ಬ್ಯಾಡ್ಮಿಂಟನ್ ನಲ್ಲಿ ಭಾರತಕ್ಕೆ 'ಬೆಳ್ಳಿ' ಸಿಂಧೂರ

Written By:
Subscribe to Oneindia Kannada

ರಿಯೋ ಡಿ ಜನೈರೋ, ಆಗಸ್ಟ್ 19: ಭಾರತದ ಬಾಡ್ಮಿಂಟನ್ ತಾರೆ ಪಿವಿ ಸಿಂಧು ಅಂತಿಮವಾಗಿ ಬೆಳ್ಳಿಯೊಂದಿಗೆ ಭಾರತಕ್ಕೆ ಬರುತ್ತಿದ್ದಾರೆ. ಸ್ಪೇನಿನ ಕರೋಲಿನಾ ಮರೀನ್ ವಿರುದ್ಧ ನಡೆದ ರೋಚಕ ಫೈನಲ್ ಹಣಾಹಣಿಯಲ್ಲಿ ಸಿಂಧು ವಿರೋಚಿತ ಸೋಲು ಕಂಡಿದ್ದಾರೆ.

ಮೊದಲ ಸೆಟ್ ಗೆದ್ದ ಸಿಂಧು ಕೋಟ್ಯಂತರ ಜನರ ಆಸೆಯನ್ನು ನೆರವೇರಿಸುವ ತವಕದಲ್ಲಿದ್ದರು. ಆದರೆ ನಂತರ ತಿರುಗಿ ಬಿದ್ದ ಸ್ಪೇನಿನ ಎಡಗೈ ಆಟಗಾರ್ತಿ ಕರೋಲಿನಾ ಮರೀನ್ ಕೊನೆಯ ಎರಡು ಸೆಟ್ ಗಳನ್ನು ಗೆದ್ದು ಚಿನ್ನಕ್ಕೆ ಕೊರಳೊಡ್ಡಿದರು.[ಫೈನಲ್ ರೋಚಕ ಹಣಾಹಣಿಯ ಪೂರ್ಣ ಚಿತ್ರಣ]

sindhu

ಭಾರತದ 10ನೇ ಶ್ರೇಯಾಂಕಿತೆ ಪಿವಿ ಸಿಂಧು ಮೊದಲ ಸೆಟ್ ನ ಜಿದ್ದಾಜಿದ್ದಿನ ಹೋರಾಟದಲ್ಲಿ 21-19 ಅಂಕಗಳ ಅಂತರದಲ್ಲಿ ಜಯ ಕಂಡಿದ್ದರು. ಎರಡನೇ ಸೆಟ್ ನಲ್ಲಿ ಆಕ್ರಮಣಕಾರಿ ಆಟವಾಡಿದ ಮರಿನ್ 21-12 ಅಂಕಗಳಿಂದ ಸಿಂಧುರನ್ನು ಮಣಿಸಿದರು. ಮೂರನೇ ಸೆಟ್ ನಲ್ಲಿ ಸಿಂಧು ಅವರು ಪೈಪೋಟಿ ನೀಡಲು ಆರಂಭಿಸುವ ಮುನ್ನವೇ ಕರೋಲಿನಾ ವಿಜಯದ ಪಥ ದಾಟಿದ್ದರು.[ಪಿವಿ ಸಿಂಧು ಸಾಧನೆಯ ಹಿಂದೆ ಗುರು ಗೋಪಿಚಂದ್]

ಕ್ವಾರ್ಟರ್‌ ಫೈನಲಿನಲ್ಲಿ ಭಾರತದ ಸಿಂಧುಗೆ ಎದುರಾಗಿದ್ದು ವಿಶ್ವದ 2ನೇ ಶ್ರೇಯಾಂಕಿತೆ ಚೀನಾದ ವಾಂಗ್‌ ಯಿಹಾನ್‌. ಅಲ್ಲಿ ಗೆಲುವನ್ನು ದಾಖಲಿಸಿಕೊಂಡು ಸೆಮಿಫೈನಲ್ ನಲ್ಲಿ ಜಪಾನ್‌ ನ ನೋಜೋಮಿ ಒಕುಹಾರ ಅವರನ್ನು ಸೋಲಿಸಿ ಪದಕ ಪಕ್ಕಾ ಮಾಡಿಕೊಂಡಿದ್ದರು. ಫೂನಲಲ್ಲಿ ವಿರೋಚಿತ ಆಟ ನೀಡಿ ಬೆಳ್ಳಿಗೆ ಕೊರಳು ಒಡ್ಡುವುದರೊಂದಿಗೆ ಕೋಟ್ಯಂತರ ಭಾರತೀಯರ ಮನ ಗೆದ್ದರು

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
India's PV Sindhu today (Aug 19) created history by winning a silver medal in the Rio Olympics 2016 here at Riocentro Pavilion.Sindhu lost to world number one Carolina Marin of Spain in the gold medal match and settled with a silver medal. Sindhu has made the entire nation proud with her silver medal in Rio Olympics. Sindhu's silver is the second medal so far for India in the quadrennial event.
Please Wait while comments are loading...