ರಿಯೋ 2016: ಮೊದಲ ದಿನವೇ ವಿಶ್ವ ದಾಖಲೆ ಬರೆದ ವೀರ!

By: ಕ್ರೀಡಾ ಡೆಸ್ಕ್
Subscribe to Oneindia Kannada

ರಿಯೋ ಡಿ ಜನೈರೊ ಅಗಸ್ಟ್ 06: ರಿಯೋ ಒಲಿಂಪಿಕ್ಸ್ ಆರಂಭವಾಗಿದ್ದೇ ತಡ ಆಗಲೇ ದಾಖಲೆಗಳ ಪಟ್ಟಿ ಸಹ ಆರಂಭಗೊಂಡಿದೆ. ಒಲಿಂಪಿಕ್ಸ್ ಕ್ರೀಡಾಕೂಟದ ಆರಂಭದ ದಿನವೇ ಪುರುಷರ ವೈಯಕ್ತಿಕ ಬಿಲ್ಲುಗಾರಿಕೆ ವಿಭಾಗದಲ್ಲಿ 2 ಬಾರಿ ವಿಶ್ವ ಚಾಂಪಿಯನ್ ದಕ್ಷಿಣ ಕೊರಿಯಾದ ಬಿಲ್ಲುಗಾರ ಕಿಮ್ ವೂ ಜಿನ್ ನೂತನ ವಿಶ್ವ ದಾಖಲೆ ಬರೆದ ವೀರ ಎನಿಸಿಕೊಂಡರು.

ರಿಯೋ ಒಲಿಂಪಿಕ್ಸ್ 2016 : ಗ್ಯಾಲರಿ || ವಿಶೇಷ ಪುಟ | ಒಲಿಂಪಿಕ್ಸ್ ಲೈವ್ ಯಾವ ವಾಹಿನಿಯಲ್ಲಿ ನೋಡ್ಬಹುದು?

ಶುಕ್ರವಾರ (ಅ.06) ಸಾಂಬಾಡ್ರೊಮ್ ನಲ್ಲಿ ನಡೆದ ಪುರುಷರ ವೈಯಕ್ತಿಕ ಬಿಲ್ಲುಗಾರಿಕೆ ವಿಬಾಗದಲ್ಲಿ ಕಿಮ್ ವೂ ಜಿನ್ ಅವರು ನಿಖರ ಗುರಿಗಳ ಮೂಲಕ ಒಟ್ಟು 700 ಅಂಕಗಳನ್ನು ಪಡೆದುಕೊಂಡು ರಿಯೋ ಒಲಿಂಪಿಕ್ ನಲ್ಲಿ ಹೊಸ ದಾಖಲೆ ನಿರ್ಮಿಸಿದರು. [ಚಿತ್ರಗಳು : ರಿಯೋ ಒಲಿಂಪಿಕ್ಸ್ 2016ಕ್ಕೆ ವರ್ಣರಂಜಿತ ಚಾಲನೆ]

Korea's Kim Woo-jin sets archery world record on opening day

ಇದರಿಂದ ಪುರುಷರ ವೈಯಕ್ತಿಕ ಬಿಲ್ಲಗಾರಿಕೆಯ ಪಟ್ಟಿಯಲ್ಲಿ ಅಗ್ರ ಸ್ಥಾನವನ್ನು ಅಲಂಕರಿಸಿದರು. [ಒಲಿಂಪಿಕ್ಸ್ 2016 : 10 ಸಾವಿರ ಕ್ರೀಡಾಪಟುಗಳು]

ಇನ್ನು ಭಾರತದ 24 ವರ್ಷದ ಅತನು ದಾಸ್ ಮೊದಲ ಸುತ್ತಿನಲ್ಲಿ 683 ಅಂಕಗಳನ್ನು ಪಡೆಯುವ ಮೂಲಕ 5ನೇ ಸ್ಥಾನ ಪಡೆದು ಮುಂದಿನ ಸುತ್ತಿಗೆ ಅರ್ಹತೆ ಪಡೆದುಕೊಂಡರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
South Korea's archer and two-time World Champion Kim Woo-jin set a world record in the Rio Olympics' qualification round as archery got underway at Brazil's historic Samba street here on Friday (Aug 5).
Please Wait while comments are loading...