ರಿಯೋ ಒಲಿಂಪಿಕ್ಸ್ : 7ನೇ ದಿನವೂ ಭಾರತೀಯರಿಗೆ ನಿರಾಸೆ

By: ಕ್ರೀಡಾ ಡೆಸ್ಕ್
Subscribe to Oneindia Kannada

ರಿಯೋ ಡಿ ಜನೈರೋ ಆಗಸ್ಟ್, 12 : ರಿಯೋ ಒಲಿಂಪಿಕ್ಸ್​ನ 7ನೇ ದಿನವೂ(ಗುರುವಾರ) ಭಾರತೀಯರು ಭಾರೀ ನಿರಾಸೆ ಅನುಭವಿಸಿದರು. ಸೈನಾ, ಶ್ರೀಕಾಂತ್​ ಹಾಗು ಸಿಂಧು ಗೆದ್ದಿದ್ದು ಬಿಟ್ಟರೆ ಉಳಿದವರೆಲ್ಲಾ ಸೋಲಿನ ರುಚಿ ಅನುಭವಿಸಿದರು. ಭಾರತದ ಪುರುಷರ ಹಾಕಿ ತಂಡ ಸೋತರೂ ಕ್ವಾರ್ಟ್​ರ್ ​ಫೈನಲ್ ಪ್ರವೇಶಿಸಿರುವುದೇ ಖುಷಿಯ ವಿಚಾರ.

ರಿಯೋ ಒಲಿಂಪಿಕ್ಸ್ 2016 : ಗ್ಯಾಲರಿ || ವಿಶೇಷ ಪುಟ

ಒಂದೇ ದಿನ 7 ಭಾರತೀಯ ಆಟಗಾರರು ಬ್ಯಾಡ್ಮಿಂಟನ್ ಕಣಕ್ಕಿಳಿದಿದ್ದರು. ಆದರೆ ಸೈನಾ ಹಾಗು ಸಿಂಧು ಹೊರತು ಪಡಿಸಿದರೆ ಉಳಿದ ಅಶ್ವಿನಿ ಪೊನ್ನೊಪ್ಪ ಮತ್ತು ಜ್ವಾಲಾ ಗುಟ್ಟಾ ಜೋಡಿ, ಪುರುಷರ ಡಬಲ್ಸ್​​ನಲ್ಲಿ ಭಾರತದ ಮನು ಅತ್ರಿ-ಸುಮೀತ್ ರೆಡ್ಡಿ ಜೋಡಿ ಸೋತು ಸುಣ್ಣಾದರು.

7 ದಿನಗಳು ಕಳೆದರೂ ರಿಯೋ ಒಲಿಂಪಿಕ್ಸ್​ನಲ್ಲಿ ಭಾರತಕ್ಕೆ ಒಂದೇ ಒಂದು ಪದಕ ಸಹ ಬಂದಿಲ್ಲ. ಪದಕ ಆಸೆ ಹುಟ್ಟಿಸಿದ್ದವರೆಲ್ಲಾ ಒಲಿಂಪಿಕ್ಸ್​ನಿಂದ ಒಬ್ಬಬ್ಬರಾಗಿ ಹೊರಬೀಳುತ್ತಿದ್ದಾರೆ. [ಬಾಡ್ಮಿಂಟನ್ ತಾರೆ ಸೈನಾ, ಸಿಂಧುಗೆ ಗೆಲುವಿನ ರುಚಿ]

ಭಾರತ ಪುರುಷರ ಹಾಕಿ ತಂಡ ಲೀಗ್​ ನಲ್ಲಿ ನೆದರ್​ಲ್ಯಾಂಡ್​ ವಿರುದ್ಧ 1-2 ಗೋಲುಗಳಿಂದ ಸೋಲು ಅನುಭವಿಸಿದೆ. ಆದರು ಟೀಮ್ ಇಂಡಿಯಾ ಕ್ವಾರ್ಟರ್​​ ಫೈನಲ್ ಪ್ರವೇಶಿಸುವ ಆಸೆ ಜೀವಂತವಾಗಿರಿಸಿಕೊಂಡಿದೆ.

