'ಸಾವಿನ ಓಟ' ಓಡಿ ಬದುಕುಳಿದಿದ್ದೇ ಹೆಚ್ಚು : ಓಪಿ ಜೈಶಾ

Posted By:
Subscribe to Oneindia Kannada

ರಿಯೋಡಿ ಜನೈರೊ, ಆಗಸ್ಟ್ 23: ರಿಯೋ ಒಲಿಂಪಿಕ್ಸ್ ನಲ್ಲಿ ಪದಕ ಗೆದ್ದವರ ಪರ ಜಯಘೋಶಗಳು, ಬಹುಮಾನಗಳು ಹರಿದು ಬರುತ್ತಿವೆ, ಆದರೆ, ಪ್ರತಿಯೊಬ್ಬ ಅಥ್ಲೀಟ್ ಗಳ ಹಿಂದೆ ಒಂದು ನೋವಿನ ಕಥೆ ಇರುತ್ತದೆ ಎಂಬುದನ್ನು ಮ್ಯಾರಾಥಾನ್ ಓಟಗಾರ್ತಿ ಓಪಿ ಜೈಶಾ ವಿವರಿಸಿದ್ದಾರೆ.

ಈ ಬಾರಿ ಸ್ಪರ್ಧೆಯಲ್ಲಿ 'ನಾನು ಬದುಕುಳಿದಿದ್ದೇ ಹೆಚ್ಚು, ನೀರು ಸಿಗದೆ ನಾನು ಅಲ್ಲೇ ಸಾಯುವ ಸ್ಥಿತಿ ತಲುಪಿದ್ದೆ' ಎಂದು ತಮ್ಮ ನೋವು ತೋಡಿಕೊಂಡಿದ್ದಾರೆ. [ಭಾರತದ ಅಥ್ಲೆಟಿಕ್ಸ್ ಕೋಚ್ ಬಂಧನ, ಬಿಡುಗಡೆ ಏಕೆ?]

ರಿಯೋ ಒಲಿಂಪಿಕ್ಸ್ 2016 : ಗ್ಯಾಲರಿ || ವಿಶೇಷ ಪುಟ

ರಿಯೋ ಒಲಿಂಪಿಕ್ಸ್‌ನ ಮಹಿಳೆಯರ ಮ್ಯಾರಥಾನ್‌ನಲ್ಲಿ 42.195 ಕಿ.ಮೀ.ದೂರವನ್ನು ಪೂರೈಸಿದ ಬಳಿಕ ಕುಸಿದು ಬಿದ್ದಿದ್ದರು. ಭಾರತೀಯ ಅಥ್ಲೀಟ್‌ಗೆ ನೀರು ಕೊಡಲು ಭಾರತದ ಯಾವುದೇ ಅಧಿಕಾರಿಗಳು ಇರಲಿಲ್ಲ ಎಂಬ ಆಘಾತಕಾರಿ ವಿಷಯ ಈಗ ಬಹಿರಂಗವಾಗಿದೆ. [ಮೊರಕ್ಕೋದ ಕಾಮುಕ ಬಾಕ್ಸರ್ ಗೆ 15 ದಿನ ಶಿಕ್ಷೆ]

I could have died at Rio Olympics, says Indian runner OP Jaisha

ಭಾರತದ ರನ್ನರ್ ಓ.ಪಿ. ಜೈಶಾ ಮ್ಯಾರಥಾನ್ ಓಟವನ್ನು ಪೂರೈಸಿದ ತಕ್ಷಣ ಪ್ರಜ್ಞೆ ತಪ್ಪಿ ಬಿದ್ದಿದ್ದರು. ಸುಮಾರು 3 ಗಂಟೆಗಳ ಕಾಲ ಪ್ರಜ್ಞೆ ಬಂದಿರಲಿಲ್ಲ. ಆ ಸಂದರ್ಭದಲ್ಲಿ ನೀರನ್ನು ಕೊಡಲು ಯಾವೊಬ್ಬ ಭಾರತದ ಅಧಿಕಾರಿಯೂ ಅಲ್ಲಿರಲಿಲ್ಲ ಎಂಬುದನ್ನು ಸ್ವತಃ ಜೈಶಾ ಬಹಿರಂಗಪಡಿಸಿದ್ದಾರೆ. [ರಿಯೋದಲ್ಲಿ ಸೋತು, ಸಿನ್ಸಿನಾಟಿಯಲ್ಲಿ ನಂ. 1 ಪಟ್ಟಕ್ಕೇರಿದ ಸಾನಿಯಾ]

