ಕೋಟ್ಯಂತರ ಜನರ ಅಭಿಲಾಷೆ ಹೊತ್ತು ಫೈನಲ್‌ಗೆ ಸಿಂಧು ಲಗ್ಗೆ

Written By:
Subscribe to Oneindia Kannada

ರಿಯೋ ಡಿ ಜನೈರೊ, ಆಗಸ್ಟ್ 18: ಭಾರತದ ಹೆಮ್ಮೆಯ ಮಹಿಳಾ ಬಾಡ್ಮಿಂಟನ್ ತಾರೆ ಪಿವಿ ಸಿಂಧು ಸಾ‍ಧನೆ ಮೆರೆದಿದ್ದಾರೆ. ಒಲಿಂಪಿಕ್ಸ್ ಮಹಿಳಾ ಬಾಡ್ಮಿಂಟನ್ ವಿಭಾಗದಲ್ಲಿ ಪಿವಿ ಸಿಂಧು ಫೈನಲ್ ಗೇರಿದ್ದಾರೆ.

ಸೆಮಿಫೈನಲ್ ನಲ್ಲಿ ಜಪಾನ್ ನ ಒಕುಹಾರ ಅವರನ್ನು ಎರಡು ನೇರ ಸೆಟ್ ಗಳಿಂದ ಸೋಲಿಸಿ ಸಿಂಧು ಫೈನಲ್ ಗೆ ಏರಿದ್ದಾರೆ. ನೋಜೋಮಿ ಒಕುಹಾರಾ ಅವರನ್ನು ಸೋಲಿಸಿದ ಸಿಂಧು ಭಾರತಕ್ಕೆ ಚಿನ್ನದ ಆಸೆಯನ್ನು ಜೀವಂತವಾಗಿ ಇರಿಸಿದ್ದಾರೆ. ಸಿಂಧು ಚಿನ್ನಕ್ಕಾಗಿ ಸ್ಪೇನ್‌ ನ ಕರೊಲಿನಾ ಮರೀನ್‌ ಜತೆ ಸೆಣೆಸಲಿದ್ದಾರೆ.[ರಿಯೋ ಒಲಿಂಪಿಕ್ಸ್ : ಸಿಂಧು ಫೈನಲ್ ಪಂದ್ಯ ಯಾವಾಗ ಆರಂಭ?]

ರಿಯೋ ಒಲಿಂಪಿಕ್ಸ್ 2016 : ಗ್ಯಾಲರಿ || ವಿಶೇಷ ಪುಟ

pv sindhu
Photo Credit:

ಎರಡೇ ಸೆಟ್
ಪಿವಿ ಸಿಂಧು ಅವರು ಪ್ರೀ ಕ್ವಾರ್ಟರ್‌ ಫೈನಲ್‌, ಕ್ವಾರ್ಟರ್‌ ಫೈನಲ್‌ ಹಾಗೂ ಸೆಮಿಫೈನಲ್‌ ಹೋರಾಟಗಳನ್ನು 2 ಸೆಟ್ ಗೆ ಮುಗಿಸಿದ್ದು ವಿಶೇಷ. ಕೋಚ್ ಮತ್ತು ತಜ್ಞರ ಹೇಳಿಕೆ ಪಾಲಿಸಿದ ಸಿಂಧು ಆಟವನ್ನು ಮೂರನೇ ಸೆಟ್ ಗೆ ತೆಗೆದುಕೊಂಡು ಹೋಗುವ ತಾಪತ್ರಯಕ್ಕೆ ಹೋಗಲಿಲ್ಲ.

ಪಿವಿ ಸಿಂಧು ಅವರನ್ನು ಟ್ವೀಟ್ ಮಾಡುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದ್ದು ಇದೇ ಆಟವನ್ನು ಮುಂದುವರಿಸಿ ಎಂದು ಹಾರೈಸಿದ್ದಾರೆ. ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ಸಹ ಸಿಂಧು ಅವರನ್ನು ಅಭಿನಂದಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
In a historic moment for India, country's star shuttler PV Sindhu stormed into Women's Singles Final of Badminton at Rio Olympics here on Thursday (Aug 18).Sindhu defeated Japan's Nozomi Okuhara 21-19, 21-10 in the semi-final match to enter in the finals.
Please Wait while comments are loading...