ರಿಯೋ ಒಲಿಂಪಿಕ್ಸ್ 2016 : ಪತ್ರಕರ್ತರಿದ್ದ ಬಸ್ಸಿನ ಮೇಲೆ ದಾಳಿ

Posted By:
Subscribe to Oneindia Kannada

ರಿಯೋ ಡಿ ಜನೈರೋ, ಆಗಸ್ಟ್ 10 : ರಿಯೋ ಒಲಿಂಪಿಕ್ಸ್ 2016ರ ವರದಿಗೆ ತೆರಳಿದ್ದ ಪತ್ರಕರ್ತರಿದ್ದ ಬಸ್ಸಿನ ಮೇಲೆ ದಾಳಿ ನಡೆಸಿದೆ. ರಿಯೋ ನಗರದ ಬಳಿಯ ಹೆದ್ದಾರಿಯಲ್ಲಿ ಬಸ್ಸಿನ ಮೇಲೆ ದಾಳಿ ನಡೆಸಲಾಗಿದೆ.

ರಿಯೋ ಒಲಿಂಪಿಕ್ಸ್ 2016 : ಗ್ಯಾಲರಿ || ವಿಶೇಷ ಪುಟ

ಬಸ್ಸಿನ ಕಿಟಕಿಗಳ ಗಾಜುಗಳು ಜಖಂಗೊಂಡಿದ್ದು, ಇದರಿಂದಾಗಿ ಇಬ್ಬರು ಪತ್ರಕರ್ತರು ಗಾಯಗೊಂಡಿದ್ದಾರೆ. ಬಸ್ಸಿನ ಮೇಲೆ ಗುಂಡಿನ ದಾಳಿ ನಡೆಸಲಾಗಿದೆಯೇ? ಅಥವ ಕಲ್ಲು ತೂರಲಾಗಿದೆಯೇ? ಎಂದು ಪರಿಶೀಲನೆ ನಡೆಸಲಾಗುತ್ತಿದೆ.[ಹಾಕಿ: ಅರ್ಜೆಂಟೀನಾ ವಿರುದ್ಧ ಭಾರತಕ್ಕೆ ಜಯ]

rio olympics 2016

ಪತ್ರಕರ್ತರಿದ್ದ ಬಸ್ ಬಾಸ್ಕೆಟ್‌ಬಾಲ್‌ ಕ್ರೀಡಾಂಗಣದಿಂದ ಒಲಿಂಪಿಕ್‌ ಪಾರ್ಕ್‌ಗೆ ತೆರಳುವ ವೇಳೆ ಈ ದಾಳಿ ನಡೆಸಿದೆ. ಬಸ್ಸಿನ ಮೇಲೆ ಗುಂಡಿನ ದಾಳಿ ನಡೆದಿದೆ ಎಂದು ತಿಳಿದುಬಂದಿದೆ.[ರಗ್ಬಿ ಆಟಗಾರ್ತಿಯರ ಮದ್ವೆಗೆ ಸಿಹಿ ಚುಂಬನದ ಮುದ್ರೆ!]

ಗುಂಡಿನ ದಾಳಿಯಿಂದಾಗಿ ಬಸ್ಸಿನ ಗಾಜುಗಳು ಒಡೆದಿದ್ದು, ಅವುಗಳು ಹೊಕ್ಕಿ ಇಬ್ಬರು ಪತ್ರಕರ್ತರು ಗಾಯಗೊಂಡಿದ್ದಾರೆ. ಇದು ಉಗ್ರರ ದಾಳಿಯೇ? ಎಂಬ ಬಗ್ಗೆ ತನಿಖೆ ನಡೆಯುತ್ತಿದೆ.[ರಿಯೋ 2016: ಮೊದಲ ದಿನವೇ ವಿಶ್ವ ದಾಖಲೆ ಬರೆದ ವೀರ!]

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
A bus carrying Rio Olympics 2016 journalists has come under attack. It was not clear whether two shattered windows were caused by bullets or stones.
Please Wait while comments are loading...