ಬಿರಿಯಾನಿ ಪ್ರಿಯೆ ಸಿಂಧು ಬಾಯಿಗೆ ಕರ್ನಾಟಕದ ಸಿಹಿ ತಿಂಡಿ

Posted By:
Subscribe to Oneindia Kannada

ಹೈದರಾಬಾದ್, ಆಗಸ್ಟ್ 22: ಮುತ್ತಿನ ನಗರಿ ಹೈದರಾಬಾದಿನಲ್ಲಿ ಇಂದು ಹಬ್ಬದ ವಾತಾವರಣ ಮನೆ ಮಾಡಿದೆ. ಹೆಮ್ಮೆಯ ಪುತ್ರಿ ಪುಸರ್ಲಾ ವೆಂಕಟ ಸಿಂಧು ಅವರಿಗೆ ಭವ್ಯ ಸ್ವಾಗತ ಸಿಕ್ಕಿದೆ. ಮುರ್ನಾಲ್ಕು ತಿಂಗಳಿನಿಂದ ಫುಲ್ ಡಯೆಟ್ ನಲ್ಲಿದ್ದ ಸಿಂಧು ಬಾಯಿಗೆ ಕರ್ನಾಟಕದ ಸಿಹಿ ತಿನಿಸು ಬಿದ್ದಿದೆ.

ರಿಯೋ ಒಲಿಂಪಿಕ್ಸ್ 2016 : ಗ್ಯಾಲರಿ || ವಿಶೇಷ ಪುಟ

ಹೌದು, ಪಿವಿ ಸಿಂಧು ಅವರು ಹೈದರಾಬಾದಿ ಬಿರಿಯಾನಿ ಜತೆ ತಿಂದದ್ದು, ನಮ್ಮ ಮೈಸೂರಿನ ಸಿಹಿ ಖಾದ್ಯ ಮೈಸೂರು ಪಾಕ್. ಸಿಂಧು ಅವರ ಅಮ್ಮ ವಿಜಯಾ ಅವರು ಮಗಳಿಗಾಗಿ ಈ ತಿನಿಸುಗಳನ್ನು ವಿಶೇಷವಾಗಿ ತಯಾರಿಸಿದ್ದಾರೆ. [ಪಿವಿ ಸಿಂಧುಗೆ ಬಿಎಂಡಬ್ಲೂ ಕಾರ್ ಗಿಫ್ಟ್]

Gopichanda and Sindhu in Hyderabad

21 ವರ್ಷ ವಯಸ್ಸಿನ ಸಿಂಧು ಅವರು ಹೈದರಾಬಾದಿನ ವಿಮಾನ ನಿಲ್ದಾಣದಿಂದ ಸೋಮವಾರ ಬೆಳಗ್ಗೆ ಕೋಕಾಪೇಟ್ ನಲ್ಲಿರುವ ತಮ್ಮ ನಿವಾಸಕ್ಕೆ ತೆರಳಿದ ಮೇಲೆ ಮೈಸೂರ್ ಪಾಕ್ ತಿಂದಿದ್ದಾರೆ. ನಂತರ ಮುಂಬೈ ನ ಬೆಸ್ಟ್ ಬಸ್ ಏರಿ ಗಚ್ಚಿಬೌಲಿ ಸ್ಟೇಡಿಯಂಗೆ ವಿಜಯೋತ್ಸವದಲ್ಲಿ ಪಾಲ್ಗೊಂಡಿದ್ದಾರೆ.[ಮೈಸೂರ್ ಪಾಕ್ ಜನ್ಮ ತಾಳಿದ ಸವಿಯಾದ ಕಥೆ]

PV Sindhu

'ಸಿಂಧುಗೆ ಮೈಸೂರ್ ಪಾಕ್ ತುಂಬಾ ಇಷ್ಟ, ಕೆಲ ತಿಂಗಳುಗಳಿಂದ ಫುಲ್ ಡಯೆಟ್ ನಲ್ಲಿದ್ದರು. ರಿಯೋಗಾಗಿ ತಯಾರಿ ನಡೆಸಿದ್ದು ಈಗ ಸಾರ್ಥಕವಾಗಿದೆ. ಕೋಚ್ ಪುಲ್ಲೇಲ ಗೋಪಿಚಂದ್ ಅವರ ಆದೇಶದಂತೆ ಬಿರಿಯಾನಿ, ಮೈಸೂರ್ ಪಾಕ್ ಸೇರಿದಂತೆ ಅನೇಕ ತಿಂಡಿಗಳನ್ನು ವರ್ಜಿಸಿದ್ದ ಸಿಂಧು ಈಗ ಅಮ್ಮನ ಪ್ರೀತಿಯ ಕೈರುಚಿ ಸವಿದಿದ್ದಾರೆ. ಜೊತೆಗೆ ನೆಚ್ಚಿನ ಐಸ್ ಕ್ರೀಮ್ ಕೂಡಾ ಸಿಂಧುಗಾಗಿ ಕಾದಿದೆ.

ಸೈನಾ ನೆಹ್ವಾಲ್, ಪಿವಿ ಸಿಂಧು, ಶ್ರೀಕಾಂತ್ ಕಿಡಾಂಬಿರಂಥ ಪ್ರತಿಭೆಗಳನ್ನು ಬೆಳಕಿಗೆ ತಂದ ಕೋಚ್ ಗೋಪಿಚಂದ್ ಅವರ ಕಠಿಣ ಆದೇಶ ಪಾಲನೆ ಮಾಡಿದ್ದರಿಂದಲೇ ಉತ್ತಮ ಸಾಧನೆ ಸಾಧ್ಯವಾಯಿತು ಎಂಬುದನ್ನು ಮರೆಯುವಂತಿಲ್ಲ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
At the champion's home in Hyderabad today, there is biryani and Mysore pak. Special treats for 21-year-old PV Sindhu who returned today with an Olympic Silver around her neck.
Please Wait while comments are loading...