ವ್ಯವಸ್ಥೆ ಸರಿಯಿಲ್ಲ: ಬೇರೆ ದೇಶದ ಓಟಗಾರರಿಗೆ ಪ್ರತಿ 2.5 ಕಿ.ಮೀ. ಕ್ರಮಿಸಿದ ಬಳಿಕ ದಣಿವಾರಿಸಿಕೊಳ್ಳಲು ನೀರಿನ ಬಾಟಲಿಗಳನ್ನು ನೀಡಲು ವ್ಯವಸ್ಥೆ ಮಾಡಲಾಗಿತ್ತು. ಆದರೆ, ಭಾರತದ ಯಾವೊಬ್ಬ ಅಧಿಕಾರಿಗಳು ನಿರ್ದಿಷ್ಟ ಸ್ಥಳದಲ್ಲಿರಲಿಲ್ಲ. ರಿಯೋ ಸಂಘಟಕರು ಪ್ರತಿ 8 ಕಿ.ಮೀ. ಸಾಗಿದ ಬಳಿಕ ಪೂರೈಸುತ್ತಿದ್ದ ನೀರಿನ ಬಾಟಲಿಗೆ ಕಾಯಬೇಕಾಗಿತ್ತು. ಸುಡುವ ಬಿಸಿಲಿನಲ್ಲಿ ನಾನು ಹೇಗೆ ಓಡಿದೆ ಎಂಬುದೇ ತಿಳಿಯುತ್ತಿಲ್ಲ ಎಂದು ಜೈಶಾ ಹೇಳಿದ್ದಾರೆ.

ನನಗೆ 30 ಕಿ.ಮೀ. ಸಾಗಿದ ಬಳಿಕ ಓಡಲು ಕಷ್ಟವಾಯಿತು. ವಿಪರೀತ ಉಷ್ಣಾಂಶ, ಬಾಯಾರಿಕೆಯಿಂದ ಕುಸಿದು ಬಿದ್ದ ನನಗೆ ಮ್ಯಾರಥಾನ್‌ನ ಸಹ ಓಟಗಾರರಾದ ಗೋಪಿ ಟಿ. ಹಾಗೂ ಕೋಚ್ ರಾಧಾಕೃಷ್ಣನ್ ನಾಯರ್ ನೆರವಿಗೆ ಬಂದರು. ನನಗೆ ಏಳು ಬಾಟಲಿ ಗ್ಲುಕೋಸ್‌ನ್ನು ನೀಡಲಾಯಿತಂತೆ, ನನಗೆ 2-3 ಗಂಟೆಗಳ ಬಳಿಕ ಪ್ರಜ್ಞೆ ಬಂದಿತ್ತು ಎಂದು ಜೈಶಾ ಹೇಳಿಕೊಂಡಿದ್ದಾರೆ.

ರಿಯೋ ದಲ್ಲಿ 2:47:19 ಸಮಯ ತೆಗೆದುಕೊಂಡು 89ನೇ ಸ್ಥಾನದಲ್ಲಿ ಮಹಿಲೆಯ ಮ್ಯಾರಥಾನ್ ಓಟ ಮುಗಿಸಿದ ಜೈಶಾ ಅವರು ಸಂಪೂರ್ಣವಾಗಿ ಚೇತರಿಸಿಕೊಳ್ಳಲು 2-3 ತಿಂಗಳ ಆಯುರ್ವೇದಿಕ್ ಚಿಕಿತ್ಸೆ ಅಗತ್ಯವಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
"I could have died there", said a distraught OP Jaisha as she recalled the women's marathon event at Rio Olympics during which she claimed she was not provided any water and energy drinks by the officials despite designated stations were given for India.
Please Wait while comments are loading...