ರಿಯೋ : 36 ವರ್ಷಗಳ ಬಳಿಕ ಹಾಕಿ ಇಂಡಿಯಾದ ಸಾಧನೆ

Posted By:
Subscribe to Oneindia Kannada

ರಿಯೋ ಡಿ ಜನೈರೋ, ಆಗಸ್ಟ್ 12 : ಹಾಕಿ ಇಂಡಿಯಾದ ಪುರುಷರ ತಂಡ ಸರಿ ಸುಮಾರು 36 ವರ್ಷಗಳ ನಂತರ ಒಲಿಂಪಿಕ್ಸ್ ನಲ್ಲಿ ಮಹತ್ ಸಾಧನೆ ಮಾಡಿದೆ. ನೆದರ್ಲೆಂಡ್ಸ್ ತಂಡದ ವಿರುದ್ಧ ಸೋಲು ಕಂಡರೂ ಬಿ ಗುಂಪಿನಿಂದ ಕ್ವಾರ್ಟರ್ ಫೈನಲ್ ತಲುಪಿದೆ.

ರಿಯೋ ಒಲಿಂಪಿಕ್ಸ್ 2016 : ಗ್ಯಾಲರಿ || ವಿಶೇಷ ಪುಟ

ಶ್ರೀಜೇಶ್ ನಾಯಕತ್ವದ ತಂಡಕ್ಕೆ ಗುರುವಾರದಂದು 1- 2 ಅಂತರದಲ್ಲಿ ಸೋಲು ಎದುರಾಯಿತು. ಆದರೆ, ಬಿ ಗುಂಪಿನಲ್ಲಿ 6 ಅಂಕ ಪಡೆದಿರುವ ಹಾಕಿ ಇಂಡಿಯಾ ಲೀಗ್ ಹಂತ ದಾಟಿ ಮುಂದಕ್ಕೆ ಜಿಗಿಯುವ ಅರ್ಹತೆ ಪಡೆದುಕೊಂಡಿದೆ. [ವಿಡಿಯೋ ನೋಡಿ ಬೆಚ್ಚಬೇಡಿ, ಭಾರ ಎತ್ತುವ ಸ್ಪರ್ಧಿ ಕೈ ಮುರಿತ!]

Team Hockey

ಅರ್ಜೆಂಟೀನಾ ಹಾಗೂ ಜರ್ಮನಿ ನಡುವಿನ ಪಂದ್ಯ 4-4ಅಂತರದ ಡ್ರಾ ಕಂಡಿತು. ಇದರಿಂದ ಉಭಯ ತಂಡಗಳು ತಲಾ 10ಅಂಕ ಪಡೆದು ಅಗ್ರಸ್ಥಾನಕ್ಕೇರಿವೆ.

ಈ ಮೂಲಕ 8 ಬಾರಿ ಒಲಿಂಪಿಕ್ಸ್ ಚಾಂಪಿಯನ್ ಭಾರತ ಕ್ವಾರ್ಟರ್ ಫೈನಲ್ ತಲುಪಿದೆ. 1980ರ ಮಾಸ್ಕೋ ಒಲಿಂಪಿಕ್ಸ್ ನಂತರ ಹಾಕಿ ಇಂಡಿಯಾ ಪದಕ ಗೆದ್ದಿಲ್ಲ.

ರಿಯೋದಲ್ಲಿ ಕೊನೆ ಲೀಗ್ ಪಂದ್ಯದಲ್ಲಿ ಕೆನಡಾ ತಂಡವನ್ನು ಭಾರತ ಎದುರಿಸಲಿದೆ. ನೆದರ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಕನ್ನಡಿಗ ವಿಆರ್ ರಘುನಾಥ್ ಏಕೈಕ ಗೋಲು ಬಾರಿಸಿದರು. ಆದರೆ, ರಘುನಾಥ್ ಹಾಗೂ ಸುನಿಲ್ ಅವರ ಮೇಲೆ ಶಿಸ್ತು ಕ್ರಮ ಜರುಗಿಸಿ 10 ನಿಮಿಷಗಳ ಕಾಲ ಫೀಲ್ಡ್ ನಿಂದ ಹೊರಗುಳಿಯಬೇಕಾಯಿತು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The Indian men's hockey team reached the quarter-finals after a gap of 36 years at the ongoing Rio Olympics despite beaten 1-2 by the Netherlands for its second loss in four Pool B games.
Please Wait while comments are loading...