ರಿಯೋನಲ್ಲಿ ಆಗಸ್ಟ್ 11: 7 ಭಾರತೀಯ ಶಟ್ಲರ್​ಗಳು ಸ್ಪರ್ಧೆಗೆ

By: ಕ್ರೀಡಾ ಡೆಸ್ಕ್
Subscribe to Oneindia Kannada

ರಿಯೋ ಡಿ ಜನೈರೊ, ಆಗಸ್ಟ್ 11: ಭಾರತದ ಭರವಸೆಯ ಕ್ರೀಡಾಪಟುಗಳು ಪ್ರಸಕ್ತ ಒಲಿಂಪಿಕ್ಸ್​ನಲ್ಲಿ ನೀರಸ ಪ್ರದರ್ಶನ ನೀಡುವ ಮೂಲಕ ಕೋಟ್ಯಂತರ ಅಭಿಮಾನಿಗಳಿಗೆ ನಿರಾಸೆ ಉಂಟುಮಾಡಿದ್ದಾರೆ. 10 ದಿನಗಳ ಸಹಿ ಕಹಿಗಳ ನಂತರ ಇಂದು ಅ.11 ರಂದು ಬ್ಯಾಡ್ಮಿಟನ್ ಸೇರಿದಂತೆ ಇತರೆ ಸ್ಪರ್ಧೆಗಳಲ್ಲಿ ಭಾಗವಹಿಸಲಿದ್ದಾರೆ.

ರಿಯೋ ಒಲಿಂಪಿಕ್ಸ್ 2016 : ಗ್ಯಾಲರಿ || ವಿಶೇಷ ಪುಟ

ಒಲಿಂಪಿಕ್ಸ್ ಇತಿಹಾಸದಲ್ಲಿ ಅತ್ಯಧಿಕವೆನಿಸಿದ 7 ಭಾರತೀಯ ಶಟ್ಲರ್​ಗಳು ಈ ಬಾರಿ ಸ್ಪರ್ಧೆಯಲ್ಲಿರುವುದು ವಿಶೇಷ. ಶಟ್ಲರ್ ಸೈನಾ ನೆಹ್ವಾಲ್ ಲಂಡನ್​ನಲ್ಲಿ ಕಂಚು ಗೆಲ್ಲುವ ಮೂಲಕ ಸಮಾಧಾನ ಕಂಡಿದ್ದರು. ಆದರೆ, ಈ ಬಾರಿ ಚಿನ್ನ ಪದಕವನ್ನು ಜಯಿಸುವ ವಿಶ್ವಾಸದಲ್ಲಿದ್ದಾರೆ.

ಮಹಿಳಾ ಡಬಲ್ಸ್​ನಲ್ಲಿ ಜ್ವಾಲಾ ಗುಟ್ಟಾ ಹಾಗೂ ಅಶ್ವಿನಿ ಪೊನ್ನಪ್ಪ ಜೋಡಿ ಎ ಗುಂಪಿನಲ್ಲಿ ಸ್ಥಾನ ಪಡೆದಿದೆ. ಮೊದಲ ಪಂದ್ಯದಲ್ಲೇ ಅಗ್ರ ಶ್ರೇಯಾಂಕಿತ ಜಪಾನ್ ಜೋಡಿಯನ್ನು ಎದುರಿಸಲಿದ್ದಾರೆ.

ಪುರುಷರ ಡಬಲ್ಸ್​ನಲ್ಲಿ ಮನು ಅತ್ರಿ ಹಾಗೂ ಸಮಿತ್ ರೆಡ್ಡಿ ಜೋಡಿಯೂ ಗುರುವಾರ(ಆ.11) ಕಣಕ್ಕಿಳಿಯಲಿದೆ. ಪುರುಷರ ಸಿಂಗಲ್ಸ್​ನಲ್ಲಿ 9ನೇ ಶ್ರೇಯಾಂಕ ಕೆ. ಶ್ರೀಕಾಂತ್​ ಮೊದಲ ಪಂದ್ಯದಲ್ಲಿ ಮೆಕ್ಸಿಕೋದ ಲಿನೊ ಮುನೋಝ್ ರನ್ನು ಎದುರಿಸಲಿದ್ದಾರೆ.

Rio Olympics 2016 Day 7 (August 11): India's schedule in Brazil

ಆ.11 ಗುರುವಾರ ಭಾರತ ಆಡಲಿರುವ ಕ್ರೀಡೆಗಳು:

* ಗಾಲ್ಫ್: ಪುರುಷರ ವಿಭಾಗ 1ನೇ ಸುತ್ತು: ಎಸ್ ಎಸ್ ಪಿ ಚೌರಸ್ಯ-(ಸಂಜೆ 4ಕ್ಕೆ).

