ಭಾರತದ ಅಥ್ಲೆಟಿಕ್ಸ್ ಕೋಚ್ ಬಂಧನ, ಬಿಡುಗಡೆ ಏಕೆ?

Posted By:
Subscribe to Oneindia Kannada

ರಿಯೊ ಡಿ ಜನೈರೊ, ಆಗಸ್ಟ್ 17: ಒಲಿಂಪಿಕ್ಸ್ ಕ್ರೀಡಾ ಗ್ರಾಮದಲ್ಲಿ ಭಾರತದ ಅಥ್ಲೆಟಿಕ್ಸ್ ಕೋಚ್ ಬಂಧನ ಹಾಗೂ ಬಿಡುಗಡೆ ಪ್ರಸಂಗ ನಡೆದಿದೆ. ಮಮತಾ ಬಾಬರ್ ಅವರಿಗೆ ತರಬೇತಿ ನೀಡಿರುವ ಅಥ್ಲೆಟಿಕ್ ಕೋಚ್ ಸಿಕೋಲಯ್ ಸ್ನೆಸೆರೆವ್ ಅವರು ಅರ್ಧ ದಿನ ಪೊಲೀಸರ ವಶದಲ್ಲಿದ್ದು ನಂತರ ರಾಯಭಾರ ಕಚೇರಿ ನೆರವಿನಿಂದ ಹೊರ ಬಂದಿದ್ದಾರೆ.

ರಿಯೋ ಒಲಿಂಪಿಕ್ಸ್ 2016 : ಗ್ಯಾಲರಿ || ವಿಶೇಷ ಪುಟ

ರಿಯೊದ ಪಾಲಿಕ್ಲಿನಿಕ್‌ನಲ್ಲಿ ಮಹಿಳಾ ವೈದ್ಯರೊಬ್ಬರ ಮೇಲೆ ಹಲ್ಲೆ ಹಾಗೂ ಅಸಭ್ಯ ವರ್ತನೆ ಆರೋಪವನ್ನು ಕೋಚ್ ಸಿಕೋಲಮ್ ಮೇಲೆ ಹೊರೆಸಲಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಲು ಅವರನ್ನು ಪೊಲೀಸರು ಬಂಧಿಸಿದ್ದರು. [ಮೊರಕ್ಕೋದ ಕಾಮುಕ ಬಾಕ್ಸರ್ ಗೆ 15 ದಿನ ಶಿಕ್ಷೆ]

Rio Olympics: Lalita Babar's coach detained, released with Indian Embassy's 'help'

ಭಾರತೀಯ ಅಥ್ಲೀಟ್‌ಗಳಾದ ಲಲಿತಾ ಬಾಬರ್, ಸುಧಾಸಿಂಗ್ ಹಾಗೂ ಒ.ಪಿ.ಜೈಶಾ ಅವರಿಗೆ ಬೈಲೊರಷ್ಯಾ ಮೂಲದ ಸ್ನೆಸರೆವ್ ಅವರು ತರಬೇತಿ ನೀಡುತ್ತಿದ್ದರು. ಬಂಧನಕ್ಕೊಳಗಾಗಿ ಅರ್ಧ ದಿನ ಸ್ಥಳೀಯ ಠಾಣೆಯಲ್ಲಿ ಸ್ನೆಸರೆವ್ ಕಳೆದಿದ್ದಾರೆ. ನಂತರ ಭಾರತೀಯ ರಾಯಭಾರ ಕಚೇರಿ ಮಧ್ಯಪ್ರವೇಶಿಸಿ ಬಿಡುಗಡೆ ಮಾಡಲಾಗಿದೆ.

ವಿವಾದವನ್ನು ಇತ್ಯರ್ಥಪಡಿಸಲಾಗಿದ್ದು, ಸ್ನೆಸರೆವ್ ಅವರನ್ನು ಬಿಡುಗಡೆ ಮಾಡಲಾಗಿದೆ ಎಂದು ಅಥ್ಲೆಟಿಕ್ ಫೆಡರೇಶನ್ ಆಫ್ ಇಂಡಿಯಾ ಕಾರ್ಯದರ್ಶಿ ಸಿ.ಕೆ.ವಲ್ಸನ್ ಹೇಳಿದ್ದಾರೆ.

ಘಟನೆ ಹಿನ್ನಲೆ: ಮ್ಯಾರಾಥಾನ್‌ ಸ್ಪರ್ಧೆಯಲ್ಲಿ ಭಾರತದ ಒ.ಪಿ.ಜೈಶಾ, ಓಟ ಪೂರ್ಣಗೊಳಿಸಿ ಪ್ರಜ್ಞೆತಪ್ಪಿ ಬಿದ್ದರು. ತಕ್ಷಣ ಅವರನ್ನು ಚಿಕಿತ್ಸಾ ಕೊಠಡಿಗೆ ಕರೆದೊಯ್ಯಲಾಯಿತು. ಆಕೆಯ ಜತೆ ಕೋಚ್ ನಿಕೋಲಯ್ ಕೂಡಾ ಇದ್ದರು.

ಈ ಸಂದರ್ಭದಲ್ಲಿ ಚಿಕಿತ್ಸಾ ಕೊಠಡಿಯೊಳಗೆ ಹೋಗಲು ಯತ್ನಿಸಿದ ನಿಕೋಲಮ್ ರನ್ನು ಅಲ್ಲಿನ ಮಹಿಳಾ ವೈದ್ಯಕೀಯ ಸಿಬ್ಬಂದಿ ತಡೆದಿದ್ದಾರೆ. ಮಹಿಳಾ ವೈದ್ಯೆಯನ್ನು ತಳ್ಳಿ ಒಳಹೋಗಲು ಕೋಚ್ ಯತ್ನಿಸಿದ್ದಾರೆ. ವೈದ್ಯಕೀಯ ಸಿಬ್ಬಂದಿಯ ಮೇಲೆ ಹಲ್ಲೆ ಮಾಡಿದ ಆರೋಪದ ಮೇಲೆ ನಂತರ ಬಂಧಿಸಲಾಯಿತು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Indian athletics contingent's middle and long distance coach Nikolai Snesarev was "detained" for half a day and later released by the police after a lady doctor at the Games Village of the Rio Olympics made a complaint of misbehaviour at the polyclinic here
Please Wait while comments are loading...