ಶಾಟ್‌ಪುಟ್‌ ಪಟು ಇಂದ್ರಜಿತ್‌ ಡೋಪಿಂಗ್ ಟೆಸ್ಟ್ ನಲ್ಲಿ ಫೇಲ್

Posted By:
Subscribe to Oneindia Kannada

ನವದೆಹಲಿ, ಜುಲೈ 26: ಕುಸ್ತಿಪಟು ನರಸಿಂಗ್ ಯಾದವ್ ಅವರು ಉದ್ದೀಪನ ಮದ್ದು ಪರೀಕ್ಷೆಯಲ್ಲಿ ಪಾಸಿಟಿವ್ ಎಂದು ವರದಿ ಪಡೆದು ರಿಯೋ ಒಲಿಂಪಿಕ್ಸ್ 2006ರಿಂದ ಹೊರಬೀಳುವ ಹಂತ ಮುಟ್ಟಿರುವ ಸುದ್ದಿ ತಿಳಿದಿರಬಹುದು. ಈಗ ಭಾರತದ ಶಾಟ್‌ಪುಟ್‌ ಪಟು ಇಂದ್ರಜಿತ್‌ ಸಿಂಗ್‌ ಕೂಡಾ ಉದ್ದೀಪನ ಮದ್ದು ಪರೀಕ್ಷೆಯಲ್ಲಿ ವಿಫಲರಾಗಿದ್ದಾರೆ.

ಆಗಸ್ಟ್‌ 5 ರಿಂದ ಪ್ರಾರಂಭವಾಗಲಿರುವ ರಿಯೋ ಒಲಿಂಪಿಕ್ಸ್‌ಗೆ ತೆರಳುವ ಅವಕಾಶ ಕಳೆದುಕೊಳ್ಳುವ ಭೀತಿಯಲ್ಲಿ ಇಂದ್ರಜೀತ್ ಇದ್ದಾರೆ. ಇಂದ್ರಜಿತ್‌ ಅವರ 'ಎ' ಸ್ಯಾಂಪಲ್‌ ಪರೀಕ್ಷೆಯಲ್ಲಿ ನಿಷೇಧಿತ ಮದ್ದು ಸ್ಪೀರಾಯಿಡ್‌ ಸೇವನೆ ಖಚಿತವಾಗಿದೆ ಎಂದು ನ್ಯಾಷನಲ್‌ Anti-ಡೋಪಿಂಗ್‌ ಎಜೆನ್ಸಿ (ನಾಡಾ) ಪಿಟಿಐ ಸುದ್ದಿ ಸಂಸ್ಥೆಗೆ ಹೇಳಿದೆ.

Rio Olympics 2016 shot putter Inderjeet Singh fails dope test

ಜೂನ್‌ 22 ರಂದು ಇಂದ್ರಜಿತ್ (22) ಅವರ 'ಎ' ಸ್ಯಾಂಪಲ್ ಪರೀಕ್ಷೆ ನಡೆಸಲಾಗಿತ್ತು. 'ಬಿ' ಸ್ಯಾಂಪಲ್‌ನಲ್ಲೂ ವಿಫಲವಾದರೆ ರಿಯೋ ಒಲಿಂಪಿಕ್ಸ್‌ ತೆರಳಲು ಕಷ್ಟವಾಗುತ್ತದೆ. ಈಗ ಇತ್ತೀಚೆಗೆ ಕುಸ್ತಿಪಟು ನರಸಿಂಗ್‌ ಯಾದವ್‌ ಕೂಡಾ ಉದ್ದೀಪನ ಮದ್ದು ಪರೀಕ್ಷೆಯಲ್ಲಿ ಎರಡು ಬಾರಿ ಫೇಲ್ ಆಗಿದ್ದರು. ವಾಡಾ ಕಾಯ್ದೆಯ ಪ್ರಕಾರ ನಾಲ್ಕು ವರ್ಷ ನಿಷೇಧಕ್ಕೊಳಗಾಗಬೇಕಾಗುತ್ತದೆ ಎಂದು ನಾಡಾ ಹೇಳಿದೆ.

ರಿಯೋ ಒಲಿಂಪಿಕ್ಸ್ ಗೆ ಕಳೆದ ವರ್ಷವೇ ಅರ್ಹತೆ ಪಡೆದುಕೊಂಡಿದ್ದ ಇಂದ್ರಜಿತ್ ಅವರು 2014ರ ಏಷ್ಯನ್‌ ಗೇಮ್ಸ್‌ನಲ್ಲಿ ಇಂದ್ರಜಿತ್‌ ಸಿಂಗ್‌ ಬೆಳ್ಳಿ ಪದಕ ಗೆದ್ದಿದ್ದರು.(ಪಿಟಿಐ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Just a few days after wrestler Narsingh Yadav was caught for doping, another Rio Olympics qualified athlete Inderjeet Singh, a shot putter, has failed a dope test as his 'A' sample returned positive for a banned substance.
Please Wait while comments are loading...