ರಿಯೋ ಒಲಿಂಪಿಕ್ಸ್ ಗ್ರಾಮವನ್ನು ಸುತ್ತಿಕೊಂಡಿರುವ ಸಮಸ್ಯೆಗಳು

By: ರಮೇಶ್ ಬಿ
Subscribe to Oneindia Kannada

ಆಗಸ್ಟ್ 5 ರಿಂದ ಆರಂಭವಾಗಲಿರುವ ರಿಯೋ ಒಲಿಂಪಿಕ್ಸ್​ 2016ಗೆ ಬ್ರೆಜಿಲ್​ನ ನಗರ ಸರ್ವ ರೀತಿಯಲ್ಲೂ ಸಜ್ಜುಗೊಳ್ಳುತ್ತಿದೆ. ಆದರೆ, ಒಲಿಂಪಿಕ್ಸ್ ಟೂರ್ನಿ ಆಯೋಜಕರಿಗೆ ಝೀಕಾ ವೈರಸ್ ಸೇರಿದಂತೆ ಹಲವು ಭೀತಿಗಳು ಎದುರಾಗಿದೆ. ವಿಶ್ವದ ಮಹಾನ್ ಕ್ರೀಡಾಕೂಟಕ್ಕೆ ಬಂದಿರುವ ಸಮಸ್ಯೆಗಳತ್ತ ಒಂದು ನೋಟ ಇಲ್ಲಿದೆ.

ಪ್ರತಿ ಬಾರಿ ಒಲಿಂಪಿಕ್ಸ್ ಆರಂಭಕ್ಕೂ ಮುನ್ನ ವಿ‍ಘ್ನಗಳು ಎದುರಾಗುವುದು ಹೊಸ ವಿಷಯವೇನಲ್ಲ. ಆದರೆ, ರಿಯೋ ಹಲವು ಸಮಸ್ಯೆಗಳ ಆಗರವಾಗಿ ಮಾರ್ಪಟ್ಟಿದೆ.

ಹೌದು, ರಿಯೋ ಡಿ ಜನೈರೋದಲ್ಲಿ ಮುಂದಿನ ತಿಂಗಳಿಂದ ಆರಂಭವಾಗುವ ರಿಯೋ ಒಲಿಂಪಿಕ್ಸ್ ಗೆ ಒಂದಲ್ಲ ಒಂದು ಭೀತಿಗಳು ಎದುರಾಗುತ್ತಿವೆ. ಒಂದು ಸಮಸ್ಯೆ ಪರಿಹರಿಸಿದರೆ ಮತ್ತೊಂದು ಎದುರಾಗಿದೆ.[ರಿಯೋ ಒಲಿಂಪಿಕ್ಸ್ ವಿಶೇಷ ಪುಟ ಕ್ಲಿಕ್ಕಿಸಿ]

ಕೇವಲ ಝೀಕಾ ವೈರಾಣು ಭೀತಿಯಿಂದ ಕೆಲ ರಾಷ್ಟ್ರದ ಕ್ರೀಡಾಪಟುಗಳು ರಿಯೋ ಒಲಿಂಪಿಕ್ಸ್ ಟೂರ್ನಿಯಿಂದ ನಿಂದ ದೂರ ಉಳಿದಿದ್ದಾರೆ. ಧೈರ್ಯ ಮಾಡಿ ಒಲಿಂಪಿಕ್ಸ್ ಗ್ರಾಮಕ್ಕೆ ಕಾಲಿಟ್ಟ ಆಸ್ಟ್ರೇಲಿಯಾದ ಕ್ರೀಡಾಳುಗಳು ಮೊದಲ ದಿನವೇ ಸೊಳ್ಳೆ, ನೀರು, ಎಸಿ ಸಮಸ್ಯೆ ಎಂದು ಆಯೋಜಕರಿಗೆ ದೂರು ನೀಡಿದ್ದಾರೆ.ರಿಯೋ ಒಲಿಂಪಿಕ್ಸ್ ಗ್ರಾಮವನ್ನು ಸುತ್ತಿಕೊಂಡಿರುವ ಸಮಸ್ಯೆಗಳನ್ನು ಮುಂದೆ ಓದಿ...

