ರಿಯೋ ಒಲಿಂಪಿಕ್ಸ್ 2016: ಅ.08 ಭಾರತ ಆಡಲಿರುವ ಆಟೋಟಗಳು

Posted By:
Subscribe to Oneindia Kannada

ರಿಯೋ ಡಿ ಜನೈರೊ, ಅಗಸ್ಟ್ 08: ರಿಯೋ ಒಲಿಂಪಿಕ್ಸ್ ನಾಲ್ಕನೇ ದಿನವಾದ ಇಂದು (ಅ.08) ಭಾರತದ ವಿವಿಧ ಕ್ರೀಡೆಯ ಸ್ಪರ್ಧಾಳುಗಳು ಕಣಕ್ಕಿಳಿಯಲಿದ್ದಾರೆ. ರಿಯೋ ಆರಂಭವಾಗಿ ಮೂರು ದಿನಗಳು ಕಳೆದರೂ ಒಂದು ಕ್ರೀಡೆಯಲ್ಲೂ ಸಹ ಭಾರತ ಪದಕ ಜಯಿಸಲು ಸಾಧ್ಯವಾಗಿಲ್ಲ.

ಪದಕಗಳಿಸುವ ಭರವಸೆಯ ಆಟಗಾರರು ಸೋತು ನಿರಾಸೆಯನ್ನುಂಟು ಮಾಡಿದ್ದಾರೆ. ಆದರೆ, ಜಮ್ನಾಸ್ಟಿಕ್ ನಲ್ಲಿ ತ್ರಿಪುರದ ದೀಪಾ ಕರ್ಮಾಕರ್ ಅವರು ಮಾತ್ರ ಜಿಮ್ನಾಸ್ಟ್ ನಲ್ಲಿ ಫೈನಲ್ ಪ್ರವೇಶಿಸಿ ಇತಿಹಾಸ ನಿರ್ಮಿಸಿದ್ದಾರೆ. ಆಗಸ್ಟ್ 14ರಂದು ವಾಲ್ಟ್ ವಿಭಾಗದಲ್ಲಿ ಪದಕ ಬೇಟೆ ಮಾಡಲಿದ್ದಾರೆ.

Rio Olympics 2016 Day 4 (August 8): India's schedule in Brazil

ಇಂದು (ಅ.08)ರಂದು ಭಾರತಕ್ಕೆ ಮಹತ್ವ ದಿನವಾಗಿದೆ.ಇಂದು ನಡೆಯಲಿರುವ ಪಂದ್ಯಗಳಲ್ಲಿ ಮೊದಲ ಪಂದ್ಯದಲ್ಲಿ ಐರ್ಲೆಂಡ್ ವಿರುದ್ಧದ ಪಂದ್ಯದಲ್ಲಿ 3-2 ಅಂತರದಲ್ಲಿ ಜಯಗಳಿಸಿ ಆತ್ಮವಿಶ್ವಾಸದಲ್ಲಿರುವ ಭಾರತದ ಪುರುಷರ ಹಾಕಿ ತಂಡ ಚಾಂಪಿಯನ್ ಜರ್ಮನಿ ವಿರುದ್ಧ ಸೆಣಸಾಟ ನಡೆಸಲಿದೆ.

ಪುರುಷರ ಶೂಟಿಂಗ್ ನಲ್ಲಿ ಅಭಿನವ್ ಬಿಂದ್ರಾ, ಗಗನ್ ನಾರಂಗ್, ಮಹಿಳಾ ಆರ್ಚರಿ ವೈಯಕ್ತಿಕ ವಿಭಾಗದಲ್ಲಿ ಲಕ್ಷ್ಮೀರಾಣಿ ಮಾಝಿ, ಮಹಿಳೆಯರ 200 ಮೀಟರ್ ಫ್ರೀಸ್ಟೈಲ್ ಹೀಟ್ಸ್ ನಲ್ಲಿ ಶಿವಾನಿ ಕಟಾರಿಯಾ, ಪುರುಷರ 200 ಮೀಟರ್ ಬಟರ್ ಫ್ಲೈ ಹೀಟ್ಸ್ ನಲ್ಲಿ ಸಾಜನ್ ಪ್ರಕಾಶ್ ಕಣಕ್ಕಿಳಿಯಲಿದ್ದಾರೆ.

Rio Olympics 2016 Day 4 (August 8): India's schedule in Brazil

ವೇಳಾಪಟ್ಟಿ: (ಭಾರತೀಯ ಕಾಲಮಾನ ಪ್ರಕಾರ) ಎಲ್ಲಾ ಪಂದ್ಯಗಳು ಸ್ಟಾರ್ ನೆಟ್ವರ್ಕ್ ನಲ್ಲಿ ಪ್ರಸಾರ
* ಶೂಟಿಂಗ್ ಪುರುಷರ ವಿಭಾಗ: ಅಭಿನವ್ ಬಿಂದ್ರಾ, ಗಗನ್ ನಾರಂಗ್ ( 5.30PM & 8.30PM)

* ಆರ್ಚರ್ (ಬಿಲ್ಲುಗಾರಿಕೆ) ಮಹಿಳಾ ವೈಯಕ್ತಿಕ ವಿಭಾಗ: ಲಕ್ಷ್ಮೀರಾಣಿ ಮಾಝಿ (07.27PM)

* ಹಾಕಿ ಪುರುಷ: ಭಾರತ v/s ಜರ್ಮನ್ ಸೆಣಸಾಟ (07.30)

* ಹಾಕಿ ಮಹಿಳಾ: ಭಾರತ ಹಾಗು ಬ್ರಿಟನ್ ನಡುವೆ ಹಣಾಹಣಿ ( 2.30AM, ಅ.09)

* ಈಜು(ಸ್ವಿಮಿಂಗ್) ಮಹಿಳೆಯರ 200 ಮೀಟರ್ ಫ್ರೀಸ್ಟೈಲ್ ಹೀಟ್ಸ್ : ಶಿವಾನಿ ಕಟಾರಿಯಾ (09.32PM)

* ಈಜು(ಸ್ವಿಮಿಂಗ್) ಪುರುಷರ 200 ಮೀಟರ್ ಬಟರ್ ಫ್ಲೈ ಹೀಟ್ಸ್ : ಸಾಜನ್ ಪ್ರಕಾಶ್ (10.04PM)

(ಒನ್ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The fourth day at Rio Olympics features some of the best Indian athletes in action as they look forward to bag India's maiden medal at the Rio Olympics 2016.
Please Wait while comments are loading...