ರಿಯೋ 2016: ಭಾರತದ ಟೆನಿಸ್ ತಾರೆ ಪೇಸ್ ತಂಗಲು ಕೋಣೆ ಇಲ್ಲ

By: ಕ್ರೀಡಾ ಡೆಸ್ಕ್
Subscribe to Oneindia Kannada

ರಿಯೋ ಡಿ ಜನೈರೋ, ಆಗಸ್ಟ್ 05: ರಿಯೋ ಒಲಿಂಪಿಕ್ಸ್ ಮೂಲ ಸೌಕರ್ಯಗಳ ಕೊರತೆ ಇದೆ ಎಂಬುದನ್ನು ಆರಂಭದಲ್ಲಿಯೇ ಕೆಲ ರಾಷ್ಟ್ರದ ಕ್ರೀಡಾಪಟುಗಳು ಅಳಲು ತೋಡಿಕೊಂಡಿದ್ದರು. ಇದೀಗ ಭಾರತದ ಟೆನಿಸ್ ತಾರೆ ಲಿಯಾಂಡರ್ ಪೇಸ್ ಅವರಿಗೂ ಸಮಸ್ಯೆಯ ಬಿಸಿ ತಟ್ಟಿದೆ.

ರಿಯೋ ಆಯೋಜಕರು ಸೂಕ್ತ ವಸತಿ ಸೌಲಭ್ಯ ಒದಗಿಸದೇ ಇರುವುದು ಬೆಳಕಿಗೆ ಬಂದಿದೆ. ಇದರಿಂದ ರಿಯೋ ಗ್ರಾಮದಲ್ಲಿ ಎಲ್ಲವೂ ಸರಿಯಿಲ್ಲ ಎಂಬುದು ಸಾಬೀತಾಗಿದೆ. ಈ ಕುರಿತು ಸ್ವತಃ 43 ವರ್ಷ ವಯಸ್ಸಿನ ಒಲಿಂಪಿಕ್ಸ್ ಕಂಚಿನ ಪದಕ ವಿಜೇತ ಪೇಸ್ ತಮಗಾದ ಸಮಸ್ಯೆಯನ್ನು ತೋಡಿಕೊಂಡಿದ್ದಾರೆ. ನಾನು ಗುರುವಾರವೇ ರಿಯೋ ತಲುಪಿದ್ದೇನೆ. ಇಲ್ಲಿಯವರೆಗೂ ನನಗೆ ವಿಶ್ರಾಂತಿ ಪಡೆಯಲು ಒಂದು ಕೊಠಡಿ ನೀಡಿಲ್ಲ.[ರಿಯೋ: ಕ್ರೀಡಾಪಟುಗಳಿಗೆ ಇಷ್ಟವಾದ 'ಗೇಮ್' ಗೆ ನಿರ್ಬಂಧ!]

Rio Olympics 2016: Record maker Leander Paes 'not given a place to stay'

ಇದರಿಂದಾಗಿ ಭಾರತಿಯ ತಂಡದ ನಿರ್ದೇಶಕ ರಾಕೇಶ್ ಗುಪ್ತಾ ಅವರ ಕೊಠಡಿಯಲ್ಲಿ ತಂಗಿರುವುದಾಗಿ ಬೇಸರ ವ್ಯಕ್ತಪಡಿಸಿದ್ದಾರೆ. ಇನ್ನು ರೋಹನ್ ಬೋಪಣ್ಣ ಜತೆಗೆ ಕೊಠಡಿಯಲ್ಲಿ ತಂಗಲು ಒಪ್ಪಿಕೊಂಡಿಲ್ಲ ಎಂದು ಮಾಧ್ಯಮಗಳಲ್ಲಿ ತಪ್ಪು ವರದಿಯಾಗಿದೆ. ನಾನು ಹಾಗೆ ಹೇಳಿಯೂ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಕ್ರೀಡಾಪಟುಗಳಿಗೆ ಝೀಕಾ ವೈರಸ್ ನ ಭಯವಿದ್ದರೆ. ಇನ್ನೊಂದು ಕಡೆ ಸೂಕ್ತ ಮೂಲ ಸೌಕರ್ಯಗಳ ಕೊರತೆಯನ್ನು ಆಟಗಾರರು ಅನುಭವಿಸುತ್ತಿದ್ದಾರೆ.[ರಿಯೋ ಒಲಿಂಪಿಕ್ಸ್ ಲೈವ್ ಯಾವ ವಾಹಿನಿಯಲ್ಲಿ ನೋಡ್ಬಹುದು?]

ರಿಯೋ ಒಲಿಂಪಿಕ್ಸ್ ಟೂರ್ನಿಯ ವ್ಯವಸ್ಥೆ ಸರಿ ಇಲ್ಲ ಎಂಬುವುದಕ್ಕೆ ಹಲವು ಸ್ಟಾರ್ ಆಟಗಾರರು ರಿಯೋನಲ್ಲಿ ಭಾಗವಹಿಸದೆ ದೂರ ಉಳಿದಿದ್ದಾರೆ. ಆರಂಭದಲ್ಲಿಯೇ ಇಂತಹ ಆರೋಪಗಳು ರಿಯೋನಲ್ಲಿ ಕೇಳಿಬರುತ್ತಿದ್ದು. ಮುಂದೆ ಯಾವ ರೀತಿಯಲ್ಲಿ ಯಶಸ್ವಿಯತ್ತ ಟೂರ್ನಿಯನ್ನು ನಡೆಸಿಕೊಂಡು ಹೋಗುತ್ತಾರೆ ಎಂಬುವುದು ಮುಂದಿರುವ ಪ್ರಶ್ನೆ. (ಒನ್ ಇಂಡಿಯಾ ಸುದ್ದಿ)[ಗೌರಿಕಾ, ರಿಯೋದ ಕಿರಿಯ ಕ್ರೀಡಾಪಟು]

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Trouble in Indian tennis camp seems to not end. Star player Leander Paes arrived in Rio de Janeiro yesterday (August 4) but was "slightly disappointed" with the treatment he has received at the Olympics.
Please Wait while comments are loading...