ರಿಯೋ 2016: ಪದಕದ ಖಾತೆ ತೆರೆಯಲು ಸಜ್ಜಾದ ಈ ಆಟಗಾರರು

By: ಕ್ರೀಡಾ ಡೆಸ್ಕ್
Subscribe to Oneindia Kannada

ಬೆಂಗಳೂರು, ಆಗಸ್ಟ್ 15: ರಿಯೋ ಒಲಿಂಪಿಕ್ಸ್ ನಲ್ಲಿ ಒಂದೇ ಒಂದು ಪದಕವನ್ನಾದರೂ ಕೊರಳಿಗೆ ಹಾಕಿಕೊಳ್ಳಲು ಭಾರತೀಯ ಕ್ರೀಡಾಪಟುಗಳು ಯತ್ನ ನಡೆಸುತ್ತಿದ್ದಾರೆ. ಆದರೆ ಆ ಅದೃಷ್ಟ ಕೈಗೂಡುತ್ತಿಲ್ಲ. ಭಾರತಕ್ಕೆ ಭಾನುವಾರ(ಆ.14) ಎರಡು ಪದಕಗಳು ಬರುವುದು ಖಚಿತ ಎಂದು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದರು. ಆದರೆ ಕೊನೆಗಳಿಗೆಯಲ್ಲಿ ಅಭಿಮಾನಿಗಳ ನಿರೀಕ್ಷೆಗಳನ್ನು ಹುಸಿಗೊಳಿಸಿದರು.

ರಿಯೋ ಒಲಿಂಪಿಕ್ಸ್ 2016 : ಗ್ಯಾಲರಿ || ವಿಶೇಷ ಪುಟ

ಜಿಮ್ನಾಸ್ಟಿಕ್ ನಲ್ಲಿ ಮೊದಲ ಬಾರಿಗೆ ಫೈನಲ್ ಪ್ರವೇಶಿಸಿದ್ದ ದೀಪಿಕಾ ಕರ್ಮಾಕರ್ ಪದಕದ ಭರವಸೆಯನ್ನು ಮೂಡಿಸಿದ್ದರು. ಆದರೆ ಕೆಲವೇ ಅಂತರದಲ್ಲಿ ಕಂಚಿನ ಪದಕದಿಂದ ವಂಚಿತರಾಗಿ ನಿರಾಸೆ ಮೂಡಿಸಿದ್ದರೆ, ಇನ್ನೊಂದು ಕಡೆ ಸಾನಿಯಾ ಹಾಗು ಬೋಪಣ್ಣ ಜೋಡಿ ಸಹ 3ನೇ ಸ್ಥಾನಕ್ಕೆ ನಡೆದ ಪಂದ್ಯದಲ್ಲಿ ಪರಾಭವಗೊಂಡು ಕಂಚಿನ ಪದಕ ವಂಚಿರಾದರು. ಇದರಿಂದ ಭಾನುವಾರ ಭಾರತಕ್ಕೆ ಕೈಬಂದ ತುತ್ತು ಬಾಯಿಗೆ ಬರಲಿಲ್ಲ ಎನ್ನುವಂತಾಯಿತು. [ಒಲಿಂಪಿಕ್ಸ್ ನಲ್ಲಿ ಪದಕ ಗೆಲ್ಲದಿದ್ದರೂ, ಭಾರತ ಗೆದ್ದ ದೀಪಾ!]

ಇದರಿಂದ ಭಾರತ ಈ ಬಾರಿಯ ರಿಯೋನಲ್ಲಿ ಪದಕದ ಖಾತೆ ತೆರೆಯುವುದು ಮರೀಚಿಕೆ ಮಾತ್ರ. ಪಿವಿ ಸಿಂಧು ಸೇರಿದಂತೆ ಶ್ರೀಕಾಂತ್, ಅಥ್ಲೆಟಕ್ ನಲ್ಲಿ ಲಲಿತಾ ಬಾಬರ್ ಕೊಂಚ ಭರವಸೆ ಮೂಡಿಸಿದ್ದಾದರೂ ಕೊನೆಯಲ್ಲಿ ಭಾರತವನ್ನು ಕೈಹಿಡಿಯಲಿದ್ದಾರೆಯೇ ಎಂಬುವುದನ್ನು ಕಾದು ನೋಡಬೇಕಿದೆ. ಪದಕಗಳ ಭರವಸೆ ಮೂಡಿಸಿದ್ದ ಆಟಗಾರರೇ ಮೊದಲ ಸುತ್ತಿನಲ್ಲಿ ರಿಯೋನಿಂದ ಹೊರ ನಡೆದಿದ್ದಾರೆ.