ಝೀಕಾ ವೈರಸ್ ಭೀತಿ

ಝೀಕಾ ವೈರಸ್ ಭೀತಿ

ಬ್ರೆಜಿಲಿನಲ್ಲಿ ಎದುರಾಗಿರುವ ಝೀಕಾ ವೈರಸ್ ಭೀತಿ ಈ ರಿಯೋ ಒಲಿಂಪಿಕ್ಸ್ ಗೆ ಅಂಟಿಕೊಂಡಿದೆ. ವೈರಸ್‌ ಹರಡುವ ಭೀತಿ ಎದುರಾಗಿರುವ ಕಾರಣ ಕೂಟವನ್ನು ಬೇರೆಡಗೆ ಸ್ಥಳಾಂತರಿಸಬೇಕೆಂದು ಭಾರಿ ಒತ್ತಾಯ ಕೇಳಿಬರುತ್ತಿದೆ.

ಆದರೆ ಬ್ರೆಜಿಲ್ ಸರ್ಕಾರ ಮಾತ್ರ ಇದಕ್ಕೆ ಸೊಪ್ಪು ಹಾಕಿಲ್ಲ. ಝೀಕಾ ವೈರಸ್‌ನಿಂದ ಕ್ರೀಡಾಪಟುಗಳು ಆತಂಕಕ್ಕೆ ಒಳಗಾಗಬೇಕಾದ ಅಗತ್ಯವಿಲ್ಲ. ಆದ್ದರಿಂದ ಒಲಿಂಪಿಕ್ಸ್ ಸ್ಥಳಾಂತರಿಸುವುದಿಲ್ಲ' ಎಂದು ಬ್ರೆಜಿಲ್ ಸರ್ಕಾರ ಹೇಳಿದೆ. ಆದರೂ ಕೆಲ ಕ್ರೀಡಾಪಟುಗಳು ವೈರಸ್ ಗೆ ಹೆದರಿಕೊಂಡು ರಿಯೋ ಒಲಿಂಪಿಕ್ಸ್ ನಿಂದ ಹಿಂದೆ ಸರಿದಿದ್ದಾರೆ.

ಭದ್ರತೆ ಕೊರತೆ

ಭದ್ರತೆ ಕೊರತೆ

ಟೂರ್ನಿಯಲ್ಲಿ ಪಾಲ್ಗೊಳ್ಳಲು ಈಗಾಗಲೇ ಆಸ್ಟ್ರೇಲಿಯಾ ತಂಡ ಡಿ ಜನೈರೋಕ್ಕೆ ಆಗಮಿಸಿದ್ದು. ಕಳ್ಳರು ಆಸ್ಟ್ರೇಲಿಯಾ ತಂಡದ ಕ್ರೀಡಾಪಟುಗಳ ವಸ್ತುಗಳನ್ನು ದೋಚಿರುವ ಘಟನೆಗಳು ಸಹ ನಡೆದಿರುವುದರಿಂದ ಆಟಗಾರರು ಭದ್ರತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.

ಇನ್ನು ವಿಶ್ವದಲ್ಲಿ ನಡೆಯುತ್ತಿರುವ ದಾಳಿಯಿಂದಾಗಿ ಒಲಿಂಪಿಕ್ ಕ್ರೀಡಾಕೂಟಕ್ಕೆ ಭಯೋತ್ಪಾದಕರ ಭೀತಿ ಎದುರಾಗಿದೆ. ಇದರಿಂದ ಬ್ರೆಜಿಲ್ ಸರ್ಕಾರ ಭಾರೀ ಬಿಗಿ ಭದ್ರತೆ ಕೈಗೊಂಡಿದೆ. ಸಾಂದರ್ಭಿಕ ಚಿತ್ರ ಬಳಸಲಾಗಿದೆ.

ರಷ್ಯಾ ಆಟಗಾರರ ಮೇಲೆ ಡೋಪಿಂಗ್ ಆರೋಪ

ರಷ್ಯಾ ಆಟಗಾರರ ಮೇಲೆ ಡೋಪಿಂಗ್ ಆರೋಪ

ರಷ್ಯಾ ಸರ್ಕಾರವೇ ಆಟಗಾರರಿಗೆ ಉದ್ದೀಪನ ಮದ್ದು ಸೇವನೆಗೆ ಉತ್ತೇಜನ ನೀಡುತ್ತಿದೆ ಎಂಬ ಆರೋಪದ ಮೇಲೆ ರಷ್ಟಾ ಅಥ್ಲೀಟ್ ಕ್ರೀಡಾಪಟುಗಳನ್ನು ರಿಯೋ ಒಲಿಂಪಿಕ್ಸ್ ನಲ್ಲಿ ಸ್ಪರ್ಧಿಸದಂತೆ ಅಂತಾರಾಷ್ಟ್ರೀಯ ಅಸೋಸಿಯೇಶನ್ ಆಫ್ ಅಥ್ಲೆಟಿಕ್ಸ್ ಫೆಡರೇಶನ್ ನಿ‍ಷೇಧ ಹೇರಿದೆ.

