ರಿಯೋ 2016: ಫೈನಲ್ ತಲುಪಿ, ಇತಿಹಾಸ ನಿರ್ಮಿಸಿದ ದೀಪಾ

By: ಕ್ರೀಡಾ ಡೆಸ್ಕ್
Subscribe to Oneindia Kannada

ರಿಯೋ ಡಿ ಜನೈರೊ, ಅಗಸ್ಟ್ 08: ಒಲಿಂಪಿಕ್ಸ್ ಜಮ್ನಾಸ್ಟಿಕ್ ಸ್ಪರ್ಧೆಗೆ ಆಯ್ಕೆಯಾದ ಮೊದಲ ಭಾರತೀಯ ಜಿಮ್ನಾಸ್ಟ್ ದೀಪಾ ಕರ್ಮಾಕರ್ ಅವರು ತಮ್ಮ ಚೊಚ್ಚಲ ಒಲಿಂಪಿಕ್ಸ್ ನಲ್ಲೇ ಫೈನಲ್ ಪ್ರವೇಶಿಸಿದ್ದಾರೆ. ಆಗಸ್ಟ್ 14ರಂದು ಫೈನಲ್ ಪಂದ್ಯ ನಡೆಯಲಿದೆ.

ರಿಯೋ ಒಲಿಂಪಿಕ್ಸ್ 2016 : ಗ್ಯಾಲರಿ || ವಿಶೇಷ ಪುಟ

ದೀಪಾ ಅವರು ತಮ್ಮ ಮೊದಲ ಒಲಿಂಪಿಕ್ ಗೇಮ್ ನಲ್ಲಿ ವೈಯಕ್ತಿಕ ವಿಭಾಗದಲ್ಲಿ ಅಂತಿಮ ಸುತ್ತು ಪ್ರವೇಶಿಸುವ ಮೂಲಕ ಇತಿಹಾಸ ನಿರ್ಮಿಸಿದರು.ಅ.07ರಂದು ನಡೆದ ಅರ್ಹತಾ ಸುತ್ತಿನ ವಾಲ್ಟ್ ವಿಭಾಗದ ಸ್ಪರ್ಧೆಯಲ್ಲಿ ದೀಪಾ 8ನೇ ಸ್ಥಾನ ಪಡೆಯುವ ಮೂಲಕ ಫೈನಲ್ ಪ್ರವೇಶಿಸಿದರು.

ತ್ರಿಪುರಾ ಮೂಲದ ದೀಪಾ ಕರ್ಮಾಕರ್ ಅವರು ಒಲಿಂಪಿಕ್ಸ್ ಅರ್ಹತಾ ಸುತ್ತು ಪ್ರವೇಶಿಸಿದ ಮೊದಲ ಮಹಿಳಾ ಜಿಮ್ನಾಸ್ಟಿಕ್ ಆಗಿದ್ದಾರೆ. ತೀವ್ರ ಪೈಪೋಟಿ ಎದುರಿಸಿದ್ದ ದೀಪಾ ಅವರು ತಮ್ಮ ವಿನೂತನ ಶೈಲಿಯಲ್ಲಿ ಎರಡು ಪ್ರಯತ್ನಗಳ ನಂತರ 14.850 ಅಂಕಗಳ ಮೂಲಕ ಫೈನಲ್ ಗೆ ಲಗ್ಗೆ ಹಾಕುವ ಮೂಲಕ ಭಾರತಕ್ಕೆ ಮೊದಲ ಪದಕ ತಂದು ಕೊಡುವಲ್ಲಿ ಚಿತ್ತ ನೆಟ್ಟಿದ್ದಾರೆ.

Rio Olympics: Gymnast Dipa Karmakar 6th in vault qualifiers, in race for finals

ದೀಪಾ ಕರ್ಮಾಕರ್ ಅವರ ಅಂತಿಮ ಪಂದ್ಯ( ವಾಲ್ಟ್ ಫೈನಲ್) ಆಗಸ್ಟ್ 14 ರಾತ್ರಿ 11ಕ್ಕೆ ನಡೆಯಲಿದ್ದು, ಭಾರತದ ಕ್ರೀಡಾಭಿಮಾನಿಗಳ ಚಿತ್ತ ಈಗ ದೀಪಾ ಅವರ ಮೇಲಿದೆ. ಮಹಿಳಾ ವಿಭಾಗದ ಸ್ಪರ್ಧೆಗಳು ಬಾರ್, ಬೀಮ್, ವಾಲ್ಟ್ , ಎಕ್ಸರ್ಸೈಸ್ ಹಾಗೂ ವೈಯಕ್ತಿಕ ಆಲ್ ರೌಂಡ್ ವಿಭಾಗದಲ್ಲಿ ಸ್ಪರ್ಧೆ ನಡೆಯಲಿದೆ.

ಅರ್ಹತಾ ಸುತ್ತಿನಲ್ಲಿ ಯುಎಸ್ಎಯ ಸಿಮೊನ್ ಬೈಲ್ಸ್ 16.050 ಅಂಕ ಪಡೆದು ಮೊದಲಿಗರಾಗಿ ಅರ್ಹತೆ ಪಡೆದುಕೊಂಡರು. ಉತ್ತರ ಕೊರಿಯಾ, ಸ್ವಿಟ್ಜರ್ಲೆಂಡ್, ರಷ್ಯಾ, ಉಜ್ಬೇಕಿಸ್ತಾನ, ಕೆನಡಾ ಹಾಗೂ ಚೀನಾ ಸ್ಪರ್ಧೆ ನಂತರ ಭಾರತದ ದೀಪಾ ಆಯ್ಕೆಯಾಗಿದ್ದಾರೆ.

Rio Olympics: Gymnast Dipa Karmakar 6th in vault qualifiers, in race for finals

ದೀಪಾ 2014ರ ಗ್ಲಾಸ್ಗೊ ಕಾಮನ್‌ವೆಲ್ತ್ ಕ್ರೀಡಾಕೂಟದ ವಾಲ್ಟ್ ವಿಭಾಗದಲ್ಲಿ ಕಂಚು ಜಯಿಸಿ ಸಾಧನೆ ಮಾಡಿದ ಭಾರತದ ಮೊದಲ ಮಹಿಳಾ ಸ್ಪರ್ಧಿ ಎನಿಸಿದ್ದರು.


ರಿಯೋ ಒಲಿಂಪಿಕ್ಸ್ ನಲ್ಲಿ ಪದಕ ಜಯಿಸಿ ಭಾರತದ ಪದಕದ ಪಟ್ಟಿಯ ಖಾತೆಯನ್ನು ತೆರೆಯಲು ದೀಪಾ ಸಜ್ಜಾಗಿದ್ದಾರೆ. ಇವರು ಈ ಸಾಧನೆ ಮಾಡಲಿ ಎಂದು ಶುಭ ಹಾರೈಸೋಣ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Read in English: Dipa enters Olympic finals
English summary
Dipa Karmakar created history by becoming the first Indian gymnast to enter the Olympic final at the Rio Olympic Centre here on Aug 0)7.
Please Wait while comments are loading...