಮತ್ತು ತೃತೀಯ ಸ್ಥಾನವನ್ನು ಪಡೆದಿವೆ.

ಒಟ್ಟಾರೆ ಸತತ 16 ದಿನಗಳ ಕ್ರೀಡೋತ್ಸವಕ್ಕೆ ತೆರೆ ಬಿದ್ದಿದ್ದು, ಈ ಒಲಿಂಪಿಕಸ್ ನಲ್ಲಿ ಸೋತವರು ಮುಂದಿನ ಒಲಿಂಪಿಕ್ ನಲ್ಲಿ ಪದಕ ಪಡೆಯುವ ಸಂಕಲ್ಪ ಮಾಡಿದ್ದರೆ. ಇನ್ನು ಕೆಲ ಸ್ಪರ್ಧಿಗಳು ಇನ್ನಷ್ಟು ಸಾಧನೆಯನ್ನು ಮುಂಬರುವ ಒಲಿಂಪಿಕ್ ನಲ್ಲಿ ಮಾಡುವೆ ಎನ್ನುವ ಆಸೆಭಾವದೊಂದಿಗೆ ರಿಯೋ ಮಹಾಕೂಟಕ್ಕೆ ವಿದಾಯ ಹೇಳಿದರು. ಇದೀಗ ಎಲ್ಲರ ಚಿತ್ತ 2020ರ ಟೊಕಿಯೋ ಒಲಿಂಪಿಕ್ಸ್ ನತ್ತ ನೆಟ್ಟಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The colourful ceremony, lasting almost three hours, celebrated Brazil's arts and was held in a wet Maracana.
Please Wait while comments are loading...