ಮಹಿಳಾ ಸಿಂಗಲ್ಸ್ ಆರ್ಚರಿ ಪ್ರೀ ಕ್ವಾರ್ಟರ್​​ಫೈನಲ್​ನಲ್ಲಿ ದೀಪಿಕಾ ಕುಮಾರಿ ಸೋಲು ಅನುಭವಿಸಿ ಒಲಿಂಪಿಕ್ಸ್​ನಿಂದ ಹೊರಬಿದ್ದಿದ್ದಾರೆ. ಈ ಮೂಲಕ ಚೊಚ್ಚಲ ಒಲಿಂಪಿಕ್ಸ್​​​​​​​ ಪದಕ ಗೆಲ್ಲೋ ದೀಪಿಕಾ ಕನಸು ನುಚ್ಚುನೂರಾಯ್ತು.

ಸಿಂಗಲ್ಸ್​ ನಲ್ಲಿ ಪಿವಿ ಸಿಂಧುಗೆ ಜಯ

ಸಿಂಗಲ್ಸ್​ ನಲ್ಲಿ ಪಿವಿ ಸಿಂಧುಗೆ ಜಯ

ಮಹಿಳಾ ಬ್ಯಾಡ್ಮಿಂಟನ್ ಸಿಂಗಲ್ಸ್ ಮೊದಲ ಪಂದ್ಯದಲ್ಲಿ ಭಾರತದ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು ಹಂಗೇರಿಯಾದ ಸರೋಸಿ ಲೌರಾ ವಿರುದ್ಧ 21-8, 21-9 ಗೇಮ್​​ಗಳಿಂದ ಜಯ ದಾಖಲಿಸಿದ್ದಾರೆ.

ಮೊದಲ ಪಂದ್ಯದಲ್ಲಿ ಸೈನಾ ಶೈನ್

ಮೊದಲ ಪಂದ್ಯದಲ್ಲಿ ಸೈನಾ ಶೈನ್

ಲಂಡನ್ ಒಲಿಂಪಿಕ್ಸ್​ನ ಕಂಚಿನ ಪದಕ ವಿಜೇತೆ ಸೈನಾ ನೆಹ್ವಾಲ್ ಅವರು ಗುರುವಾರ ನಡೆದ ಸಿಂಗಲ್ಸ್ ಪಂದ್ಯದಲ್ಲಿ ಬ್ರೆಜಿಲ್ಲಿನ ಲೋಹೈನಿ ವಿಸೆಂಟೆ ವಿರುದ್ಧ 21-17, 21-17 ಅಂತರದಲ್ಲಿ ಗೆಲುವು ದಾಖಸಿದರು. ಎರಡನೇ ಪಂದ್ಯದಲ್ಲಿ ಆಗಸ್ಟ್ 14 ರಂದು ಉಕ್ರೇನ್ನಿನನ ಮರಿಯಾ ಉಲಿಟಿನಾ ಅವರನ್ನು ಸೈನಾ ಎದುರಿಸಲಿದ್ದಾರೆ.

ಶ್ರೀಕಾಂತ್​ಗೆ ಗೆಲುವು

ಶ್ರೀಕಾಂತ್​ಗೆ ಗೆಲುವು

ಭಾರತದ ಭರವಸೆಯ ಬ್ಯಾಡ್ಮಿಂಟನ್ ಪಟು ಕಿಡಂಬಿ ಶ್ರೀಕಾಂತ್ ಮೆಕ್ಸಿಕೋದ ಲಿಯೋ ಮುನೋಜ್ ವಿರುದ್ಧ ಗೆಲುವು ಸಾಧಿಸಿದ್ದಾರೆ. 21-11, 21-17ರ ನೇರ ಅಂತರದಲ್ಲಿ ಶ್ರೀಕಾಂತ್ ಗೆಲುವು ದಾಖಲಿಸಿದರು.

