ರಿಯೋ ಅಥ್ಲೆಟಿಕ್ಸ್: ಮೊದಲ ದಿನ ಭಾರತದ ಸಾಧನೆ ಶೂನ್ಯ

Posted By:
Subscribe to Oneindia Kannada

ರಿಯೋ ಡಿ ಜನೈರೋ ಆಗಸ್ಟ್, 13: ರಿಯೋದಲ್ಲಿ ಅತ್ಯಧಿಕ ಸ್ವರ್ಣ ಪದಕ ಸ್ಪರ್ಧೆ ಹೊಂದಿರುವ ಅಥ್ಲೆಟಿಕ್ಸ್​ನ ಟ್ರ್ಯಾಕ್ ಆಂಡ್ ಫೀಲ್ಡ್ ಸ್ಪರ್ಧೆಗಳು ಶುಕ್ರವಾರ(ಆ.12) ರಿಂದ ಆರಂಭಗೊಂಡಿದ್ದು, ಮೊದಲ ದಿನದ ಅಥ್ಲೆಟಿಕ್ಸ್ ಗಳಲ್ಲಿ ಭಾರತ ವಾಶ್ ಔಟ್ ಆಗಿದೆ. ಹಲವು ವರ್ಷಗಳ ಬಳಿಕ ಒಲಿಂಪಿಕ್ ಕೂಟದ ಟ್ರ್ಯಾಕ್‌ ಮತ್ತು ಫೀಲ್ಡ್‌ ವಿಭಾಗದಲ್ಲಿ ಪದಕ ಗೆಲ್ಲಬೇಕೆಂಬ ಆಶಾಭಾವ ಇಟ್ಟುಕೊಂಡಿದ್ದ ಭಾರತಕ್ಕೆ ನಿರಾಸೆಯಾಗಿದೆ.

ರಿಯೋ ಒಲಿಂಪಿಕ್ಸ್ 2016 : ಗ್ಯಾಲರಿ || ವಿಶೇಷ ಪುಟ

ರಿಯೋ ಒಲಿಂಪಿಕ್ಸ್ ನಲ್ಲಿ 8ನೇ ದಿನ ಪ್ರಾರಂಭವಾದ ಟ್ರ್ಯಾಕ್‌ ಮತ್ತು ಫೀಲ್ಡ್‌ ವಿಭಾಗದಲ್ಲಿ ಪುರುಷರ ಡಿಸ್ಕ್‌ ಎಸೆತದ ಅರ್ಹತಾ ಸುತ್ತಿನ ಸ್ಪರ್ಧೆಯಲ್ಲಿ ಕನ್ನಡಿಗ ವಿಕಾಸ್ ಗೌಡ ‍‍ಔಟ್ ಆಗಿದ್ದಾರೆ.[ಚಿನ್ನದ ಮೀನು ಮೈಕಲ್ ಗೆ ಸೆಡ್ಡು, ಸ್ಕೂಲಿಂಗ್ ಗೆ ಚಿನ್ನ]

ಪುರಷರ ಉದ್ದ ಜಗಿತದಲ್ಲಿ ಅಂಕಿತ್ ಶರ್ಮ, ಗುಂಡು ಎಸೆತದಲ್ಲಿ ಮನಪ್ರೀತ್ ಕೌರ್, 400m Heat ನಲ್ಲಿ ಮಹಮ್ಮದ್ ಅನಾಸ್, 20ಕಿ.ಮೀ ನಡಿಗೆಯಲ್ಲಿ ಕೃಷ್ಟನ್ ಗಣಪತಿ, ಗುರುಮಿತ್ ಸಿಂಗ್, ಮನೀಶ್ ಸಿಂಗ್ ನಡೆಯಲಾಗಗದೆ ಎದಡವಿದರು. ಶೂಟಿಂಗ್ ನಲ್ಲಿ ಗಗನ್ ನಾರಂಗ್ ಹಾಗು ಚೈನ್ ಸಿಂಗ್ ಅರ್ಹತೆ ಗಿಟ್ಟಿಸಿಕೊಳ್ಳಲು ವಿಫಲರಾಗಿದ್ದಾರೆ.

