ರಿಯೋ 2016: ಆ.10 ರಂದು ಭಾರತಕ್ಕೆ ತ್ರಿಬಲ್ ಧಮಾಕ!

By: ಕ್ರೀಡಾ ಡೆಸ್ಕ್
Subscribe to Oneindia Kannada

ರಿಯೋ ಡಿ ಜನೈರೊ, ಆಗಸ್ಟ್ 11: ರಿಯೋ ಒಲಿಂಪಿಕ್ಸ್ ನ 6ನೇ ದಿನ ಬುಧವಾರ ಭಾರತಕ್ಕೆ ಶುಭ ಬುಧವಾರವಾಗಿದೆ. ಪುರುಷರ 64 ಕೆ.ಜಿ ಬಾಕ್ಸಿಂಗ್ ವಿಭಾಗದಲ್ಲಿ ಭಾರತದ ಮನೋಜ್ ಕುಮಾರ್, ಆರ್ಚರಿಯಲ್ಲಿ ಬಿಲ್ಲುಗಾರ್ತಿ ದೀಪಿಕಾ ಕುಮಾರಿ ಮತ್ತು ಬೊಂಬಾಲ್ಯ ದೇವಿ ಈ ಮೂರು ಸ್ಪರ್ಧಿಗಳು ಪ್ರೀ ಕ್ವಾರ್ಟರ್ ಫೈನಲ್ ಗೆ ಪ್ರವೇಶ ಮಾಡುವ ಮೂಲಕ ಪದಕಗಳಿಸುವ ಭರವಸೆಯನ್ನು ಮೂಡಿಸಿದ್ದಾರೆ.

ರಿಯೋ ಒಲಿಂಪಿಕ್ಸ್ 2016 : ಗ್ಯಾಲರಿ || ವಿಶೇಷ ಪುಟ

ಪುರುಷರ ಲೈಟ್​ವೇಟ್ ಬಾಕ್ಸಿಂಗ್​ನ 32ನೇ ರೌಂಡ್​ನಲ್ಲಿ ಮನೋಜ್ ಕುಮಾರ್ ಎದುರಾಳಿ ಲಿಥುವೇನಿಯಾದ ಎವಲ್ಡಾಸ್​ ಪೆಟ್ರುಸ್ಕಾಸ್ ಅವರನ್ನು ಸೋಲಿಸುವ ಮೂಲಕ ಪ್ರೀ ಕ್ವಾಟರ್ ಫೈನಲ್ ಪ್ರವೇಶಿಸಿದ್ದಾರೆ. [ರಿಯೋನಲ್ಲಿ ಆಗಸ್ಟ್ 11: 7 ಭಾರತೀಯ ಶಟ್ಲರ್​ಗಳು ಸ್ಪರ್ಧೆಗೆ]

ಇದರಿಂದ ಆಗಸ್ಟ್ 10ರಂದು ಭಾರತದ ಸ್ಪರ್ಧಿಗಳು ಒಂದೇ ದಿನ ಪ್ರೀ ಕ್ವಾರ್ಟರ್ ಫೈನಲ್ ಗೆ ಲಗ್ಗೆ ಹಾಕಿರುವುದು ವಿಶೇಷವಾದ್ದರೆ ಮತ್ತೊಂದು ಕಡೆ ಮಹಿಳಾ ಹಾಕಿ ತಂಡ ಆಸೀಸ್ ವಿರುದ್ಧ 1-6 ಗೋಲುಗಳ ಅಂತರದಿಂದ ಹೀನಾಯ ಸೋಲು ಕಂಡಿದೆ. ಇನ್ನು ಶೂಟಿಂಗ್ ನಲ್ಲಿ ಜೀತು ರೈ ಹಾಗು ನಂಜಪ್ಪ ಫೈನಲ್ ಪ್ರವೇಶ ಮಾಡಲು ಎಡವಿದರು. ಇದರಿಂದ ಭಾರತದ ಕ್ರೀಡಾಭಿಮಾನಿಗಳಿಗೆ ಒಂದು ಕಡೆ ಸಿಹಿ ಆದರೆ ಮತ್ತೊಂದು ಕಡೆ ಕಹಿಯಾಗಿದೆ..

