ಒಲಿಂಪಿಕ್ಸ್ ನಲ್ಲಿ ಪದಕ ಗೆಲ್ಲದಿದ್ದರೂ, ಭಾರತ ಗೆದ್ದ ದೀಪಾ!

Posted By:
Subscribe to Oneindia Kannada

ರಿಯೋ ಡಿ ಜನೈರೋ, ಆಗಸ್ಟ್ 15: ಜಿಮ್ನಾಸ್ಟಿಕ್ ಪಟು ದೀಪಾ ಕರ್ಮಾಕರ್ ಫೈನಲ್ ಪ್ರವೇಶಿಸಿ ಐತಿಹಾಸಿಕ ಸಾಧನೆ ಮಾಡಿದ್ದೇ ಭಾರತದ ಪಾಲಿಗೆ ದೊಡ್ಡ ಪದಕವಾಗಿದೆ. ಕೋಟ್ಯಂತರ ಜನರ ನಿರೀಕ್ಷೆಗೆ ತಕ್ಕಂತೆ ದೀಪಾ ಅವರು ಪ್ರೂಡೊನೋವಾ ವಾಲ್ಟ್ ಸ್ಪರ್ಧೆಯಲ್ಲಿ ತಮ್ಮ ಜೀವ ಪಣಕ್ಕಿಟ್ಟು ಪ್ರದರ್ಶನ ನೀಡಿದರು. ಆದರೆ, ಪದಕ ಸ್ವಲ್ಪದರಲ್ಲೇ ಕೈತಪ್ಪಿ ಹೋಯಿತು.

ರಿಯೋ ಒಲಿಂಪಿಕ್ಸ್ 2016 : ಗ್ಯಾಲರಿ || ವಿಶೇಷ ಪುಟ

ಫೈನಲ್ ಗೂ ಮುನ್ನ ನಾನು ನರ್ವಸ್ ಆಗಿಲ್ಲ ಬದಲಾಗಿ ಪುಳಕಿತಗೊಂಡಿರುವೆ, ಮುಂದಿನ ಪಂದ್ಯದಲ್ಲಿ ಶಕ್ತಿಮೀರಿ ಪ್ರಯತ್ನ ಮಾಡಿ ನನ್ನಲ್ಲಿನ ಅತಿ ಉತ್ತಮ ಆಟ ಹೊರಹಾಕುವೆ' ಎಂದು ವಿಶ್ವಾಸದಿಂದ ನುಡಿದಿದ್ದ ದೀಪಾ ಅವರು ಈಗ ಭಾರತದ ಪಾಲಿಗೆ ಹೆಮ್ಮೆಯ ಪುತ್ರಿ ಎನಿಸಿದ್ದಾರೆ. ಹಲವಾರು ಯುವ ಪ್ರತಿಭೆಗಳಿಗೆ ಸ್ಫೂರ್ತಿಯಾಗಿದ್ದಾರೆ.[ರಿಯೋ ಅಥ್ಲೆಟಿಕ್ಸ್: ಭಾರತದ ಸಾಧನೆ ಶೂನ್ಯ]

Rio Olympics 2016: Gymnast Dipa Karmakar finishes fourth in vault final

23 ವರ್ಷ ವಯಸ್ಸಿನ ತ್ರಿಪುರಾ ಮೂಲದ ದೀಪಾ ಅವರು ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ಎಂಟು ಸ್ಪರ್ಧಿಗಳ ಪೈಕಿ ನಾಲ್ಕನೇ ಸ್ಥಾನ ಪಡೆದರು. ಎರಡು ಪ್ರಯತ್ನಗಳಲ್ಲಿ ಸರಾಸರಿ 15.066 ಅಂಕಗಳಿಸಿದ್ದು, ಕೇವಲ 0.15 ಅಂಕಗಳ ಅಂತರದಿಂದ ಕಂಚಿನ ಪದಕ ತಪ್ಪಿ ಹೋಯಿತು. ಸ್ವಿಟ್ಜರ್ಲೆಂಡ್ ನ ಗುಲಿಯಾ ಸ್ಟೇನ್‌ಗ್ರುಬೆರ್ 15.216 ಪದಕ ಕಸಿದುಕೊಂಡರು.[ಈಕೆಗೆ 41 ವಯಸ್ಸಾದ್ರು ಆಟ ಮಾತ್ರ ಕುಗ್ಗಿಲ್ಲ]

ಯುಎಸ್ಎ ನ ದಾಖಲೆಗಾರ್ತಿ ಸಿಮೊನ್ ಬೈಲ್ಸ್ (15.966 ) ಮತ್ತೊಮ್ಮೆ ಚಿನ್ನ ಗೆದ್ದರು. ರಷ್ಯಾದ ಪಸೇಕಾ ಎರಡನೇ ಸ್ಥಾನ ಗಳಿಸಿದರು. ದೀಪಾ ಅರ್ಹತಾ ಸುತ್ತಿನಲ್ಲಿ 14.850 ಅಂಕ ಗಳಿಸಿದ್ದರು. ಆದರೆ, ಫೈನಲ್ ನಲ್ಲಿ ಉತ್ತಮ ಸರಾಸರಿ ಹೊಂದಿದ್ದರೂ ಲ್ಯಾಂಡಿಂಗ್ ನಲ್ಲಿ ಸ್ವಲ್ಪ ತಪ್ಪಿದ್ದರಿಂದ ಅಂಕಗಳು ಕಡಿತಗೊಂಡಿತು.

1952 ರಿಂದ ಇಲ್ಲಿ ತನಕ 11 ಜನ ಭಾರತೀಯ ಪುರುಷ ಸ್ಪರ್ಧಿಗಳು ಒಲಿಂಪಿಕ್ಸ್ ಜಿಮ್ನಾಸ್ಟಿಕ್ಸ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಅದರೆ, ಮೊಟ್ಟ ಮೊದಲ ಬಾರಿಗೆ ಒಲಿಂಪಿಕ್ಸ್ ಗೆ ಅರ್ಹತೆ ಪಡೆದ ದೀಪಾ ಅವರು ಮೊದಲ ಪ್ರಯತ್ನದಲ್ಲೇ ಫೈನಲ್ ಗೇರಿ ನಾಲ್ಕನೇ ಸ್ಥಾನ ಗಳಿಸಿದ್ದು, ಅದರಲ್ಲೂ ಅತ್ಯಂತ ಕಠಿಣ ಸ್ಪರ್ಧೆ ಎನ್ನಲಾಗುವ ಪ್ರೊಡೊನೊವಾ ವಾಲ್ಟ್ ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದು, ಇಡೀ ವಿಶ್ವದ ಗಮನ ಸೆಳೆದಿದೆ. (ಒನ್ ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Indian woman gymnast Dipa Karmakar missed out on a historic medal in the vault competiton by a whisker as she finished a creditable fourth in the final of the Olympic Games here on Sunday.
Please Wait while comments are loading...