ರಿಯೋ: ಮೊರಕ್ಕೋದ ಕಾಮುಕ ಬಾಕ್ಸರ್ ಗೆ 15 ದಿನ ಶಿಕ್ಷೆ

Posted By:
Subscribe to Oneindia Kannada

ರಿಯೋ ಡಿ ಜನೈರೋ, ಆಗಸ್ಟ್ 08: ರಿಯೋದ ಒಲಿಂಪಿಕ್ ಗ್ರಾಮದ ನಿರ್ವಹಣೆ ನೋಡಿಕೊಳ್ಳುವ ಮಹಿಳಾ ಸಿಬ್ಬಂದಿಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಹೊತ್ತಿರುವ ಮೊರಕ್ಕಾದ ಬಾಕ್ಸರ್ ಗೆ 15 ದಿನಗಳ ಬಂಧನದ ಶಿಕ್ಷೆ ಸಿಕ್ಕಿದೆ. ವಾರಾಂತ್ಯದಲ್ಲಿ ನಡೆಯಬೇಕಿದ್ದ ಸ್ಪರ್ಧೆಯಿಂದಲೂ ಔಟ್ ಆಗಿದ್ದಾರೆ.

ರಿಯೋ ಒಲಿಂಪಿಕ್ಸ್ 2016 : ಗ್ಯಾಲರಿ || ವಿಶೇಷ ಪುಟ

ಕಳೆದ ವಾರ ಒಲಿಂಪಿಕ್ ಗ್ರಾಮದಲ್ಲಿ ಕಾರ್ಯ ನಿರ್ವಹಿಸುವ ಇಬ್ಬರು ಮಹಿಳಾ ಸಿಬ್ಬಂದಿಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪವನ್ನು ಮೊರಕ್ಕಾದ ಬಾಕ್ಸರ್ ಹಸನ್ ಸಾಡಾ ಹೊತ್ತಿದ್ದಾರೆ. 22 ವರ್ಷವಯಸ್ಸಿನ ಹಸನ್ ಅವರನ್ನು ಬಂಧಿಸಿ, ಕೋರ್ಟಿಗೆ ಹಾಜರುಪಡಿಸಲಾಗಿದ್ದು, ಕೋರ್ಟಿನಲ್ಲಿ ತನ್ನ ತಪ್ಪು ಒಪ್ಪಿಕೊಂಡಿದ್ದಾರೆ.

Rio Olympics 2016: Moroccan boxer out after being arrested for sexual assault

ಅರ್ಜಿ ತಿರಸ್ಕೃತ: ಟರ್ಕಿಯ ಮೆಹ್ಮತ್ ನಾದಿರ್ ಉನಲ್ ವಿರುದ್ಧ ಬಾಕ್ಸಿಂಗ್ ಪಂದ್ಯವಾಡಬೇಕಿದೆ. ಬಳಿಕ ವಿಚಾರಣೆಗೆ ಹಾಜರಾಗುತ್ತೇನೆ ಎಂದು ಹಸನ್ ಅವರು ಸಲ್ಲಿಸಿದ್ದ ಅರ್ಜಿಯನ್ನು ಕೋರ್ಟ್ ತಿರಸ್ಕರಿಸಿದೆ.

ನಾವು ಹಸನ್ ಇದ್ದ ರೂಮಿಗೆ ತೆರಳಿದಾಗ ಅಲ್ಲಿ ಇನ್ನೂ ಅನೇಕ ಕ್ರೀಡಾಪಟುಗಳಿದ್ದರು. ಹಸನ್ ನಮ್ಮಿಬ್ಬರನ್ನು ಮುಟ್ಟಿ, ಕೆಟ್ಟದಾಗಿ ನಡೆದುಕೊಂಡರು. ಮಿಕ್ಕವರು ಯಾವುದೇ ಪ್ರತಿರೋಧ ತೋರಲಿಲ್ಲ. ನಾವು ಅಲ್ಲಿಂದ ತಕ್ಷಣವೇ ಹೊರಟು ಬಂದೆವು ಎಂದುಮಹಿಳೆಯರು ನೀಡಿರುವ ಹೇಳಿಕೆ ಆಧಾರಿಸಿ, 15 ದಿನಗಳವರೆಗೆ ಬಂಧನದಲ್ಲಿಡುವಂತೆ ನ್ಯಾಯಾಧೀಶರು ಆದೇಶಿಸಿದ್ದಾರೆ.

ಆಂತಾರಾಷ್ಟ್ರೀಯ ಬಾಕ್ಸಿಂಗ್ ಅಸೋಸಿಯೇಷನ್ (ಎಐಬಿಎ) ನಿಂದ ಯುವ ಚಾಂಪಿಯನ್ ಎನಿಸಿಕೊಂಡಿರುವ ಹಸನ್ ಮೇಲೆ ಬಂದಿರುವ ಆರೋಪ ಏನು ಎಂಬುದು ಅರ್ಥವಾಗುತ್ತಿಲ್ಲ ಎಂದು ಮೊರಕ್ಕಾನ್ ಬಾಕ್ಸಿಂಗ್ ಫೆಡರೇಷನ್ ಹೇಳಿದೆ. (ಐಎಎನ್ಎಸ್)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Moroccan boxer Hassan Saada will not compete in the Olympic Games, after a Brazilian court refused his request for temporary freedom on Saturday, following his arrest for allegedly assaulting two chambermaids in the Olympic Village.
Please Wait while comments are loading...