ರಿಯೋ: ನೇಮಾರ್ ಒಲಿಂಪಿಕ್ಸ್ ದಾಖಲೆ, ಫೈನಲಿಗೆ ಬ್ರೆಜಿಲ್

Posted By:
Subscribe to Oneindia Kannada

ರಿಯೋ ಡಿ ಜನೈರೋ, ಆಗಸ್ಟ್ 18: ರಿಯೋ ಒಲಿಂಪಿಕ್ಸ್ 2016ರ ಫುಟ್ಬಾಲ್ ಫೈನಲಿಗೆ ಬ್ರೆಜಿಲ್ ತಂಡ ಎಂಟ್ರಿ ಕೊಟ್ಟಿದೆ. ಬುಧವಾರ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಹೊಂಡುರಾಸ್ ತಂಡದ ವಿರುದ್ಧ ಬಲಿಷ್ಠ ಬ್ರೆಜಿಲ್ ತಂಡ 6-0 ಅಂತರದ ಭರ್ಜರಿ ಜಯ ದಾಖಲಿಸಿದೆ. ಇದೆಲ್ಲವೂ ನಿರೀಕ್ಷಿತವಾಗಿತ್ತು. ಆದರೆ, ಪಂದ್ಯ ಆರಂಭವಾದ 15 ಸೆಕೆಂಡುಗಳಲ್ಲೇ ನೇಮಾರ್ ಒಲಿಂಪಿಕ್ಸ್ ದಾಖಲೆ ಬರೆದಿದ್ದು ವಿಶೇಷ.

ರಿಯೋ ಒಲಿಂಪಿಕ್ಸ್ 2016 : ಗ್ಯಾಲರಿ || ವಿಶೇಷ ಪುಟ

ಪಂದ್ಯದ 15ನೇ ಸೆಕೆಂಡಿನಲ್ಲೇ ಬ್ರೆಜಿಲ್ಲಿನ ನಾಯಕ ನೇಮಾರ್ ಅವರು ಗೋಲು ಬಾರಿಸಿ, ಅತ್ಯಂತ ತ್ವರಿತವಾಗಿ ಗೋಲು ಬಾರಿಸಿದ ಆಟಗಾರ ಎಂಬ ದಾಖಲೆ ಬರೆದರು. ಒಟ್ಟಾರೆ ಈ ಪಂದ್ಯದಲ್ಲಿ ನೇಮಾರ್. ಗ್ರೇಬಿಯಲ್ ಜೀಸಸ್ , ಮಾರ್ಕ್ವಿನ್ಹೊಸ್, ಯುವಾನ್ ಗಾರ್ಸಿಯಾ ಅವರು ಗೋಲು ಬಾರಿಸಿ ಸಾಂಬಾ ನೃತ್ಯವಾಡಿದರು. [ರಿಯೋ ದಲ್ಲಿ ಮತ್ತೊಂದು ಸಲಿಂಗಿಗಳ ನಿಶ್ಚಿತಾರ್ಥ]

Rio Olympics 2016: Neymar creates history as Brazil thrash Honduras 6-0

ಶನಿವಾರ(ಆಗಸ್ಟ್ 20) ನಡೆಯಲಿರುವ ಫೈನಲ್ ಪಂದ್ಯದಲ್ಲಿ ಜರ್ಮನಿಯನ್ನು ಬ್ರೆಜಿಲ್ ತಂಡ ಎದುರಿಸಲಿದೆ. ಮೊಟ್ಟ ಮೊದಲ ಬಾರಿಗೆ ತವರು ನೆಲದಲ್ಲಿ ಚಿನ್ನ ಗೆಲ್ಲಲು ಬ್ರೆಜಿಲ್ ಸಜ್ಜಾಗಿದೆ. ಜೊತೆಗೆ ಫೀಫಾ ವಿಶ್ವ ಕಪ್ 2014ರ ಸೆಮಿಫೈನಲ್ ನಲ್ಲಿ ವಿಶ್ವ ಚಾಂಪಿಯನ್ ಜರ್ಮನಿ ವಿರುದ್ಧ 7-1 ಸೋಲು ಅನುಭವಿಸಿದ್ದ ಸೇಡನ್ನು ತೀರಿಸಿಕೊಳ್ಳಲು ಬ್ರೆಜಿಲ್ ಕಾದಿದೆ. [ಚಿನ್ನ ಪದಕಕ್ಕಾಗಿ ಹೀಗೂ ಮಾಡ್ತಾರೆ]

ಬಾರ್ಸಿಲೋನಾದ ಸ್ಟಾರ್ ಆಟಗಾರ ನೇಮಾರ್ ಅವರು ಐತಿಹಾಸಿಕ ಗೋಲು ಹಾಗೂ ಪಂದ್ಯದ ಕೊನೆ ಗೋಲು ಬಾರಿಸಿದ್ದು ವಿಶೇಷ. ಇಂಗ್ಲೀಷ್ ಪ್ರೀಮಿಯರ್ ಲೀಗ್ ನಲ್ಲಿ ಮ್ಯಾಂಚೆಸ್ಟರ್ ಯುನೈಟೆಡ್ ಸೇರಿದ ಬ್ರೆಜಿಲಿನ ಯುವ ಪ್ರತಿಭೆ ಗ್ರ್ಯಾಬಿಯಲ್ ಜೀಸಸ್ ಹಾಗೂ ಪಿಎಸ್ ಜಿ ತಂಡದ ಡಿಫೆಂಡರ್ ಮಾರ್ಕ್ವಿನ್ಹೋ ಮತ್ತು ಯುವಾನ್ ಗಾರ್ಸಿಯಾ ಉತ್ತಮ ಪ್ರದರ್ಶನ ನೀಡಿ ಗಮನ ಸೆಳೆದರು.

ಇನ್ನೊಂದು ಸೆಮಿಫೈನಲ್ ನಲ್ಲಿ ನೈಜೀರಿಯಾ ವಿರುದ್ಧ ಜರ್ಮನಿ ತಂಡ 1-2 ಅಂತರದಲ್ಲಿ ಜಯ ದಾಖಲಿಸಿ, ಫೈನಲ್ ಪ್ರವೇಶ ಮಾಡಿತು. (ಒನ್ ಇಂಡಿಯಾ ಸುದ್ದಿ)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Brazil advanced to the final of Rio Olympics 2016 men's football after thrashing Honduras 6-0 in a semi-final game on Wednesday (August 18).
Please Wait while comments are loading...