ಜ್ವಾಲಾ-ಅಶ್ವಿನಿ ಜೋಡಿ ಆಟ ನಡೆಯಲಿಲ್ಲ

ಜ್ವಾಲಾ-ಅಶ್ವಿನಿ ಜೋಡಿ ಆಟ ನಡೆಯಲಿಲ್ಲ

ಬ್ಯಾಡ್ಮಿಂಟನ್​​ ಮಹಿಳಾ ಡಬಲ್ಸ್ ನಲ್ಲಿ ಜ್ವಾಲಾ ಗುಟ್ಟಾ-ಅಶ್ವಿನಿ ಪೊನ್ನಪ್ಪ ಜೋಡಿ ಮೊದಲ ಪಂದ್ಯದಲ್ಲೇ ಪರಾಭವಗೊಂಡಿದೆ. ಜಪಾನ್​ನ ಮಿಸಾಕಿ ಮಾತ್ಸುಟೋಮೊ-ಅಯಾಕ ತಕಹಾಶಿ ಜೋಡಿ ವಿರುದ್ಧ 15-21, 10-21 ಸೆಟ್ ಗಳಿಂದ ಜ್ವಾಲಾ-ಅಶ್ವಿನಿ ಜೋಡಿ ಸೋಲು ಅನುಭವಿಸಿದ್ದಾರೆ. ಮೊದಲ ಗೇಮ್​ನಲ್ಲಿ ಸ್ವಲ್ಪ ಹೋರಾಟ ನಡೆಸಿದರಾದ್ರೂ ಸೆಕೆಂಡ್ ಗೇಮ್​ನಲ್ಲಿ ಭಾರತದ ಜೋಡಿ ಆಟ ನಡೆಯಲಿಲ್ಲ.

ಭಾರತ ಸೋತಿದ್ದರು ಕ್ವಾರ್ಟರ್ ಫೈನಲ್ ಗೆ

ಭಾರತ ಸೋತಿದ್ದರು ಕ್ವಾರ್ಟರ್ ಫೈನಲ್ ಗೆ

ಗುರುವಾರದಂದು ನೆದರ್ ಲ್ಯಾಂಡ್ ವಿರುದ್ದ ಭಾರತಕ್ಕೆ 1- 2 ಅಂತರದಲ್ಲಿ ಸೋಲು ಎದುರಾಯಿತು. ಆದರೆ, ಬಿ ಗುಂಪಿನಲ್ಲಿ 6 ಅಂಕ ಪಡೆದಿರುವ ಹಾಕಿ ಇಂಡಿಯಾ ಲೀಗ್ ಹಂತ ದಾಟಿ ಕ್ವಾರ್ಟರ್ ಫೈನಲ್ ಗೆ ಅರ್ಹತೆ ಪಡೆದುಕೊಂಡಿದೆ. ಅರ್ಜೆಂಟೀನಾ ಹಾಗೂ ಜರ್ಮನಿ ನಡುವಿನ ಪಂದ್ಯ 4-4ರಿಂದ ಡ್ರಾ ಕಂಡಿದ್ದು ಭಾರತ ತಂಡಕ್ಕೆ ವರದಾನವಾಯಿತು.

ಪ್ರೀ ಕ್ವಾರ್ಟರ್ ಫೈನಲ್ ನಲ್ಲಿ ಮುಗ್ಗರಿಸಿದ ದೇವಿ

ಪ್ರೀ ಕ್ವಾರ್ಟರ್ ಫೈನಲ್ ನಲ್ಲಿ ಮುಗ್ಗರಿಸಿದ ದೇವಿ

ಪದಕದ ಭರವಸೆ ಮೂಡಿಸಿದ್ದ ಬೊಂಬಲ ದೇವಿ, ಮಹಿಳಾ ಸಿಂಗಲ್ಸ್ ಆರ್ಚರಿ ಪ್ರೀ ಕ್ವಾರ್ಟರ್​​ಫೈನಲ್​ ದೇವಿ ಪರಾಭವಗೊಂಡು ನಿರಾಸೆ ಮೂಡಿಸಿದರು.. ಮೆಕ್ಸಿಕೊದ ಅಲೆಜಾಂಡ್ರ ವಲೆಂನ್ಸಿಯಾ ವಿರುದ್ಧ 2-6 ಅಂತರದಿಂದ ಸೋತು ಒಲಿಂಪಿಕ್ಸ್​​ನಿಂದ ನಿರ್ಗಮಿಸಿದರು