ಇನ್ನು ಗುಂಪು ಆಟಗಳಲ್ಲಿ ಟೆನಿಸ್ ತಾರೆ ಸಾನಿಯಾ ಮಿರ್ಜಾ ಮತ್ತು ರೋಹನ್ ಬೋಪಣ್ಣ ಸೆಮೀಸ್ ತಲುಪಿದ್ದು ಪದಕ ಜಯಿಸುವ ಭರವಸೆ ಮೂಡಿಸಿದ್ದಾರೆ. ಬಾಕ್ಸಿಂಗ್ ನಲ್ಲಿ ವಿಕಾಸ್ ಕೃಷ್ಣ ಕ್ವಾರ್ಟರ್ ಫೈನಲ್ ಪ್ರವೇಶಿಸಿ ಪದಕದ ನಿರೀಕ್ಷೆ ಹುಟ್ಟಿಸಿದ್ದಾರೆ. ಪುರುಷರ ಹಾಕಿ ಕೆನಡಾ ವಿರುದ್ದದ ಪಂದ್ಯದಲ್ಲಿ ಡ್ರಾ ಸಾಧಿಸಿ ಕ್ವಾರ್ಟರ್ ಫೈನಲ್ ಅರ್ಹತೆ ಪಡೆದುಕೊಂಡಿದೆ.

ನಿರಾಸೆ ಮೂಡಿಸಿದ ಕನ್ನಡಿಗ ವಿಕಾಸ್ ಗೌಡ

ನಿರಾಸೆ ಮೂಡಿಸಿದ ಕನ್ನಡಿಗ ವಿಕಾಸ್ ಗೌಡ

ಡಿಸ್ಕಸ್ ಎಸೆತ ಸ್ಪರ್ಧೆಯಲ್ಲಿ ಬಿ ಗುಂಪಿನಲ್ಲಿದ್ದ 33 ವರ್ಷದ ಕನ್ನಡಿಗ ವಿಕಾಸ್ ಗೌಡ ಮೊದಲ ಎಸೆತದಲ್ಲಿ 57.59 ಮೀ. ಎಸೆದರು. ಎರಡನೇ ಎಸೆತದಲ್ಲಿ 58.99ದ ಸಾಧನೆ ತೋರಿ ತುಸು ಆಶಾಭಾವನೆ ಮೂಡಿಸಿದರೂ, ಆದರೆ, ಮೂರನೇ ಯತ್ನದಲ್ಲಿ 58.70ಕ್ಕೆ ಕುಸಿಯುತ್ತಲೇ ಸ್ಪರ್ಧೆಯಿಂದ ಹೊರನಡೆದರು.

ಸಾನಿಯಾ-ಬೋಪಣ್ಣ ಜೋಡಿ ಸೇಮಿಸ್ ನತ್ತ

ಸಾನಿಯಾ-ಬೋಪಣ್ಣ ಜೋಡಿ ಸೇಮಿಸ್ ನತ್ತ

ಸಾನಿಯಾ-ಬೋಪಣ್ಣ ಜೋಡಿ ಸೇಮಿಸ್ ನತ್ತ ಜೋಡಿ ಕ್ವಾರ್ಟರ್ ಫೈನಲ್​ನಲ್ಲಿ ಗ್ರೇಟ್ ಬ್ರಿಟನ್​ನ ಆಂಡಿ ಮರ್ರೆ ಹಾಗೂ ಹಿದರ್ ವಾಟ್ಸನ್ ಜೋಡಿಯನ್ನು 6-4, 6-4 ಅಂತರದಲ್ಲಿ ಸೋಲಿಸಿ ಸೆಮಿಫೈನಲ್ ಹಂತ ತಲುಪಿದ್ದಾರೆ. ಸೆಮಿಫೈನಲ್ ನಲ್ಲಿ ಗೆದ್ದರೆ ಪದಕ ಖಚಿತವಾಗಲಿದೆ. [ವಿವರ ಇಲ್ಲಿ ಓದಿ]

