ಕಡೆಗೂ ಭಾರತ ಒಂದು ಪದಕ ಗೆದ್ದುಕೊಂಡಿದೆ, ಹುರ್ರೆ!

Posted By:
Subscribe to Oneindia Kannada

ರಿಯೋ ಡಿ ಜನೈರೋ, ಆಗಸ್ಟ್ 18 : ಒಂದೂಕಾಲು ಶತಕೋಟಿ ಜನರಿರುವ ಬಾರತಕ್ಕೆ ಕಡೆಗೂ ಒಂದು ಪದಕ ದಕ್ಕಿದಂತಾಗಿದೆ. ಓಯಾಸಿಸ್ ನಲ್ಲಿ ದಾಹದಿಂದ ಬಳಲುತ್ತಿದ್ದವನಿಗೆ ಒಂದು ಅಮೃತಬಿಂದು ಸಿಕ್ಕಂತಾಗಿದೆ. ಒಲಿಂಪಿಕ್ಸ್ ನಲ್ಲಿ ಕಡೆಗೂ ಭಾರತ ಒಂದು ಪದಕ ಗೆದ್ದುಕೊಂಡಿದೆ, ಹುರ್ರೆ!

ಭಾರತದ ಮಹಿಳಾ ಕುಸ್ತಿಪಟು ಸಾಕ್ಷಿ ಮಲಿಕ್ ಅವರು ಇತಿಹಾಸ ಸೃಷ್ಟಿಸಿದ್ದು, ಕಂಚಿನ ಪದಕ ಗೆದ್ದು ಇಡೀ ಭಾರತದಾದ್ಯಂತ ಹರ್ಷದ ಹೊನಲು ಹರಿಸಿದ್ದಾರೆ. ರಕ್ಷಾ ಬಂಧನದ ಸಮಯದಲ್ಲಿಯೇ ಭಾರತ ಪದಕ ಗೆದ್ದಿರುವುದು ಹಬ್ಬದ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಿದೆ. [ಕುಸ್ತಿ: ಐತಿಹಾಸಿಕ ಸಾಧನೆ ಮಾಡಿದ ಸಾಕ್ಷಿ ಮಲಿಕ್ ಯಾರು?]

Rio Olympics 2016 : Sakshi Malik creates history by winning medal in Wrestling

23 ವರ್ಷದ ಹರ್ಯಾಣಾದ ಸಾಕ್ಷಿ ಮಲಿಕ್ ಅವರು, 58 ಕೆಜಿ ವಿಭಾಗದಲ್ಲಿ ಕಿರ್ಗಿಸ್ತಾನದ ಐಸುಲು ಟಿನಿಬೆಕೋವಾ ಅವರನ್ನು ಸೋಲಿಸಿ ಕಂಚಿನ ಪದಕವನ್ನು ಭಾರತದ ಕೊರಳಿಗೆ ತೊಡಿಸಿದ್ದಾರೆ. ಆರಂಭದಲ್ಲಿ ಭಾರೀ ಹಿನ್ನಡೆ ಅನುಭವಿಸಿದ್ದರೂ ಕೆಚ್ಚೆದೆಯಿಂದ ಹೋರಾಡಿ ಭಾರತ ಅಭಿಮಾನದಿಂದ ಹುಚ್ಚೆದ್ದು ಕುಣಿಯುವಂತೆ ಮಾಡಿದ್ದಾರೆ.

ಒಲಿಂಪಿಕ್ಸ್ ನಲ್ಲಿ ಕುಸ್ತಿಯಲ್ಲಿ ಪದಕ ಗೆದ್ದಿರುವ ಮೊಟ್ಟಮೊದಲ ಮಹಿಳಾ ಕ್ರೀಡಾಪಟು ಎಂಬ ಹೆಗ್ಗಳಿಗೂ ಸಾಕ್ಷಿ ಮಲಿಕ್ ಪಾತ್ರವಾಗಿದ್ದಾರೆ. ಹಾಗು, ಪದಕದ ಪೋಡಿಯಂ ಏರಿದ ನಾಲ್ಕನೇ ಮಹಿಳಾ ಕ್ರೀಡಾಪಟು ಎಂಬ ಗೌರವಕ್ಕೂ ಪಾತ್ರವಾಗಿದ್ದಾರೆ. ಅವರು ಪದಕ ಗೆಲ್ಲುತ್ತಿದ್ದಂತೆ ಎಲ್ಲೆಡೆಯಿಂದ ಶುಭಾಶಯಗಳು ಸುರಿಮಳೆ ಸುರಿಯುತ್ತಿದೆ. [ವಿಮರ್ಶೆ: 440 ವೋಲ್ಟ್ ನಲ್ಲಿ ಅಬ್ಬರಿಸಿದ ಹರ್ಯಾಣದ 'ಸುಲ್ತಾನ್']

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Rio Olympics 2016 : Sakshi Malik creates history by winning medal in Wrestling.
Please Wait while comments are loading...