ಬೆಂಗಳೂರು : ಅಥ್ಲೀಟ್ ಸುಧಾ ಸಿಂಗ್ ಗೆ ಝೀಕಾ ಭೀತಿ ಇಲ್ಲ

Posted By:
Subscribe to Oneindia Kannada

ಬೆಂಗಳೂರು, ಆಗಸ್ಟ್ 24: ರಿಯೋ ಒಲಿಂಪಿಕ್ಸ್ ಸ್ಪರ್ಧಿ ಸುಧಾ ಸಿಂಗ್ ಅವರಿಗೆ ಝೀಕಾ ವೈರಾಣು ಸೋಂಕು ತಗುಲಿಲ್ಲ, ಆದರೆ, ಎಚ್ 1 ಎನ್ 1 ಸೋಂಕು ಇರುವುದರಿಂದ ಪ್ರತ್ಯೇಕ ಕೋಣೆಯಲ್ಲಿ ಚಿಕಿತ್ಸೆ ಮುಂದುವರೆಸಲಾಗುವುದು ಎಂದು ಭಾರತೀಯ ಕ್ರೀಡಾ ಪ್ರಾಧಿಕಾರದ (ಸಾಯ್) ಡಾ. ಎಸ್.ಆರ್ ಸರಳಾ ಹೇಳಿದ್ದಾರೆ.

ರಿಯೋ ಒಲಿಂಪಿಕ್ಸ್ 2016 : ಗ್ಯಾಲರಿ || ವಿಶೇಷ ಪುಟ

ಬೆಂಗಳೂರಿನ ಫೋರ್ಟಿಸ್ ಆಸ್ಪತ್ರೆಯಲ್ಲಿ ಸುಧಾ ಸಿಂಗ್ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.ಮಂಡಿನೋವು ಹಾಗೂ ಜ್ವರದಿಂದ ಬಳಲುತ್ತಿದ್ದ ಸುಧಾ ಅವರು ಶನಿವಾರದಂದು ರಿಯೋದಿಂದ ಬೆಂಗಳೂರಿನ ಸಾಯ್ ಕೇಂದ್ರಕ್ಕೆ ಆಗಮಿಸಿದ್ದರು. ಜ್ವರ ಹೆಚ್ಚಾಗಿದ್ದರಿಂದ ಆರಂಭಿಕ ತಪಾಸಣೆ ನಡೆಸಿ ಬಳಿಕ ಫೊರ್ಟಿಸ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. [ಸುಧಾಸಿಂಗ್ ಚಿಕಿತ್ಸಾ ವೆಚ್ಚ ಸರ್ಕಾರವೇ ಭರಿಸಲಿದೆ]

Rio Olympian Sudha Singh tests positive for Swine Flu, not for Zika virus

30 ವರ್ಷದ ಸುಧಾ ಅವರು 3 ಸಾವಿರ ಮೀ. ಸ್ಟೀಪಲ್​ಚೇಸ್ ಸ್ಪರ್ಧಿ ಸುಧಾ ಅವರ ಚಿಕಿತ್ಸಾ ವೆಚ್ಚವನ್ನು ಕರ್ನಾಟಕ ಸರ್ಕಾರವೇ ಭರಿಸುತ್ತಿದೆ. ಮುಂದಿನ ಏಳು ದಿನಗಳ ಹೆಚ್ಚಿನ ನಿಗಾ ವಹಿಸಿ ಚಿಕಿತ್ಸೆ ನೀಡಲಾ ಗುತ್ತದೆ ಎಂದು ಫೋರ್ಟೀಸ್ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ. ಮಂಗಳವಾರ ಸಂಜೆ ರಾಜ್ಯ ಕ್ರೀಡಾ ಸಚಿವ ಪ್ರಮೋದ್ ಮಧ್ವರಾಜ್, ಸುಧಾ ಅವರನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿದರು.

ಎಲ್ಲಾ ಅಥ್ಲೀಟ್ ಗಳಿಗೂ ಪರೀಕ್ಷೆ: ಕರ್ನಾಟಕದ ಆರೋಗ್ಯ ಇಲಾಖೆ ಅಧಿಕಾರಿಗಳು ಫೋರ್ಟಿಸ್ ಆಸ್ಪತ್ರೆಗೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡಿದ್ದು, ಬ್ರೆಜಿಲ್ಲಿನ ರಿಯೋದಿಂದ ಬೆಂಗಳೂರಿಗೆ ಮರಳಿರುವ ಕ್ರೀಡಾಪಟುಗಳಿಗೆ ಝೀಕಾ ವೈರಾಣು ತಗುಲಿದೆಯೇ? ಎಂಬುದರ ಬಗ್ಗೆ ಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ ಎಂದರು.

ವಿಶ್ವ ಆರೋಗ್ಯ ಸಂಸ್ಥೆ ನೀಡಿರುವ ಎಚ್ಚರಿಕೆ ಸಂದೇಶದಂತೆ ಸುಧಾ ಅವರ ಜತೆಗಿದ್ದ ಇತರೆ ಅಥ್ಲೀಟ್ ಗಳಾದ ಓಪಿ ಜೈಶಾ, ಕವಿತಾ ರೌತ್ ಹಾಗೂ ಲಲಿತಾ ಬಾಬರ್ ಅವರಿಗೂ ಪರೀಕ್ಷೆಗೊಳಪಡುವಂತೆ ಸೂಚಿಸಲಾಗಿದೆ ಎಂದು ಡಾ. ಲೋಕೇಶ್ ಹೇಳಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Rio Olympian and Indian long distance runner Sudha Singh, who was undergoing treatment at a private hospital here for a suspected Zika virus infection, has tested positive for swine flu and will be out of action for at least 2 months, doctors said today (August 23).
Please Wait while comments are loading...