ಆರ್ಚರಿಯಲ್ಲಿ ಅಚ್ಚರಿ ಮೂಡಿಸಿದ ದೀಪಿಕಾ:

ಆರ್ಚರಿಯಲ್ಲಿ ಅಚ್ಚರಿ ಮೂಡಿಸಿದ ದೀಪಿಕಾ:

ಮಹಿಳೆಯರ ಆರ್ಚರಿ(ಬಿಲ್ಲುಗಾರಿಕೆ) ವಿಭಾಗದಲ್ಲಿ ಭಾರತದ ದೀಪಾ ಕುಮಾರಿ ಅವರು 1ನೇ ರೌಂಡ್ ನಲ್ಲಿ 27-26, 29-29, 30-27, 27-29, 29-29 ಅಂತರದಲ್ಲಿ ಜಾರ್ಜಿಯಾದ ಕ್ರಿಸ್ಟಿನೆ ಎಸೆಬುವಾ ಅವರ ವಿರುದ್ಧ ಜಯಗಳಿಸಿ ಅಚ್ಚರಿ ಮೂಡಿಸಿದರು. ನಂತರ ನಡೆದ 32ನೇ ರೌಂಡಿನಲ್ಲಿ ದೀಪಿಕಾ ಇಟಲಿಯ ಗೆಂಡಲಿನಾ ಸಾರಟೋರಿ ವಿರುದ್ಧ 27-26, 29-29, 30-27, 29-29, 29-29ರ ಅಂತರದಲ್ಲಿ ದೀಪಿಕಾ ಗೆಲುವು ಸಾಧಿಸಿ ಪ್ರೀ ಕ್ವಾಟರ್ ಫೈನಲ್ ಗೆ ಪ್ರವೇಶಿಸಿದರು

ಬೊಂಬಾಲ್ಯ ದೇವಿ ಪ್ರೀ ಕ್ವಾರ್ಟರ್ ಫೈನಲಿಗೆ

ಬೊಂಬಾಲ್ಯ ದೇವಿ ಪ್ರೀ ಕ್ವಾರ್ಟರ್ ಫೈನಲಿಗೆ

ಭಾರತದ ಬಿಲ್ಲುಗಾರ್ತಿ ಬೊಂಬಾಲ್ಯ ದೇವಿ ಅವರು 64ರ ಘಟ್ಟದ ಮೂರು ಸುತ್ತಿನಲ್ಲಿ 28-24, 27-23, 26-24 ಅಂಕಗಳೊಂದಿಗೆ ಲಾರೆನ್ಸ್ ಅವರನ್ನು ಮಣಿಸುವುದರ ಮೂಲಕಪ್ರೀ ಕ್ವಾರ್ಟರ್ ಫೈನಲ್ ಗೆ ಪ್ರವೇಶಿಸಿದ್ದಾರೆ.

ಮನೋಜ್ ಕುಮಾರ್ ಪಂಚಿಂಗ್

ಮನೋಜ್ ಕುಮಾರ್ ಪಂಚಿಂಗ್

ಪುರುಷರ ಲೈಟ್​ವೇಟ್ ಬಾಕ್ಸಿಂಗ್​ನ 32ನೇ ರೌಂಡ್​ನಲ್ಲಿ 29-28, 29-28, 28-29ರ ಅಂತರದಲ್ಲಿ ಮನೋಜ್ ಗೆಲುವು ದಾಖಲಿಸಿದರು. ಆಗಸ್ಟ್ 14ರಂದು ಪ್ರೀ ಕ್ವಾರ್ಟರ್ ಫೈನಲ್​ನಲ್ಲಿ ಉಜ್ಬೇಕಿಸ್ತಾನದ ಫಜುಲುದ್ದೀನ್​ಗೈಜ್ನಾಜರೋವರನ್ನು ಮನೋಜ್ ಕುಮಾರ್ ಎದುರಿಸಲಿದ್ದಾರೆ.