ಪದಕದ ನಿರೀಕ್ಷೆ ಹುಟ್ಟಿಸಿದ ವಿಕಾಸ್ ಕೃಷ್ಣನ್

ಪದಕದ ನಿರೀಕ್ಷೆ ಹುಟ್ಟಿಸಿದ ವಿಕಾಸ್ ಕೃಷ್ಣನ್

ಭಾರತದ ಬಾಕ್ಸಿಂಗ್ ಪಟು ವಿಕಾಸ್ ಕೃಷ್ಣನ್ ಅವರು 74 ಕೆಜಿ ವಿಭಾಗದ ಮಿಡ್ಲ್ ವೇಯ್ಟ್ ಬಾಕ್ಸಿಂಗ್ ನಲ್ಲಿ ಟರ್ಕಿಯ ಸಿಪಾಲ್ ಓಂಡರ್ ವಿರುದ್ಧ 3-0 ಅಂತರದಲ್ಲಿ ಸುಲಭ ಜಯ ದಾಖಲಿಸಿ ಕ್ವಾರ್ಟರ್ ಫೈನಲ್ ಹಂತ ತಲುಪಿದ್ದಾರೆ. ಕ್ವಾರ್ಟರ್ ಫೈನಲ್ ನಲ್ಲಿ ಉಜ್ಬೇಕಿಸ್ತಾನದ ಬೆಕ್ತೆಮಿರ್ ಮಿಲಿಕುಜಿವ್ ಅವರನ್ನು ಎದುರಿಸಲಿದ್ದಾರೆ.

ಡ್ರಾನಲ್ಲಿ ಅಂತ್ಯಕಂಡ ಭಾರತ V/S ಕೆನಡಾ ಹಾಕಿ ಪಂದ್ಯ

ಡ್ರಾನಲ್ಲಿ ಅಂತ್ಯಕಂಡ ಭಾರತ V/S ಕೆನಡಾ ಹಾಕಿ ಪಂದ್ಯ

ಭಾರತ-ಕೆನಡಾ ನಡುವಿನ ಹಾಕಿ ಪಂದ್ಯವು 2-2 ಗೋಲು ಗಳಿಸಿ ಡ್ರಾನಲ್ಲಿ ಅಂತ್ಯಗೊಂಡಿದೆ. ಆದರೂ 7 ಅಂಕಗಳಿಸಿರುವ ಭಾರತ, ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದು, ರಿಯೋನಲ್ಲಿ ಪದಕದ ಭರವಸೆಯನ್ನು ಹುಟ್ಟಿಸಿದೆ.

ಅಥ್ಲೆಟಿಕ್ಸ್ ನಲ್ಲಿ ಭಾರತದ ಸಾಧನೆ ಶೂನ್ಯ

ಅಥ್ಲೆಟಿಕ್ಸ್ ನಲ್ಲಿ ಭಾರತದ ಸಾಧನೆ ಶೂನ್ಯ

ಪುರುಷರ ಉದ್ದ ಜಿಗಿತದಲ್ಲಿ ಅಂಕಿತ್ ಶರ್ಮ, ಗುಂಡು ಎಸೆತದಲ್ಲಿ ಮನಪ್ರೀತ್ ಕೌರ್, 400 ಮೀ ಹೀಟ್ಸ್ ನಲ್ಲಿ ಮಹಮ್ಮದ್ ಅನಾಸ್, 20ಕಿ.ಮೀ ನಡಿಗೆಯಲ್ಲಿ ಕೃಷ್ಟನ್ ಗಣಪತಿ, ಗುರುಮಿತ್ ಸಿಂಗ್, ಮನೀಶ್ ಸಿಂಗ್ ನಡೆಯಲಾಗದೆ ಎಡವಿದ್ದರು.

ಗುರಿ ಹಿಡಿಯಲು ವಿಫಲರಾದ ಭಾರತದ ಶೂಟರ್ಸ್

ಗುರಿ ಹಿಡಿಯಲು ವಿಫಲರಾದ ಭಾರತದ ಶೂಟರ್ಸ್

50ಮೀ ರೈಫಲ್ ನಲ್ಲಿ ಗಗನ್ ನಾರಂಗ್ ಹಾಗು ಚೈನ್ ಸಿಂಗ್ ಫೈನಲ್ ಅರ್ಹತೆ ಗಿಟ್ಟಿಸಿಕೊಳ್ಳಲು ಎಡವಿದ್ದಾರೆ. ಇನ್ನು 25ಮೀ ರ್ಯಾಪಿಡ್ ಫೈಯರ್ ನಲ್ಲಿ ಗುರುಪ್ರೀತ್ ಸಿಂಗ್ ಮತ್ತು ಮಿರಾಜ್ ಅಹಮ್ಮದ್ ಈ ಎಲ್ಲ ಭಾರತದ ಶೂಟರ್ ಗಳ ಗುರಿ ತಪ್ಪಿ ನಿರಾಸೆ ಅನುಭವಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
On India's busiest day at the Rio Olympics so far, the team of Sania Mirza and Rohan Bopanna made it to the semi-finals of the mixed doubles event while boxer Vikas Krishan entered the quarter-finals in men's middleweight (75 kg) category.
Please Wait while comments are loading...