ಕಾಲು ಮುರಿದರೂ ಸಮೀರ್ ಗೆ ಮುಂದಿನ ಒಲಿಂಪಿಕ್ಸ್ ಗುರಿ

Posted By:
Subscribe to Oneindia Kannada

ರಿಯೋ ಡಿ ಜನೈರೋ, ಅಗಸ್ಟ್ 08: ರಿಯೋನಲ್ಲಿ ಪದಕ ಕೈತಪ್ಪಿದರೇನಂತೆ 2020ರ ಜಪಾನ್ ನಡೆಯಲಿರುವ ಸಮ್ಮರ್ ಒಲಿಂಪಿಕ್ಸ್ ನಲ್ಲಿ ಪದಕ ಜಯಿಸುವೆ ಎಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಮೀರ್ ತಮ್ಮ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡುವ ಮೂಲಕ ಉತ್ಸಾಹ ಭರಿತ ಮಾತುಗಳನ್ನಾಡಿದ್ದಾರೆ. ಸಮೀರ್ ಅವರು ಅರ್ಹತಾ ಸುತ್ತಿನಲ್ಲಿ ಕಾಲು ಮುರಿದುಕೊಂಡು, ಆಸ್ಪತ್ರೆ ಸೇರಿದ್ದಾರೆ.

ರಿಯೋ ಒಲಿಂಪಿಕ್ಸ್ 2016 : ಗ್ಯಾಲರಿ || ವಿಶೇಷ ಪುಟ

ಶನಿವಾರ ನಡೆದ ಪುರುಷರ ಅರ್ಹತಾ ಸುತ್ತಿನ ವಾಲ್ಟ್ ವಿಭಾಗದ ಸ್ಪರ್ಧೆಯಲ್ಲಿ 26 ವರ್ಷದ ಸಮೀರ್ ಜಂಪ್ ಮಾಡಿ ಕಾಲು ನೆಲಕ್ಕೂರಿಸುವ ವೇಳೆ ಎಡ ಕಾಲಿನ ಮುರಿತಕ್ಕೊಳಗಾಗಿದ್ದರು. [ಮರಕಾನ ಸ್ಟೇಡಿಯಂನಲ್ಲಿ ಮನಸೆಳೆದ ಭಾರತದ ಕ್ರೀಡಾಪಡೆ]

French gymnast Samir vows to return for Japan Olympics

ಫ್ರಾನ್ಸ್‌ನ ಜಿಮ್ನಾಸ್ಟ್ ಸಮೀರ್ ಅವರು ಪ್ರದರ್ಶನ ವೇಳೆ, ಕೆಲ ಮೀಟರ್‌ ಓಡಿ ಬಂದು ಟೇಕ್‌ ಆಫ್ ಪಡೆದು ಮೇಲಕ್ಕೆ ಜಿಗಿದು ಗಾಳಿಯಲ್ಲಿ ಎರಡು ಸುತ್ತು ಲಾಗ ಹಾಕಿ, ಮೂರನೇ ಸುತ್ತಿಗೆ ನೆಲದ ಮೇಲೆ ನಿಲ್ಲಬೇಕಿದ್ದ ಕ್ಷಣದಲ್ಲಿಯೇ ಈ ಘಟನೆ ಸಂಭವಿಸಿತ್ತು.

ಕೂಡಲೇ ಸ್ಥಳಕ್ಕೆ ಧಾವಿಸಿದ ವೈದ್ಯಕೀಯ ಸಿಬ್ಬಂದಿಗಳ ಗಂಭೀರ ಗಾಯಗೊಂಡು ಬಿದ್ದಿದ್ದ ಸಮೀರ್ ಅವರನ್ನು ಸ್ಟ್ರೇಚರ್ ಮೂಲಕ ಚಿಕಿತ್ಸೆಗೆ ಸಾಗಿಸಿದರು. ಇದರಿಂದ ಸೈಯದ್​ರ ಚೊಚ್ಚಲ ಒಲಿಂಪಿಕ್ಸ್ ಪದಕ ಗೆಲ್ಲುವ ಕನಸು ಭಗ್ನವಾಯಿತು. [ಮೊದಲ ದಿನವೇ ವಿಶ್ವ ದಾಖಲೆ ಬರೆದ ವೀರ!]

French gymnast Samir vows to return for Japan Olympics

ಆದರೆ, 26 ವರ್ಷ ವಯಸ್ಸಿನ ಸಮೀರ್ ಅವರು 2020ರ ಟೋಕಿಯೋ ಒಲಿಂಪಿಕ್ಸ್ ನಲ್ಲಿ ಪಾಲ್ಗೊಂಡು ಪದಕ ಗೆಲ್ಲುವ ಉತ್ಸಾಹ ನನ್ನಲ್ಲಿದೆ ಎಂದು ಫೇಸ್ ಬುಕ್ ನಲ್ಲಿ ವಿಡಿಯೋ ಸಂದೇಶ ಹಾಕಿದ್ದಾರೆ.

ಸಮೀರ್ ಸ್ಥಿತಿ ಬಗ್ಗೆ ಪ್ರತಿಕ್ರಿಯಿಸಿದ ಲಂಡನ್ 2012ರ ಕಂಚಿನ ಪದಕ ವಿಜೇತ ಯುಎಸ್ ಎಯ ಡಾನೆಲ್ ಲೆವ್ಯಾ, ಸಮೀರ್ ರನ್ನು ನಾನು 14ವರ್ಷ ವಯಸ್ಸಿನಿಂದ ಬಲ್ಲೆ. ಉತ್ತಮ ಸ್ಪರ್ಧಿ, ಆಟದ ಮಧ್ಯೆ ಇಂಥ ಅವಘಡಗಳು ತುಂಬಾ ದುರದೃಷ್ಟಕರ. ಆದಷ್ಟು ಬೇಗ ಚೇತರಿಸಿಕೊಂಡು ಮುಂದಿನ ಒಲಿಂಪಿಕ್ಸ್ ನಲ್ಲಿ ಆತನನ್ನು ಕಾಣಲು ಬಯಸುತ್ತೇನೆ ಎಂದಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
French gymnast Samir Ait Said who horrificallysuffered leg break on vault during team preliminaries broke his leg in the team vault preliminaries vows to return for next Olympics at Japan.
Please Wait while comments are loading...