* ಮಹಿಳಾ ಬ್ಯಾಡ್ಮಿಂಟನ್ ಡಬಲ್ಸ್ ವಿಭಾಗ: ಜ್ವಾಲಾ ಗುಟ್ಟಾ ಹಾಗೂ ಅಶ್ವಿನಿ ಪೊನ್ನಪ್ಪ(ಭಾರತ) V/S ಜಪಾನ್ -(ಸಂಜೆ 4.30PM).

* ಪುರುಷರ ಬ್ಯಾಡ್ಮಿಂಟನ್ ಡಬಲ್ಸ್ ವಿಭಾಗ ಗ್ರೂಪ್ ಡಿ: ಮನು ಅತ್ರಿ ಹಾಗೂ ಸಮಿತ್ ರೆಡ್ಡಿ ಜೋಡಿ (5.30PM)

* ಮಹಿಳಾ ಬ್ಯಾಡ್ಮಿಂಟನ್ ಸಿಂಗಲ್ಸ್ ಗ್ರೂಪ್ ಜಿ:ಪಿ.ವಿ ಸಿಂಧು V/S ಲಾರಾ ಸರೋಸಿ (7.50PM).

* ಮಹಿಳಾ ಬ್ಯಾಡ್ಮಿಂಟನ್ ಸಿಂಗಲ್ಸ್ ಗ್ರೂಪ್ ಜಿ: ಸೈನಾ ನೆಹ್ವಾಲ್(ಭಾರತ) V/S ಲೋಹಾಯ್ನನಿ ವಿಸೆಂಟ್(ಬ್ರೆಜಿಲ್) (7.50PM).

* ಪುರುಷರ ಬ್ಯಾಡ್ಮಿಂಟನ್ ಸಿಂಗಲ್ಸ್ ಗ್ರೂಪ್ ಹೆಚ್: ಕೆ. ಶ್ರೀಕಾಂತ್​(ಭಾರತ) V/S ಲಿನೊ ಮುನೋಝ್(ಮೆಕ್ಸಿಕೋ), (ಆ.12, 5.35AM)

Rio Olympics 2016 Day 7 (August 11): India's schedule in Brazil

* ಆರ್ಚರಿ ಮಹಿಳಾ ಸಿಂಗಲ್ಸ್ ಕ್ವಾಟರ್ ಫೈನಲ್: ದೀಪಿಕಾ ಕುಮಾರಿ V/S ಯಾ -ಟಿಂಗ್ ಟಾನ್ ಚೈನೀಸ್ ತೈಪೆ (5.30PM).

* ಆರ್ಚರಿ ಮಹಿಳಾ ಸಿಂಗಲ್ಸ್ ಕ್ವಾಟರ್ ಫೈನಲ್: ಬೊಂಬಾಲ್ಯ ದೇವಿ V/S ಅಲೆಜಾಂದ್ರ ವಾಲೆನ್ಸಿಯಾ(ಮೆಕ್ಸಿಕೋ) (6.06PM).

* ಪುರುಷರ ಹಾಕಿ: ಭಾರತ V/S ನೆದರ್ ಲ್ಯಾಂಡ್ ( 7.30PM)

* ಮಹಿಳಾ ಹಾಕಿ: ಭಾರತ V/S ಯುಎಸ್ಎ (ಆ.12, 4AM).

* ಪುರುಷರ ಬಾಕ್ಸಿಂಗ್ 56ಕೆ.ಜಿ ವಿಭಾಗ: ಶಿವ ಥಾಪ V/S ರೋಬೇಯಿಸಿ ರಮಿರೇಜ್ (8PM).

* Artistic ಜಿಮ್ನಾಸ್ಟಿಕ್ಸ್: ಮಹಿಳೆಯರ ವೈಯಕ್ತಿಕ ಆಲ್ ರೌಂಡ್ ಫೈನಲ್ (12:30 AM IST Aug 12)

(ಒನ್ಇಂಡಿಯಾ ಸುದ್ದಿ)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Some of India's best athletes like shuttlers Saina Nehwal, PV Sindhu, Kidambi Srikanth along with boxer Shiva Thapa are going to be in action on the Thursday (Aug 11) to better country's medal prospects in the ongoing Rio Olympics 2016.
Please Wait while comments are loading...