ವಿಡಿಯೋ ಗೇಮ್ಸ್ ಆಡಿದ್ದಕ್ಕೆ 5 ಸಾವಿರ ಡಾಲರ್ ಬಿಲ್!

Posted By:
Subscribe to Oneindia Kannada

ರಿಯೋ ಡಿ ಜನೈರೋ, ಆಗಸ್ಟ್ 04: ಒಲಿಂಪಿಕ್ಸ್ ಹಾಗೂ ವಿಶ್ವ ಚಾಂಪಿಯನ್ ಜಿಮ್ನಾಸ್ಟ್ ಜಪಾನಿನ ಕೊಹಿಯಿ ಉಚಿಮುರಾ ಅವರು ವಿಡಿಯೋ ಗೇಮ್ ಆಡಿದ ತಪ್ಪಿಗೆ ಸರಿ ಸುಅಮರು 5,000 ಡಾಲರ್ ಮೊತ್ತದ ಬಿಲ್ ಕಟ್ಟಿದ್ದಾರೆ.

ರಿಯೋ ಒಲಿಂಪಿಕ್ಸ್ 2016ರಲ್ಲಿ ನಿರ್ಬಂಧ ಹೇರಲಾಗಿರುವ 'ಪೋಕೆ ಮನ್ ಗೋ' ಗೇಮ್ ಡೌನ್ ಲೋಡ್ ಮಾಡಿಕೊಂಡ ಉಚಿಮುರಾ ಅವರಿಗೆ 500,000 ಯೆನ್ (5,000 ಯುಎಸ್ ಡಾಲರ್) ಬಿಲ್ ಬಂದಿದೆಯಂತೆ.[ರಿಯೋ: ಕ್ರೀಡಾಪಟುಗಳಿಗೆ ಇಷ್ಟವಾದ 'ಗೇಮ್' ಗೆ ನಿರ್ಬಂಧ!]

27 ವರ್ಷ ವಯಸ್ಸಿನ 6 ಬಾರಿ ವಿಶ್ವ ಚಾಂಪಿಯನ್ ಬಿಲ್ ನೋಡಿ ಕಂಗಾಲಾಗಿದ್ದಾರೆ. ಸದ್ಯ ಬ್ರೆಜಿಲ್ಲಿನ ರಿಯೋದ ಒಲಿಂಪಿಕ್ಸ್ ಗ್ರಾಮದಲ್ಲಿರುವ ಉಚಿಮುರಾ ಅವರು ಮೊಬೈಲಿನಲ್ಲಿ ಪೋಕೆಮನ್ ಗೋ ಗೇಮ್ ಡೌನ್ ಲೋಡ್ ಮಾಡಿಕೊಂಡಿದ್ದಕ್ಕೆ ಈ ಪರಿ ಬಿಲ್ ಬಂದಿದೆ. ಡೇಟಾ ರೋಮಿಂಗ್ ನಲ್ಲಿದ್ದ ಮೊಬೈಲ್ ಬಿಲ್ ಮೀಟರ್ ಸಕತ್ ಆಗಿ ಓಡಿದೆ.[ರಿಯೋ ಒಲಿಂಪಿಕ್ಸ್ ಲೈವ್ ಯಾವ ವಾಹಿನಿಯಲ್ಲಿ ನೋಡ್ಬಹುದು?]

Rio Olympics: Japanese champion Uchimura hit with Rs 3 lakh bill for downloading Pokemon Go

ಪ್ರೀ ಒಲಿಂಪಿಕ್ಸ್ ಗೇಮ್ಸ್ ತರಬೇತಿ ಶಿಬಿರಕ್ಕಾಗಿ ಸಾವೋ ಪೊಲೋಗೆ ಬಂದಿಳಿದ ತಕ್ಷಣ ನಾನು ಅಪ್ಲಿಕೇಷನ್ ಡೌನ್ ಲೋಡ್ ಮಾಡಿಕೊಂಡೆ. ಮೊಬೈಲ್ ಇಂಟರ್ನೆಟ್ ಬಿಲ್ ಈ ರೀತಿ ಬರುತ್ತದೆ ಎಂದು ಕನಸಿನಲ್ಲೂ ಊಹಿಸಿರಲಿಲ್ಲ ಎಂದು ಉಚಿಮುರಾ ಹೇಳಿದ್ದಾರೆ.[ಗೌರಿಕಾ, ರಿಯೋದ ಕಿರಿಯ ಕ್ರೀಡಾಪಟು]

2012ರ ಲಂಡನ್ ಒಲಿಂಪಿಕ್ಸ್ ವಿಜೇತ ಉಚಿಮುರಾ ಅವರ ಕೋರಿಕೆ ಮೇರೆಗೆ ಬಿಲ್ ಮೊತ್ತವನ್ನು 3,000 ಯೆನ್ ಗೆ ಇಳಿಸಲಾಗಿದೆಯಂತೆ. ಬ್ರೆಜಿಲ್ಲಿನಲ್ಲಿ ಸದ್ಯ ಪೋಕೆಮನ್ ಗೋ ಲಭ್ಯವಿಲ್ಲ. ಪೋಕೆಮನ್ ಚಟ ಹತ್ತಿಸಿಕೊಂಡಿರುವ ಕ್ರೀಡಾಪಟುಗಳು ಇದರಿಂದ ಸಕತ್ ಬೇಜಾರಿನಲ್ಲಿದ್ದಾರೆ.[ಅಂಕಿಯಲ್ಲಿ ರಿಯೋ ಒಲಿಂಪಿಕ್ಸ್ 2016 : 10 ಸಾವಿರ ಕ್ರೀಡಾಪಟುಗಳು]

ಆಗಸ್ಟ್ 5 ರಿಂದ ಆಗಸ್ಟ್ 21ರ ತನಕ ರಿಯೋ ಒಲಿಂಪಿಕ್ಸ್ 2016 ನಡೆಯಲಿದ್ದು, 10 ಸಾವಿರಕ್ಕೂ ಅಧಿಕ ಮಂದಿ ವಿವಿಧ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ. (ಒನ್ ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Olympic and world champion gymnast Kohei Uchimura of Japan almost paid a heavy price for downloading "Pokemon Go" game at the Rio Olympics 2016 in Brazil.
Please Wait while comments are loading...