ನೇಪಾಳದ ಭೂಕಂಪದಿಂದ ಬಚಾವಾದ ಗೌರಿಕಾ, ರಿಯೋದ ಕಿರಿಯ ಕ್ರೀಡಾಪಟು

Posted By:
Subscribe to Oneindia Kannada

ಬೆಂಗಳೂರು, ಆಗಸ್ಟ್ 03: ರಿಯೋ ಒಲಿಂಪಿಕ್ಸ್ ​ನ ಅತ್ಯಂತ ಕಿರಿಯ ಕ್ರೀಡಾಪಟು ಎಂಬ ಹೆಗ್ಗಳಿಕೆಗೆ ನೇಪಾಳಾದ್ 13 ವರ್ಷ ಹುಡುಗಿ ಗೌರಿಕಾ ಸಿಂಗ್ ಪಾತ್ರರಾಗಿದ್ದಾರೆ. ಭೂಕಂಪದ ಭಯದಿಂದ ತತ್ತರಿಸಿದ್ದ ಈ ಬಾಲಕಿ, ಜೀವ ಉಳಿಸಿಕೊಂಡಿದ್ದೇ ಸಾಧನೆ. ಈಗ ಜಾಗತಿಕವಾಗಿ ಸುದ್ದಿಯಲ್ಲಿದ್ದಾರೆ.

ರಿಯೋ ಒಲಿಂಪಿಕ್ಸ್ ವಿಶೇಷ ಪುಟಕ್ಕಾಗಿ ಕ್ಲಿಕ್ಕಿಸಿ

ಈಜು ವಿಭಾಗದಲ್ಲಿ ಒಲಿಂಪಿಕ್​ನಲ್ಲಿ ಅರ್ಹತೆ ಪಡೆದಿರುವ 13 ವರ್ಷ 255 ದಿನದ ಈ ಬಾಲಕಿಯ ಸಾಧನೆಗೆ ಎಲ್ಲೆಡೆಯಿಂದ ಪ್ರಶಂಸೆಗಳ ಸುರಿಮಳೆ ಹರಿದು ಬರುತ್ತಿದೆ. [ಗ್ಯಾಲರಿ: ಒಲಿಂಪಿಕ್ಸ್ ಕ್ರೀಡಾಕೂಟ]

Meet earthquake survivor Gaurika Singh the youngest athlete at Rio Olympics

ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಗಳಿಸಿರುವ ಗೌರಿಕಾ ಅವರು 100 ಮೀಟರ್ ಬ್ಯಾಕ್ ಸ್ಟ್ರೋಕ್ ವಿಭಾಗದ ಸ್ಪರ್ಧೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. 68.12 ಸೆಕೆಂಡುಗಳ ಸಾಧನೆ ಹೊಂದಿದ್ದಾರೆ. [ಒಲಿಂಪಿಕ್ಸ್ ಲೈವ್ ಯಾವ ವಾಹಿನಿಯಲ್ಲಿ ನೋಡ್ಬಹುದು?]

ರಷ್ಯಾ ಹಾಗೂ ಕಝಾನದಲ್ಲಿ ನಡೆದ ವಿಶ್ವ ಚಾಂಪಯನ್​ಷಿಪ್​ನಲ್ಲಿ ಪದಕ ಬೇಟೆ ಆಡಿದ್ದಾರೆ. ಅಷ್ಟೇ ಅಲ್ಲ ಕಳೆದ ಫೆಬ್ರವರಿಯಲ್ಲಿ ಭಾರತದಲ್ಲಿ ನಡೆದ ದಕ್ಷಿಣ ಏಷ್ಯಾ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕಗಳಿಸಿದ್ದಾರೆ. [ಒಲಿಂಪಿಕ್ಸ್ 2016 : 10 ಸಾವಿರ ಕ್ರೀಡಾಪಟುಗಳು]

ಭೂಕಂಪದ ಅನುಭವ : ಲಂಡನ್​ ನಲ್ಲಿ ಹುಟ್ಟಿ ಬೆಳೆದ ಗೌರಿಕಾ ಅವರು ತನ್ನ ತಾಯಿ ಅರಿಮಾ ಹಾಗೂ ಸಹೋದರ ಸುರೇನ್ ಜತೆಗೆ ನೇಪಾಳಕ್ಕೆ ಆಗಮಿಸಿ, ಕಠ್ಮಂಡುವಿನಲ್ಲಿ ನೆಲೆಸಿದ್ದಾರೆ. 2015ರಲ್ಲಿ ನೇಪಾಳದಲ್ಲಿ ಸಂಭವಿಸಿದ ಭೀಕರ ಭೂಕಂಪ ಬಗ್ಗೆ ಕೇಳಿದರೆ ಇಂದಿಗೂ ಗೌರಿಕಾ ಬೆಚ್ಚುತ್ತಾರೆ.

ಭೂಕಂಪ ಸಂಭವಿಸಿದಾಗ ನಾವು 5ನೇ ಮಹಡಿಯಲ್ಲಿದ್ದೆವು, 10 ನಿಮಿಷಗಳ ಕಾಲ ಟೇಬಲ್ ವೊಂದರ ಕೆಳಗೆ ಎಲ್ಲರೂ ಕುಳಿತು ಜೀವ ಉಳಿಸಿಕೊಂಡೆವು. ನಾವು ಹೊಸ ಕಟ್ಟಡದಲ್ಲಿದ್ದರಿಂದ ಬಚಾವ್ ಆದೆವು. ಈಗಲೂ ಭೂಕಂಪದ ಆ ಕ್ಷಣ ನೆನಸಿಕೊಂಡರೆ ತಲ್ಲಣವಾಗುತ್ತದೆ ಎಂದು ಹೇಳಿದ್ದಾರೆ. 2015ರ ಜನವರಿ ಯಲ್ಲಿ ನೀಡಿದ ಸಂದರ್ಶನದ ವಿಡಿಯೋ ನೋಡಿ:

ತಂದೆ ಪರಾಸ್ ಅವರ ಸಾಮಾಜಿಕ ಕಾರ್ಯದಲ್ಲಿ ಕೂಡಾ ನೆರವಾಗುತ್ತಿರುವ ಗೌರಿಕಾ ಈಗ ನೇಪಾಳಿಗರ ಪಾಲಿಗೆ ಯುವ ತಾರೆಯಾಗಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
The youngest athlete to compete at the Rio Olympics 2016 is Nepalese swimmer 13-year-old Gaurika Singh.
Please Wait while comments are loading...