ಇನ್ನು ನಿರೀಕ್ಷೆಗಳನ್ನೇ ಇಟ್ಟಿರದ ಸ್ಪರ್ಧಿಗಳೇ ಕೊನೆಯ ಹಂತದ ವರೆಗೆ ಪದಕಕ್ಕಾಗಿ ಹೋರಾಟ ನಡೆಸುತ್ತಿದ್ದಾರೆ. ಯಾರು ಆ ಆಟಗಾರರು ಎಂಬುವುದನ್ನು ತಿಳಿಯಲು ಸ್ಲೈಡ್ ಗಳನ್ನು ಕ್ಲಿಕ್ಕಿಸಿ. . .

ಅಥ್ಲೆಟಕ್ ನಲ್ಲಿ ಲಲಿತಾ ಬಾಬರ್

ಅಥ್ಲೆಟಕ್ ನಲ್ಲಿ ಲಲಿತಾ ಬಾಬರ್

ಮಹಾರಾಷ್ಟ್ರದ ಲಲಿತಾ ಶಿವಾಜಿ ಬಾಬರ್ ಅವರು 9.19.76 ಸಮಯದೊಂದಿಗೆ ನಾಲ್ಕನೇ ಸ್ಥಾನ ಪಡೆದು ಫೈನಲ್ ಗೆ ಅರ್ಹತೆ ಪಡೆದುಕೊಂಡಿದ್ದಾರೆ. ಅಂತಿಮ ಘಟ್ಟವಷ್ಟೇ ಬಾಕಿ ಇದ್ದು, ಭಾರತದ ಪದಕದ ಖಾತೆ ತೆರೆಯಲು ತಯಾರಾಗಿದ್ದಾರೆ. ಫೈನಲ್ ಸ್ಪರ್ಧೆ ಆಗಸ್ಟ್ 15 ರಂದು ರಾತ್ರಿ 7.45 ಕ್ಕೆ ಇದೆ.

ಪ್ರೀ ಕ್ವಾರ್ಟರ್ ಫೈನಲ್ ನತ್ತ ಶ್ರೀಕಾಂತ್

ಪ್ರೀ ಕ್ವಾರ್ಟರ್ ಫೈನಲ್ ನತ್ತ ಶ್ರೀಕಾಂತ್

ಪುರುಷರ ಸಿಂಗಲ್ಸ್ ವಿಭಾಗದ ಪಂದ್ಯದಲ್ಲಿ ಶ್ರೀಕಾಂತ್ 21-6, 21-18ರ ನೇರ ಸೆಟ್ ಗಳಿಂದ ವಿಶ್ವ ಶ್ರೇಯಾಂಕ 3ನೇ ಸ್ಥಾನದಲ್ಲಿರುವ ಸ್ವೀಡನ್‌ನ ಹೆನ್ರಿ ಹರ್ಸ್ ಕೈನೆನ್ ವಿರುದ್ಧ ಜಯ ದಾಖಲಿಸಿ ಪ್ರೀ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ. ಆ. 16 ಬೆಳಿಗ್ಗೆ 5.30 ಕ್ವಾರ್ಟರ್ ಫೈನಲ್ ನಡೆಯಲಿದೆ.

ಪದಕದ ಭರವಸೆಯಲ್ಲಿ ಪಿವಿ ಸಿಂಧು

ಪದಕದ ಭರವಸೆಯಲ್ಲಿ ಪಿವಿ ಸಿಂಧು

ಮಹಿಳೆಯರ ಸಿಂಗಲ್ಸ್​ ಬ್ಯಾಡ್ಮಿಂಟನ್​ ನಲ್ಲಿ ಪಿ.ವಿ ಸಿಂಧು, ಕೆನಡಾದ ಮೈಕಲ್ ಲಿ ವಿರುದ್ದ 19-21, 21-15, 21-17 ಸೇಟ್ ​ಗಳಿಂದ ರೋಚಕ ಜಯ ದಾಖಲಿಸುವ ಮೂಲಕ ಪ್ರೀ ಕ್ವಾರ್ಟರ್​ ಫೈನಲ್​​ಗೆ ಪ್ರವೇಶ ಪಡೆದಿದ್ದಾರೆ. ಆಗಸ್ಟ್ 16 ಮಧ್ಯರಾತ್ರಿ 2AM ಕ್ವಾರ್ಟರ್ ಫೈನಲ್ ನಡೆಯಲಿದೆ.