ಆಸೀಸ್ ವಿರುದ್ಧ ಸೋತ ಭಾರತದ ವನಿತೆಯರು

ಆಸೀಸ್ ವಿರುದ್ಧ ಸೋತ ಭಾರತದ ವನಿತೆಯರು

ಮಹಿಳೆಯ ಹಾಕಿಯಲ್ಲಿ ಭಾರತ ಆಸ್ಟ್ರೇಲಿಯ ವಿರುದ್ಧ 1-6 ಅಂತರ ಗೋಲುಗಳಿಂದ ಆಸೀಸ್ ಗೆ ಸುಲಭವಾಗಿ ತುತ್ತಾಯಿತು. ಇದರಿಂದ ಭಾರತದ ವನಿತೆಯರು ರಿಯೋನಿಂದ ಹೊರ ಹೋದರು.

ಕೈಕೊಟ್ಟ ಜೀತು ರೈ ಮತ್ತು ಪ್ರಕಾಶ್ ನಂಜಪ್ಪ

ಕೈಕೊಟ್ಟ ಜೀತು ರೈ ಮತ್ತು ಪ್ರಕಾಶ್ ನಂಜಪ್ಪ

ಬುಧವಾರ (ಆ.10) ರಂದು ನಡೆದ 50 ಮೀಟರ್ ಪುರುಷರ ವಿಭಾಗದ ಏರ್ ಪಿಸ್ತೂಲ್ ಶೂಟಿಂಗ್ ನಲ್ಲಿ ಜೀತು ರೈ ಮತ್ತು ಪ್ರಕಾಶ್ ನಂಜಪ್ಪ ಈ ಇಬ್ಬರು ಶೂಟರ್ ಗಳು 12 ಮತ್ತು 25 ಕ್ಕೆ ತೃಪ್ತಿ ಪಟ್ಟು ಫೈನಲ್ ಹಂತಕ್ಕೆ ವಿಫಲವಾಗಿದ್ದಾರೆ

ವೇಟ್ ಲಿಫ್ಟಿಂಗ್ ನಲ್ಲಿ ಭಾರತ ವೇಸ್ಟ್

ವೇಟ್ ಲಿಫ್ಟಿಂಗ್ ನಲ್ಲಿ ಭಾರತ ವೇಸ್ಟ್

ಪುರುಷರ 77 ಕೆ.ಜಿ ವಿಭಾಗ ಗ್ರುಪ್ B ಹಾಗು ಪುರುಷರ 77 ಕೆ.ಜಿ ವಿಭಾಗ ಗ್ರೂಪ್ A ವೇಟ್ ಲಿಫ್ಟಿಂಗ್ ನಲ್ಲಿ ಭಾತರದ ಸ್ಪರ್ಧಿಗಳು ವೇಟ್ ಎತ್ತಲಾಗದೆ ವೇಸ್ಟ್ ಆಗಿ ಹೊರ ಬಂದರು. ಚಿತ್ರದಲ್ಲಿ ಸತೀಶ್ ಕುಮಾರ್

ಜೂಡೊ ಪಟು ಅವತಾರ್ ಸಿಂಗ್

ಜೂಡೊ ಪಟು ಅವತಾರ್ ಸಿಂಗ್

ಪುರುಷರ 90 ಕೆಜಿ ವಿಭಾಗದ ಜೂಡೊನಲ್ಲಿ ಭಾರತದ ಜೂಡೊ ಪಟು ಅವತಾರ್ ಸಿಂಗ್ ನಿರಾಶ್ರಿತರ ತಂಡದ ಪಿ. ಮಿಸೆಂಗ ಅವರ ವಿರುದ್ಧ ಪರಾಭವಗೊಂಡರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Day 6 at the Rio Olympics 2016 proved to be a mixed bag of experiences for the Indian contingent. Shooter Jitu Rai, Archers Bombayla Devi and Deepika Kumari, weightlifter Satish Kumar, Manoj Kumar and the Indian women's hockey team were in action yesterday
Please Wait while comments are loading...