ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ರಿಯೋ ಬ್ಯಾಡ್ಮಿಂಟನ್ ಸಿಂಗಲ್ಸ್ : ಪಿವಿ ಸಿಂಧು ಸೆಮೀಸ್ ಪ್ರವೇಶ

By Mahesh

ರಿಯೋ ಡಿ ಜನೈರೋ, ಆಗಸ್ಟ್ 17: ಭಾರತದ ಮಹಿಳಾ ಸ್ಟಾರ್ ಶಟ್ಲರ್ ಪಿ.ವಿ. ಸಿಂಧು ಅವರು ಮಹಿಳಾ ಬ್ಯಾಡ್ಮಿಂಟನ್ ಸಿಂಗಲ್ಸ್ ವಿಭಾಗದಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದಾರೆ. ಬುಧವಾರ ಬೆಳಗ್ಗೆ ನಡೆದ ಪಂದ್ಯದಲ್ಲಿ ವಿಶ್ವದ ನಂ.2 ಆಟಗಾರ್ತಿ ವಾಂಘ್ ಯಿಹಾನ್ ಅವರನ್ನು ಸೋಲಿಸಿದ ಸಿಂಧು, ಉಪಾಂತ್ಯಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಈ ಮೂಲಕ ಭಾರತಕ್ಕೆ ಪದಕ ಗೆಲ್ಲುವ ಆಸೆ ಜೀವಂತ ಇರಿಸಿದ್ದಾರೆ.

ರಿಯೋ ಒಲಿಂಪಿಕ್ಸ್ 2016 : ಗ್ಯಾಲರಿ || ವಿಶೇಷ ಪುಟ

ರಿಯೋ ಒಲಿಂಪಿಕ್ಸ್ ನಲ್ಲಿ ಮಹಿಳಾ ಸಿಂಗಲ್ಸ್ ಬಾಡ್ಮಿಂಟನ್ ರೋಚಕ ಪಂದ್ಯದಲ್ಲಿ ಸಿಂಧು ಅವರು 22-20,21-19 ರ ಅಂತರದಲ್ಲಿ ಚೀನಾದ ವಾಂಗ್ ಯಿಹಾನ್ ವಿರುದ್ಧ ಜಯ ಗಳಿಸಿದರು. [ಸಿಂಧು ಪಂದ್ಯ ಯಾವಾಗ ನಡೆಯಲಿದೆ? ಎದುರಾಳಿ ಯಾರು?]

20012ರ ಲಂಡನ್ ಒಲಿಂಪಿಕ್ಸ್ ನಲ್ಲಿ ಸೈನಾ ನೆಹ್ವಾಲ್ ಅವರ ನಂತರ ಸೆಮೀಸ್ ಹಂತ ಪ್ರವೇಶಿಸಿದ ಎರಡನೇ ಮಹಿಳಾ ಬಾಡ್ಮಿಂಟನ್ ತಾರೆ ಎಂಬ ಹೆಗ್ಗಳಿಕೆಗೆ ಸಿಂಧು ಪಾತ್ರರಾಗಿದ್ದಾರೆ. 10 ನೇ ಸೀಡ್ ನ ಸಿಂಧು ಅವರು ಪಂದ್ಯದುದ್ದಕ್ಕೂ ಉತ್ತಮ ಹೊಡೆತಗಳ ಮೂಲಕ ವಿಶ್ವದ ನಂ.2 ಆಟಗಾರ್ತಿಯನ್ನು ಕಾಡಿದರು. [ಪದಕ ಗಳಿಸಿದರೆ ಭಾರತ ಕ್ರೀಡಾಳುಗಳಿಗೆ ಭರ್ಜರಿ ಗಿಫ್ಟ್]

PV Sindhu

ಎರಡನೇ ಸೆಟ್ ನಲ್ಲಿ 10-7 ಮುನ್ನಡೆ ಪಡೆದಿದ್ದ ವಾಂಗ್ ಅವರ ವಿರುದ್ಧ ತಿರುಗಿ ಬಿದ್ದ ಸಿಂಧು ಅವರು ಮುನ್ನಡೆ ಸಾಧಿಸಿದರು. ಅದರೆ, ಸೆಟ್ 19-19 ಸಮಬಲವಾದಾಗ ಪಂದ್ಯ ಅತ್ಯಂತ ರೋಚಕ ಘಟ್ಟ ತಲುಪಿತು. ಕೊನೆಗೆ ಸಿಂಧು ಅವರು ಪಂದ್ಯ ಗೆದ್ದು ಸಂಭ್ರಮಿಸಿದರು.

ಇದಕ್ಕೂ ಮುನ್ನ ಚೀನಾ ಆಟಗಾರ್ತಿ ತೈಪೆಯ ತಾಯ್ ಝುೂ ಯಿಂಗ್ ವಿರುದ್ಧ 21-13, 21-15 ಅಂತರದಲ್ಲಿ ಸೋಲಿಸಿದ ಸಿಂಧು ಅವರು ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದರು. [10 ಕ್ರೀಡಾಪಟುಗಳಿಗೆ ರಿಯೋ 2016 ಅವಿಸ್ಮರಣೀಯ]


ಪುಸರ್ಲಾ ವೆಂಕಟ ಸಿಂಧು ಅವರು ಆಗಸ್ಟ್ 18 ರಂದು 5.50 PM IST ಗೆ ಆರಂಭವಾಗಲಿರುವ ಉಪಾಂತ್ಯ ಪಂದ್ಯದಲ್ಲಿ ಜಪಾನ್ ನ ನೊಜೊಮಿ ಒಕುಹಾರ ಅವರನ್ನು ಎದುರಿಸಲಿದ್ದಾರೆ. [ದೀಪಾ ಹಾಗೂ ಲಲಿತಾಗೆ ದೊಡ್ಡ ಸನ್ಮಾನ ಸಿಗಬೇಕು: ಸೆಹ್ವಾಗ್]

ಇನ್ನೊಂದೆಡೆ 23 ವರ್ಷದ ಶ್ರೀಕಾಂತ್ ಮುಂದಿನ ಪಂದ್ಯದಲ್ಲಿ 2008ರ ಬೀಜಿಂಗ್ ಮತ್ತು 2012ರ ಲಂಡನ್ ಒಲಿಂಪಿಕ್ಸ್ ಪುರುಷರ ಸಿಂಗಲ್ಸ್ ನಲ್ಲಿ ಸ್ವರ್ಣ ಪದಕ ಗೆದ್ದಿರುವ ಚೀನಾದ ಲಿನ್ ಡನ್​ರನ್ನು ಎದುರಿಸಲಿದ್ದಾರೆ. (ಒನ್ ಇಂಡಿಯಾ ಸುದ್ದಿ)

Story first published: Wednesday, January 3, 2018, 10:14 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X