ಬಾಕ್ಸರ್ ಪಟು ವಿಕಾಸ್ ಕೃಷ್ಣನ್

ಬಾಕ್ಸರ್ ಪಟು ವಿಕಾಸ್ ಕೃಷ್ಣನ್

75ಕೆ.ಜಿ ಪುರುಷರ ಬಾಕ್ಸಿಂಗ್ ನಲ್ಲಿ ಈಗಾಗಲೇ ಕ್ವಾರ್ಟರ್ ಫೈನಲ್ ತಲುಪಿರುವ ವಿಕಾಸ್ ಕೃಷ್ಣನ್ ಶತಾಯ ಗತಾಯವಾಗಿ ಪದಕ ಜಯಿಸಲು ಪ್ರಯತ್ನಿಸುತ್ತಿದ್ದಾರೆ. ಕ್ವಾರ್ಟರ್ ಫೈನಲ್ ನಲ್ಲಿ ಉಜ್ಬೇಕಿಸ್ತಾನ ಎದುರು ಆ.16 ಬೆಳಗ್ಗೆ 3:15AM ರಂದು ಕಣಕ್ಕಿಳಿಯಲಿದ್ದಾರೆ.

ಅಂತಿಮ ಹಣಾಹಣಿಯಲ್ಲಿ ರವೀಂದ್ರ ಖತ್ರಿ

ಅಂತಿಮ ಹಣಾಹಣಿಯಲ್ಲಿ ರವೀಂದ್ರ ಖತ್ರಿ

ಪುರುಷರ 85 ಕೆಜಿ 1/8 ಫೈನಲ್ ಕುಸ್ತಿಯಲ್ಲಿ ಭಾರತದ ಕುಸ್ತಿ ಪಟು ರವೀಂದ್ರ ಪದಕದ ಆಶಾಭಾವ ಹೊಂದಿದ್ದು, ಅಂತಿಮ ಪಂದ್ಯಕ್ಕಾಗಿ ಇಂದು(ಆ.15) ಸಂಜೆ (6.30PM) ಅದೃಷ್ಟ ಪರೀಕ್ಷೆಗೆ ಇಳಿಯಲಿದ್ದಾರೆ.

ಪದಕದ ಭರವಸೆಯ ಹುಸಿಗಿಳಿಸಿದ ಆಟಗಾರರು

ಪದಕದ ಭರವಸೆಯ ಹುಸಿಗಿಳಿಸಿದ ಆಟಗಾರರು

ಪುರುಷರ ಹಾಗು ಮಹಿಳೆಯರ ಟೆನಿಸ್ ಜೋಡಿ ಸಾನಿಯಾ ಮಿರ್ಜಾ, ರೋಹನ್ ಭೂಪಣ್ಣ, ಸೈನಾ ನೆಹ್ವಾಲ್, ಅಭಿನವ್ ಬಿಂದ್ರಾ, ಜೀತು ರೈ, ಸೇರಿದಂತೆ ಇನ್ನು ಕೆಲ ಸ್ಪರ್ಧಿಗಳು ಮೇಲೆ ಇಟ್ಟಿದ್ದ ಪದಕದ ನಿರೀಕ್ಷೆಯನ್ನು ಹುಸಿಗೊಳಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Gymnast Dipa Karmakar missed an Olympic bronze by finishing fourth in the women's vault event even as shuttler Saina Nehwal, the men's hockey team and tennis pair of Sania Mirza and Rohan Bopanna crashed out on a dismal day for India at the Rio Olympics 2016 here on Sunday (August 14). Rio Olympics 2016 Day 11 (August 15): India's schedule in Brazil
Please Wait while comments are loading...