ಮನು ಅತ್ರಿ-ಸುಮೀತ್ ರೆಡ್ಡಿ ಜೋಡಿಗೆ ಸೋಲು

ಮನು ಅತ್ರಿ-ಸುಮೀತ್ ರೆಡ್ಡಿ ಜೋಡಿಗೆ ಸೋಲು

ಬ್ಯಾಡ್ಮಿಂಟನ್ ಪುರುಷರ ಡಬಲ್ಸ್​​ನಲ್ಲಿ ಭಾರತದ ಮನು ಅತ್ರಿ-ಸುಮೀತ್ ರೆಡ್ಡಿ ಜೋಡಿ ಸೋಲು ಅನುಭವಿಸಿದೆ. ಇಂಡೋನೇಷಿಯಾದ ಹೆಂಡ್ರ ಸತೈವಾನ್-ಮೊಹಮ್ಮದ್ ಅಶಾನ್​ ವಿರುದ್ಧ 18-21, 13-21 ಗೇಮ್​ಗಳಿಂದ ಭಾರತದ ಜೋಡಿ ಪರಾಭವಗೊಂಡಿತು.

ಶಿವ ಶಿವ ಅಂದ ಭಾರತದ ಶಿವಥಾಪ

ಶಿವ ಶಿವ ಅಂದ ಭಾರತದ ಶಿವಥಾಪ

ಪುರುಷರ ಬಾಕ್ಸಿಂಗ್ 56 ಕೆಜಿ ವಿಭಾಗದಲ್ಲಿ ಭಾರತದ ಶಿವಥಾಪ ಮೊದಲ ಸುತ್ತಿನಲ್ಲೇ ಸೋಲು ಅನುಭವಿಸಿದರು. ಕ್ಯೂಬಾದ ರೋಬೆಸಿ ರಮಿರೆಜ್​ ಕರಾಜನ್​ ಕೊಟ್ಟ ಪಂಚ್ ಗೆ 0-3 ಅಂತರದಿಂದ ಪರಾಭವಗೊಂಡರು. ಇದರಿಂದ ಶಿವಥಾಪ ಶಿವ ಶಿವ ಅಂದರು

ಗೋಲು ಬಾರಿಸಲು ತಿಣುಕಾಡಿದ ಭಾರತದ ವನಿತೆಯರು

ಗೋಲು ಬಾರಿಸಲು ತಿಣುಕಾಡಿದ ಭಾರತದ ವನಿತೆಯರು

ಭಾರತೀಯ ವನಿತೆಯರ ಹಾಕಿ ತಂಡ ಬಲಿಷ್ಠ ಅಮೇರಿಕಾ ವಿರುದ್ಧ ಪಂದ್ಯದಲ್ಲಿ ಒಂದೇ ಒಂದು ಗೋಲು ಮಾಡಲಾಗದೆ ಸೋಲೊಪ್ಪಿಕೊಂಡಿದೆ. ಭಾರತದ ಮೇಲೆ ಹಿಡಿತ ಸಾಧಿಸಿದ ಅಮೇರಿಕನ್ನರು 3 ಗೋಲು ದಾಖಲಿಸುವ ಮೂಲಕ ಪಂದ್ಯವನ್ನು ಸುಲಭವಾಗಿ ಗೆದ್ದುಕೊಂಡರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Rio de Janeiro, Aug 11: Star shuttlers Saina Nehwal and PV Sindhu were the lone bright spots as India endured another dismal day at the ongoing Rio Olympics with archers Deepika Kumari and Laishram Bombayla Devi crashing out while the men's hockey team went down fighting to the Netherlands here on Thursday (Aug 11).
Please Wait while comments are loading...