ರಿಯೋ ಒಲಿಂಪಿಕ್ಸ್ ಲೈವ್ ಯಾವ ವಾಹಿನಿಯಲ್ಲಿ ನೋಡ್ಬಹುದು?

Posted By:
Subscribe to Oneindia Kannada

ರಿಯೋ ಡಿ ಜನೈರೋ, ಆಗಸ್ಟ್ 02: ವಿಶ್ವಶ್ರೇಷ್ಠ ಮರಕಾನ ಸ್ಟೇಡಿಯಂ ಈಗ ಆಗಸ್ಟ್ 5ರಂದು ರಿಯೋ ಒಲಿಂಪಿಕ್ಸ್ 2016 ಕ್ರೀಡಾಕೂಟದ ಉದ್ಘಾಟನಾ ಸಮಾರಂಭಕ್ಕೆ ಸಜ್ಜಾಗಿದೆ.

ವಿಶ್ವದ ದೊಡ್ಡ ದೊಡ್ಡ ಕ್ರೀಡಾಕೂಟಗಳನ್ನು ಸಂಘಟಿಸಿದ ಅನುಭವ ಹೊಂದಿರುವ ಸಾಂಬಾ ನಾಡಲ್ಲಿ 19 ದಿನಗಳ ಕಾಲ 10 ಸಾವಿರಕ್ಕೂ ಅಧಿಕ ಕ್ರೀಡಾಪಟುಗಳು ಚಿನ್ನದ ಬೇಟೆ ನಡೆಸಲಿದ್ದಾರೆ. ಝಿಕಾ ವೈರಸ್, ಮೂಲ ಸೌಕರ್ಯ ಕೊರತೆ, ಒಲಿಂಪಿಕ್ಸ್ ಗ್ರಾಮದ ಸಮಸ್ಯೆಗಳ ನಡುವೆ ಜಾಗತಿಕ ಕ್ರೀಡಾ ಹಬ್ಬವನ್ನು ಕಣ್ತುಂಬಿಸಿಕೊಳ್ಳಲು ಕ್ರೀಡಾಭಿಮಾನಿಗಳು ಕಾತುರದಿಂದ ಕಾದಿದ್ದಾರೆ.[ರಿಯೋ: ಸುಂದರ ಸ್ಟೇಡಿಯಂಗಳತ್ತ ಒಂದು ನೋಟ]

Rio Olympics 2016: Opening Ceremony start time in IST, TV channel and other information

ಸುಮಾರು 78,000 ಸೀಟು ಸಾಮರ್ಥ್ಯ ಹೊಂದಿರುವ ಮರಕಾನಾ ಸ್ಟೇಡಿಯಂನಲ್ಲಿ ಉದ್ಘಟಾನ ಸಮಾರಂಭ ನಡೆಯಲಿದ್ದು,ಈ ಕ್ರೀಡಾಕೂಟಗಳು ಅತಿಥೇಯ ನಗರದಲ್ಲಿ 33 ಸ್ಥಳಗಳಲ್ಲಿ ಮತ್ತು ಸಾವೊ ಪಾಲೊ ಸೇರಿದಂತೆ ನಗರದ ಐದು ಸ್ಥಳಗಳಲ್ಲಿ ನಡೆಯಲಿವೆ. ಬೆಲೊ ಹಾರಿಜಾಂಟೆ, ಸಾಲ್ವಡಾರ್ ಮತ್ತು ಮನಾಸ್ ಗಳಲ್ಲಿ ನಡೆಯಲಿವೆ.[ರಿಯೋ ಒಲಿಂಪಿಕ್ಸ್ ವಿಶೇಷ ಪುಟ ಕ್ಲಿಕ್ಕಿಸಿ]

ಎಲ್ಲಿ ಪ್ರಸಾರವಾಗುತ್ತದೆ?: ಆಗಸ್ಟ್ 5 (ಶುಕ್ರವಾರ) ರಂದು 8 PM (ಸ್ಥಳೀಯ ಕಾಲಮಾನ), ಭಾರತೀಯ ಕಾಲಮಾನ 4.30 AM (ಆಗಸ್ಟ್ 6, ಶನಿವಾರ) ಪ್ರಸಾರವಾಗಲಿದೆ.[ಒಲಿಂಪಿಕ್ಸ್ ಪದಕ ವಿಜೇತರು: ಲಿಯಾಂಡರ್ ನಿಂದ ಸೈನಾ ತನಕ]

ಬ್ರೆಜಿಲ್ ಕಾಲಮಾನಕ್ಕಿಂತ ಭಾರತೀಯ ಕಾಲಮಾನ(IST) 8 ಗಂಟೆ, 30 ನಿಮಿಷ ಮುಂದಿದೆ.

ಯಾವ ಟಿವಿವಾಹಿನಿ: ಸ್ಟಾರ್ ಸ್ಫೋರ್ಟ್ಸ್ ನೆಟ್ವರ್ಕ್ (ಸ್ಟಾರ್ ಸ್ಫೋಟ್ಸ್ 1,2,3,4 ಹಾಗೂ ಎಚ್ ಡಿ ಚಾನೆಲ್) ನಲ್ಲಿ ಉದ್ಘಾಟನಾ ಸಮಾರಂಭ ಹಾಗೂ ಒಲಿಂಪಿಕ್ಸ್ ಸ್ಪರ್ಧೆಗಳ ಪ್ರಸಾರ ನೋಡಬಹುದು. ಹಿಂದಿ ಹಾಗೂ ಇಂಗ್ಲೀಷ್ ನಲ್ಲಿ ಕಾಮೆಂಟರಿ ಲಭ್ಯವಿರುತ್ತದೆ.

ಒಲಿಂಪಿಕ್ಸ್ ಉದ್ಘಟನಾ ಸಮಾರಂಭದ ಜ್ಯೋತಿಯನ್ನು ಫುಟ್ಬಾಲ್ ದಿಗ್ಗಜ ಪೀಲೆ ಅವರು ಬೆಳಗಿಸಲಿದ್ದಾರೆ. ಈ ಸಂದರ್ಭದಲ್ಲಿ ಒಲಿಂಪಿಕ್ಸ್ ಆಶಯ ಗೀತೆ Esperanca ಮೊಳಗಲಿದೆ. (ಒನ್ ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
With 4 days to go for Rio Olympics 2016, athletes have started arriving in Brazil for the biggest sporting spectacle. The Games will be officially declared open on August 5 at the Opening Ceremony.
Please Wait while comments are loading...