ಅಗ್ರಗಣ್ಯ ಗಾಲ್ಫ್ ಆಟಗಾರರ ಗೈರು

ಅಗ್ರಗಣ್ಯ ಗಾಲ್ಫ್ ಆಟಗಾರರ ಗೈರು

ಅಗ್ರಗಣ್ಯ ಗಾಲ್ಫ್ ಆಟಗಾರರ ಗೈರು: ಜಾನ್ಸನ್ ಡೇ, ದುಸ್ಟೀನ್ ಜಾನ್ಸನ್, ಜೋರ್ಡಾನ್ ಸ್ಪಥ್ ಸೇರಿದಂತೆ ವಿಶ್ವದ ಟಾಪ್ ಗಾಲ್ಪ್ ಆಟಗಾರರು ಈ ಝೀಕಾ ವೈರಸ್, ಭದ್ರತೆ ಕೊರತೆಯಿಂದಾಗಿ 2016 ರಿಯೋ ಒಲಿಂಪಿಕ್ಸ್ ನಲ್ಲಿ ಸ್ಪರ್ಧಿಸಲು ಹಿಂಜರಿದಿರುವುದು ರಿಯೋ ಒಲಿಂಪಿಕ್ ಆಯೋಜಕರಿಗೆ ಇರಸು ಮುರುಸು ಉಂಟು ಮಾಡಿದೆ. ಚಿತ್ರದಲ್ಲಿ ಜಾನ್ಸಸ್ ಡೇ

ಮೂಲ ಸೌಕರ್ಯಗಳ ಕೊರತೆ

ಮೂಲ ಸೌಕರ್ಯಗಳ ಕೊರತೆ

ಮೂಲ ಸೌಕರ್ಯಗಳ ಕೊರತೆ : ನೀರು, ಆಹಾರ, ವಾಸ್ತವ್ಯಕ್ಕೆ ಸ್ಥಳ ಇವು ಆಟಗಾರರಿಗೆ ಬೇಕಾಗಿರುವ ಸೌಕರ್ಯಗಳು. ಇವುಗಳನ್ನು ಒದಗಿಸಲು ರಿಯೋ ಒಲಿಂಪಿಕ್ಸ್ ಆಯೋಜಕರು ವಿಫಲರಾಗಿದ್ದಾರೆ ಎಂದು ಈಗಾಗಲೇ ಒಲಿಂಪಿಕ್ಸ್ ಗ್ರಾಮ ಸೇರಿರುವ ಆಸ್ಟ್ರೇಲಿಯಾ ಟೀಂ ಆರೋಪಿಸಿದೆ.

ಜಲ ಮಾಲಿನ್ಯ ರೋಗದ ಭೀತಿ

ಜಲ ಮಾಲಿನ್ಯ ರೋಗದ ಭೀತಿ

ಜಲ ಮಾಲಿನ್ಯ ರೋಗದ ಭೀತಿ: ರಿಯೋದಲ್ಲಿರುವ ಬೀಚ್ ಗಳು ಸ್ವಚ್ಛತೆ ಕೊರತೆ ಎದುರಿಸುತ್ತಿದ್ದು. ಸಮುದ್ರಗಳ ದಂಡೆಯಲ್ಲಿ ಕಸ ತುಂಬಿಕೊಂಡು ನೀರು ಮಾಲಿನ್ಯವಾಗಿದ್ದು ರೋಗದ ಭೀತಿ ಎದುರಾಗಿದೆ. ಇದರಿಂದ ಬೀಚ್ ನಲ್ಲಿ ಈಜಾಡುವಂತಿಲ್ಲ.

ಒಟ್ಟಿನಲ್ಲಿ ರಿಯೋ ಒಲಿಂಪಿಕ್ಸ್ ಟೂರ್ನಿ ಆರಂಭದಕ್ಕೂ ಮುನ್ನವೇ ಈ ಎಲ್ಲಾ ಅಂಶಗಳು ಕಾಡುತ್ತಿವೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Rio Olympics 2016 : Here is a list of all the issues facing Rio in advance of the Olympics, which begin on Aug. 5.
Please Wait while comments are loading...