ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಸೆಮೀಸ್ ನಲ್ಲಿ ಸೋಲು: ಕಂಚಿನ ಪದಕಕ್ಕಾಗಿ ಸಾನಿಯಾ-ಬೋಪಣ್ಣ ಫೈಟ್

By Mahesh

ರಿಯೋ ಡಿ ಜನೈರೋ, ಆಗಸ್ಟ್ 14: ಮಿಶ್ರ ಡಬಲ್ಸ್ ವಿಭಾಗದಲ್ಲಿ ಸೆಮಿ ಫೈನಲ್ ತಲುಪಿದ್ದ ಭಾರತದ ಸಾನಿಯ ಮಿರ್ಜಾ ಹಾಗೂ ರೋಹನ್ ಬೋಪಣ್ಣ ಜೋಡಿ ಶನಿವಾರ ನಡೆದ ಪಂದ್ಯದಲ್ಲಿ ಸೋಲು ಕಂಡಿದೆ.

ರಿಯೋ ಒಲಿಂಪಿಕ್ಸ್ 2016 : ಗ್ಯಾಲರಿ || ವಿಶೇಷ ಪುಟ

ಅಮೆರಿಕದ ವೀನಸ್ ವಿಲಿಯಮ್ಸ್ ಹಾಗೂ ರಾಜೀವ್ ರಾಮ್ ಜೋಡಿಗೆ ಶರಣಾಗಿದೆ. ಈಗ ಭಾರತದ ಜೋಡಿ ಚಿನ್ನ, ಬೆಳ್ಳಿ ಆಸೆ ಬಿಟ್ಟು, ಕಂಚಿನ ಪದಕಕ್ಕಾಗಿ ಹೋರಾಟ ನಡೆಸಬೇಕಿದೆ. [ರಿಯೋ ಅಥ್ಲೆಟಿಕ್ಸ್: ಮೊದಲ ದಿನ ಭಾರತದ ಸಾಧನೆ ಶೂನ್ಯ]

Sania and Bopanna lose semis

ರಿಯೋ ಒಲಿಂಪಿಕ್ಸ್ 2016 ರ ಟೆನ್ನಿಸ್ ಪಂದ್ಯಗಳಲ್ಲಿ ಭಾರತಕ್ಕೆ ಪದಕ ಗೆಲ್ಲುವ ಆಸೆ ಚಿಗುರೊಡೆಯುವಂತೆ ಮಾಡಿದ್ದ ಸಾನಿಯಾ ಹಾಗೂ ರೋಹನ್ ಬೋಪಣ್ಣ ಅವರು ಸೆಮಿಫೈನಲ್ ಪಂದ್ಯದಲ್ಲಿ ಮುನ್ನಡೆ ಸಾಧಿಸಿದ್ದರೂ ಪಂದ್ಯವನ್ನು ವಶಪಡಿಸಿಕೊಳ್ಳುವಲ್ಲಿ ವಿಫಲರಾದರು.[ರಿಯೋ ಜಿಮ್ನಾಸ್ಟಿಕ್ : ದೀಪಾ ಕರ್ಮಾಕರ್ ಫೈನಲಿಗೆ ಜೈ ಹೋ!]

ಮಿಶ್ರ ಡಬಲ್ಸ್ ವಿಭಾಗದ ಸೆಮಿಫೈನಲ್ ನಲ್ಲಿ ಭಾರತದ ಸಾನಿಯ ಮಿರ್ಜಾ ಹಾಗೂ ರೋಹನ್ ಬೋಪಣ್ಣ ಜೋಡಿ 6-2,2-6,3-10 ಅಂತರದಲ್ಲಿ ಅಮೆರಿಕ ಜೋಡಿ ಸೋಲಿಸಿತು. ಎರಡು ಸೆಟ್ ಗಳು ಸಮನಾದ ಮೇಲೆ ಟೈ ಬ್ರೇಕರ್ ನಲ್ಲಿ ಅಮೆರಿಕ ಜೋಡಿ ಉತ್ತಮ ಆಟ ಪ್ರದರ್ಶಿಸಿ, ಪಂದ್ಯವನ್ನು ತನ್ನದಾಗಿಸಿಕೊಂಡಿತು.

ಕ್ವಾರ್ಟರ್ ಫೈನಲ್​ನಲ್ಲಿ ಗ್ರೇಟ್ ಬ್ರಿಟನ್​ನ ಆಂಡಿ ಮರ್ರೆ ಹಾಗೂ ಹಿದರ್ ವಾಟ್ಸನ್ ಜೋಡಿಯನ್ನು ಭಾರತೀಯ ಜೋಡಿ ಸೋಲಿಸಿ ಸೆಮಿಫೈನಲ್ ಹಂತ ತಲುಪಿದ್ದರು. ಈಗ ಇನ್ನೊಂದು ಪಂದ್ಯ ಗೆದ್ದರೆ ಕಂಚಿನ ಪದಕ ಖಚಿತವಾಗಲಿದೆ.

ಭಾರತಕ್ಕೆ ಒಲಿಂಪಿಕ್ಸ್ ಟೆನಿಸ್​ ಸಿಂಗಲ್ಸ್ ನಲ್ಲಿ ಇಲ್ಲಿತನಕ ಒಂದು ಪದಕ ಸಿಕ್ಕಿದೆ. 1996ರ ಅಟ್ಲಾಂಟ ಗೇಮ್ಸ್ ನಲ್ಲಿ ಲಿಯಾಂಡರ್ ಪೇಸ್ ಸಿಂಗಲ್ಸ್ ವಿಭಾಗದಲ್ಲಿ ಕಂಚಿನ ಪದಕ ಗೆದ್ದಿದ್ದರು. (ಪಿಟಿಐ)

Story first published: Wednesday, January 3, 2018, 10:14 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X