ರಿಯೋ: ಕ್ರೀಡಾಪಟುಗಳಿಗೆ ಇಷ್ಟವಾದ 'ಗೇಮ್' ಗೆ ನಿರ್ಬಂಧ!

Posted By:
Subscribe to Oneindia Kannada

ಲಂಡನ್, ಆಗಸ್ಟ್ 02: ರಿಯೋ ಒಲಿಂಪಿಕ್ಸ್ ನಲ್ಲಿ ನೀವು ಏನು ನೋಡಲು ಬಯಸುತ್ತೀರಿ ಎಂದು ಕೇಳಿದರೆ ಅಭಿಮಾನಿಗಳು ಅಥ್ಲೆಟಿಕ್ಸ್, ಟೆನಿಸ್ ಮುಂತಾದವುಗಳನ್ನು ಹೆಸರಿಸಬಹುದು. ಕ್ರೀಡಾಳುಗಳ ನೆಚ್ಚಿನ ಗೇಮ್ ಬೇರೆ ಇದೆ. ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಆಧಾರಿತ ಪೋಕೆಮಾನ್ ಗೇಮ್ ಗೀಳಿನಲ್ಲಿ ಕ್ರೀಡಾಪಟುಗಳು ಮುಳುಗಿದ್ದಾರೆ. ಆದರೆ, ಈ ಬಾರಿ ರಿಯೋದಲ್ಲಿ ಪೋಕೆಮಾನ್ ಗೆ ನಿರ್ಬಂಧ ಹೇರಲಾಗಿದೆ.

ಯಾವುದೇ ಆಟಗಾರರು ಪೋಕೆಮಾನ್ ಗೇಮ್ ಆಡುವಂತಿಲ್ಲ ಎಂದು ರೊಯೋ ಆಯೋಜಕರು ಕಟ್ಟುನಿಟ್ಟಾಗಿ ಹೇಳಿದ್ದಾರೆ.ಜುಲೈ 31ರಂದು ನೂರಾರು ಕ್ರೀಡಾಳುಗಳು ಒಲಿಂಪಿಕ್ ಗ್ರಾಮ ರಿಯೋಕ್ಕೆ ತೆರಳಿ, ಒಟ್ಟು 31 ಅಪಾರ್ಟ್ಮೆಂಟ್ ಸೇರಿದ್ದಾರೆ. [ರಿಯೋ: ಸುಂದರ ಸ್ಟೇಡಿಯಂಗಳತ್ತ ಒಂದು ನೋಟ]

 Rio Olympics 2016: Athletes disappointed without Pokemon Go

ಕ್ರೀಡಾಪಟುಗಳು ಪೋಕೆಮಾನ್ ಗೇಮ್ ಆಡುವುದರಿಂದ ಗ್ರಾಮದ ಜನತೆಗೆ ತೊಂದರೆಯಾಗಲಿದೆ. ಆದ್ದರಿಂದ ಯಾರೂ ಈ ಗೇಮ್ ಆಡುವಂತಿಲ್ಲ. ನಿಯಮ ಮೀರಿ ಆಡಿದರೆ ಕ್ರಮ ಕೈಗೊಳ್ಳಲಾಗುವುದು ಎಂದು ಒಲಿಂಪಿಕ್ ಕಮಿಟಿ ಎಚ್ಚರಿಕೆ ನೀಡಿದೆ.[ರಿಯೋ ಒಲಿಂಪಿಕ್ಸ್ ವಿಶೇಷ ಪುಟ ಕ್ಲಿಕ್ಕಿಸಿ]

ಇದರಿಂದಾಗಿ ಕ್ರೀಡಾಪಟುಗಳು ನಿರಾಸೆ ವ್ಯಕ್ತಪಡಿಸಿದ್ದಾರೆ. ಆಸ್ಟ್ರೇಲಿಯಾ, ಅಮೆರಿಕ, ನ್ಯೂಜಿಲೆಂಡ್, ಜರ್ಮನಿ ಹಾಗೂ ಜಪಾನ್​ನಲ್ಲಿ ಕಾಲಿಟ್ಟಿರುವ ಈ ಗೇಮ್ ಇದೀಗ ಬ್ರೆಜಿಲ್​ಗೆ ಸಹ ತನ್ನ ಬಾಹುಗಳನ್ನು ವಿಸ್ತರಿಸಿದೆ.[ಒಲಿಂಪಿಕ್ಸ್ ನಲ್ಲಿ ಸ್ಪರ್ಧಿಸಲು ನರಸಿಂಗ್ ಅರ್ಹ]

ಗೂಗಲ್ ಪ್ಲೇ ಸ್ಟೋರ್ ಹಾಗೂ ಆಪಲ್ ಆಪ್ ಸ್ಟೋರ್​ನಲ್ಲಿ ಈ ಗೇಮ್ ಲಭ್ಯವಿದೆ. ಪೋಕೆಮಾನ್ ಎನ್ನುವುದು ಮೂಲತಃ ಜಪಾನೀಸ್ ಬ್ರಾಂಡ್ ​ಪಾಕೆಟ್ ಮಾನ್​ಸ್ಟರ್ ಎಂಬುದರ ಸಂಕ್ಷಿಪ್ತರೂಪ. ಪೋಕೆಮಾನ್ ಒಂದು ಸಹಕಾರ ಕೂಟವಾಗಿದ್ದು, ಇದರಲ್ಲಿ ನಿನ್ಟೆಂಡೊ, ಗೇಮ್ ಫ್ರಿಕ್ ಮತ್ತು ಕ್ರಿಯೆಚರ್ಸ್ ಎಂಬ ಮೂರು ಕಂಪನಿಗಳಿವೆ.[ಒಲಿಂಪಿಕ್ಸ್ ಪದಕ ವಿಜೇತರು: ಲಿಯಾಂಡರ್ ನಿಂದ ಸೈನಾ ತನಕ]

ಆದರೆ, ಬೇಡಿಕೆ ಹೆಚ್ಚುತ್ತಿರುವುದರಿಂದ ಬ್ರೆಜಿಲ್ ನಲ್ಲೂ ಪೋಕೆಮಾನ್ ಗೇಮ್ ಆಡಲು ವಿಶೇಷ ವರ್ಷನ್ ಬಿಡುಗಡೆ ಮಾಡುವಂತೆ ರಿಯೋ ಮೇಯರ್ ಎಡ್ವಾರ್ಡೊ ಪೇಯಸ್ ಅವರು ಪೋಕೆಮಾನ್ ಡೆವಲಪರ್ ಗಳಿಗೆ ಕೇಳಿಕೊಂಡಿದ್ದಾರೆ. (ಐಎಎನ್ಎಸ್)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Doping crisis and poor facilities might have shrouded Rio Olympics but it appears the inability to play artificial intelligence (AI)-based game Pokemon Go is bothering athletes the most.
Please Wait while comments are loading...